ಅಹ್ಮದಾಬಾದ್: ಸರಣಿ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೂ ತಂಡದ ಸ್ಟಾರ್ ಬ್ಯಾಟ್ಸ್ಮನ್ ಡೇವಿಡ್ ಮಲನ್ ವೈಯಕ್ತಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
3ನೇ ಕ್ರಮಾಂದಲ್ಲಿ ಬ್ಯಾಟ್ ಮಾಡಿದ ಮಲನ್ 46 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 68 ರನ್ಗಳಿಸಿದರು. ಈ ಪಂದ್ಯದಲ್ಲಿ 65 ರನ್ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 1000 ರನ್ ಪೂರೈಸಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು.
ಡೇವಿಡ್ ಮಲನ್ 24 ಟಿ20 ಪಂದ್ಯಗಳಿಂದ 1000 ರನ್ ಸಿಡಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಮ್ 26 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 27 , ರಾಹುಲ್ ಮತ್ತು ಆಸೀಸ್ ನಾಯಕ ಆ್ಯರೋನ್ ಫಿಂಚ್ ತಲಾ 29 ಇನ್ನಿಂಗ್ಸ್ಗಳಲ್ಲಿ 1000ರನ್ ಪೂರೈಸಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ಮೇಲೆ ಭಾರತದ ಸವಾರಿ: 3-2 ಅಂತರದಿಂದ ಟಿ-20 ಸರಣಿ ಗೆದ್ದ ಕೊಹ್ಲಿ ಪಡೆ