ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್‌ಸಿಬಿ ಆಡಿರುವ ಎಲ್ಲ ಪಂದ್ಯಗಳಲ್ಲೂ ಸೋಲು ಕಂಡು ಹೀನಾಯ ಮುಖಭಂಗಕ್ಕೊಳಗಾಗಿದೆ. ಇದರ ಮಧ್ಯೆ ತಂಡಕ್ಕೆ ಸೇರ್ಪಡೆಗೊಂಡಿರುವ ವೇಗದ ಬೌಲರ್ ಒಬ್ಬ ಭರವಸೆಯ ಮಾತುಗಳನ್ನಾಡಿದ್ದಾರೆ.
-
Long time, no see. Welcome back. 😎 #playBold pic.twitter.com/QOmXUi9CoM
— Royal Challengers (@RCBTweets) April 12, 2019 " class="align-text-top noRightClick twitterSection" data="
">Long time, no see. Welcome back. 😎 #playBold pic.twitter.com/QOmXUi9CoM
— Royal Challengers (@RCBTweets) April 12, 2019Long time, no see. Welcome back. 😎 #playBold pic.twitter.com/QOmXUi9CoM
— Royal Challengers (@RCBTweets) April 12, 2019
ಗಾಯಗೊಂಡಿರುವ ವೇಗಿ ನೇಥನ್ ಕೌಲ್ಟರ್ ನೇಲ್ ತಂಡದಿಂದ ಹೊರಬಿದ್ದಿದ್ದು ಅವರ ಜಾಗಕ್ಕೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಐಪಿಎಲ್ ಹರಾಜು ಪ್ರಕ್ರಿಯೆ ವೇಳೆ ಸ್ಟೇನ್ ಅನ್ಸೋಲ್ಡ್ ಆಗಿದ್ದರು. ಆದರೆ ಇದೀಗ ಆರ್‌ಸಿಬಿ ಇವರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇದೇ ವೇಳೆ ಭರವಸೆಯ ಮಾತಗಳನ್ನಾಡಿರುವ ಸ್ಟೇನ್, ಆರ್‌ಸಿಬಿ ತಂಡ ಈ ಸಲದ ಆವೃತ್ತಿಯಲ್ಲಿ ಪ್ಲೇ-ಆಫ್ಗೆ ಲಗ್ಗೆಹಾಕಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ನಾಳೆ ಕಿಂಗ್ಸ್ ಇವೆಲೆನ್ ಪಂಜಾಬ್ ಪರ ಆರ್‌ಸಿಬಿ ತಂಡ ಸೆಣಸಾಟ ನಡೆಸಲಿದೆ.
2016ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದ ಸ್ಟೇನ್ ಇದಕ್ಕೂ ಮೊದಲು 2008 ಹಾಗೂ 2010ರಲ್ಲಿ ಆರ್‌ಸಿಬಿ ಪರ ಆಡಿ 27 ವಿಕೆಟ್ ಕಬಳಿ ಗಮನ ಸೆಳೆದಿದ್ದರು.