ಕೇಪ್ಟೌನ್: ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ.
ಹಿರಿಯ ವೇಗಿ ಸ್ಟೈನ್ ಈಗಾಗಲೆ ಟೆಸ್ಟ್ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಪರ ಅಧಿಕ ವಿಕೆಟ್ ಪಡೆದಿರುವ ಬೌಲರ್ ಎನಿಸಿಕೊಂಡಿದ್ದಾರೆ. ಇದೀಗ ಬುಧವಾರ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್ ವಿಕೆಟ್ ಪಡೆಯುವ ಮೂಲಕ ಟಿ20ಯಲ್ಲಿ ಅಧಿಕ ವಿಕೆಟ್ ಪಡೆದ ಹರಿಣ ಪಡೆಯ ಬೌಲರ್ ಎನಿಸಿಕೊಂಡಿದ್ದಾರೆ.
-
Is that #1 even a surprise? 🙄
— Cricket South Africa (@OfficialCSA) February 12, 2020 " class="align-text-top noRightClick twitterSection" data="
Anyway. congratulations, @DaleSteyn62 on becoming 🇿🇦's leading T20 wicket-taker 👏
Take a bow! #ProteaFire #SAvENG pic.twitter.com/IsJhT5OBjY
">Is that #1 even a surprise? 🙄
— Cricket South Africa (@OfficialCSA) February 12, 2020
Anyway. congratulations, @DaleSteyn62 on becoming 🇿🇦's leading T20 wicket-taker 👏
Take a bow! #ProteaFire #SAvENG pic.twitter.com/IsJhT5OBjYIs that #1 even a surprise? 🙄
— Cricket South Africa (@OfficialCSA) February 12, 2020
Anyway. congratulations, @DaleSteyn62 on becoming 🇿🇦's leading T20 wicket-taker 👏
Take a bow! #ProteaFire #SAvENG pic.twitter.com/IsJhT5OBjY
ಸ್ಟೈನ್ ತಮ್ಮ 45ನೇ ಪಂದ್ಯದಲ್ಲಿ 62 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇವರಿಗೂ ಮೊದಲೇ ಸ್ಪಿನ್ನರ್ ಇಮ್ರಾನ್ ತಾಹೀರ್ 61 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರು. ಅವರು ತಮ್ಮ 35 ಪಂದ್ಯಗಳಲ್ಲಿ 61 ವಿಕೆಟ್ ಪಡೆದಿದ್ದರು. ಮಾರ್ನ್ ಮಾರ್ಕೆಲ್ 46 ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ಶ್ರೀಲಂಕಾದ ಲಸಿತ್ ಮಾಲಿಂಗ 106 ವಿಕೆಟ್ ಪಡೆದು ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇವರ ನಂತರದ ಸ್ಥಾನಗಳಲ್ಲಿ ಶಾಹಿದ್ ಅಫ್ರಿದಿ (96), ಶಕಿಬ್ ಅಲ್ ಹಸನ್(92) ಹಾಗೂ ಉಮರ್ ಗುಲ್(85) ಇದ್ದಾರೆ.
ಡೇಲ್ ಸ್ಟೈನ್ 93 ಟೆಸ್ಟ್ ಪಂದ್ಯಗಳಿಂದ 439 ವಿಕೆಟ್, 145 ಏಕದಿನ ಪಂದ್ಯಗಳಿಂದ 196 ವಿಕೆಟ್ ಪಡೆದಿದ್ದಾರೆ.