ಮುಂಬೈ: ಮೂರು ಬಾರಿ ಐಪಿಎಲ್ ಚಾಂಪಿಯನ್ ಹಾಗೂ ಲೀಗ್ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ 2021ರ ಮಿನಿ ಹರಾಜಿಗೂ ಮುನ್ನ ದುಬಾರಿ ಆಟಗಾರರಾದ ಕೇದಾರ್ ಜಾಧವ್ ಹಾಗೂ ಪಿಯೂಷ್ ಚಾವ್ಲಾರನ್ನು ತಂಡದಿಂದ ಕೈಬಿಟ್ಟಿದೆ. ಒಟ್ಟು 18 ಆಟಗಾರರನ್ನು ಉಳಿಸಿಕೊಂಡಿದೆ.
2018ರ ಹರಾಜಿನಲ್ಲಿ ಕೇದರ್ ಜಾಧವ್ರನ್ನು 7.8 ಕೋಟಿ ರೂ. ನೀಡಿ ಸಿಎಸ್ಕೆ ಖರೀದಿಸಿತ್ತು. ಆದರೆ ಒಂದು ಆವೃತ್ತಿಯಲ್ಲೂ ಅವರು ನಿರೀಕ್ಷೆ ಮೂಡಿಸುವಷ್ಟು ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಅಲ್ಲದೆ 2021ರ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ತೋರಿ ಭಾರಿ ಟೀಕೆಗೆ ಗುರಿಯಾಗಿದ್ದರು.
-
All the #Yellove, @JadhavKedar for etching a sweet victory on the dream comeback and the super memories! #WhistlePodu 🦁💛 pic.twitter.com/REBUNC9LJ8
— Chennai Super Kings (@ChennaiIPL) January 20, 2021 " class="align-text-top noRightClick twitterSection" data="
">All the #Yellove, @JadhavKedar for etching a sweet victory on the dream comeback and the super memories! #WhistlePodu 🦁💛 pic.twitter.com/REBUNC9LJ8
— Chennai Super Kings (@ChennaiIPL) January 20, 2021All the #Yellove, @JadhavKedar for etching a sweet victory on the dream comeback and the super memories! #WhistlePodu 🦁💛 pic.twitter.com/REBUNC9LJ8
— Chennai Super Kings (@ChennaiIPL) January 20, 2021
ಇನ್ನು 32 ವರ್ಷದ ಚಾವ್ಲಾರನ್ನು 2020ರಲ್ಲಿ 6.7 ಕೋಟಿ ರೂ. ನೀಡಿ ಸಿಎಸ್ಕೆ ಖರೀದಿಸಿತ್ತು. ಆದರೆ ಇವರು ಕೂಡ ದುಬೈನಲ್ಲಿ ನಡೆದ ಐಪಿಎಲ್ನಲ್ಲಿ ವೈಫಲ್ಯ ಅನುಭವಿಸಿದ್ದರು. ಇವರ ಜೊತೆಗೆ ಸಿಎಸ್ಕೆ ಮುರಳಿ ವಿಜಯ್, ಹರ್ಬಜನ್ ಸಿಂಗ್, ಮೋನುಕುಮಾರ್ ಸಿಂಗ್ ಹಾಗೂ ಶೇನ್ ವಾಟ್ಸನ್ರನ್ನು ಬಿಡುಗಡೆಗೊಳಿಸಿದೆ. ವಾಟ್ಸನ್ ಎಲ್ಲಾ ಮಾದರಿಯ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದಾರೆ.
-
Super thanks, for touching our hearts with the leather turns, Piyush Bhai! #Yellove #WhistlePodu 🦁💛 pic.twitter.com/f18tT0mpuF
— Chennai Super Kings (@ChennaiIPL) January 20, 2021 " class="align-text-top noRightClick twitterSection" data="
">Super thanks, for touching our hearts with the leather turns, Piyush Bhai! #Yellove #WhistlePodu 🦁💛 pic.twitter.com/f18tT0mpuF
— Chennai Super Kings (@ChennaiIPL) January 20, 2021Super thanks, for touching our hearts with the leather turns, Piyush Bhai! #Yellove #WhistlePodu 🦁💛 pic.twitter.com/f18tT0mpuF
— Chennai Super Kings (@ChennaiIPL) January 20, 2021
ಸಿಎಸ್ಕೆ ಉಳಿಸಿಕೊಂಡಿರುವ ಆಟಗಾರರು
ಎಂ.ಎಸ್.ಧೋನಿ, ರವೀಂದ್ರ ಜಡೇಜಾ, ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ಜೋಶ್ ಹೆಜಲ್ವುಡ್, ಲುಂಗಿ ಎಂಗಿಡಿ, ಅಂಬಾಟಿ ರಾಯುಡು, ಕರ್ನ್ ಶರ್ಮಾ, ಮಿಚೆಲ್ ಸ್ಯಾಂಟ್ನರ್, ಶಾರ್ದುಲ್ ಠಾಕೂರ್, ರುತುರಾಜ್ ಗಾಯಕ್ವಾಡ್, ಎನ್.ಜಗದೀಶನ್, ಇಮ್ರಾನ್ ತಾಹೀರ್, ದೀಪಕ್ ಚಹಾರ್, ಕೆ.ಎಂ.ಆಸಿಫ್, ಆರ್.ಸಾಯ್ ಕಿಶೋರ್.