ವೆಲ್ಲಿಂಗ್ಟನ್: ಕ್ರಿಕೆಟ್ ಇತಿಹಾಸದ ಮೊದಲ ಸಲಿಂಗ ವಿವಾಹವಾಗಿದ್ದ ನ್ಯೂಜಿಲ್ಯಾಂಡ್ನ ಆಮಿ ಸಟ್ಟರ್ತ್ವೈಟ್ ಹಾಗೂ ಆಸ್ಟ್ರೇಲಿಯಾದ ಲಿಯಾ ತಹುಹು ಇದೀಗ ಮೊದಲ ಮಗುವಿಗೆ ಜನ್ಮ ನೀಡಿದ್ದು, ಈ ಮಾಹಿತಿಯನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2010ರಿಂದ ಜೊತೆಯಾಗಿದ್ದ ಸಟ್ಟರ್ತ್ ವೈಟ್ ಹಾಗೂ ಲೀ ತಾಹುಹು 2017ರಲ್ಲಿ ವಿವಾಹವಾಗಿದ್ದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಸಲಿಂಗ ವಿವಾಹವಾಗಿದ್ದ ಮೊದಲ ಜೋಡಿ ಎನಿಸಿಕೊಂಡಿದ್ದರು.
ಎರಡು ವರ್ಷಗಳ ಬಳಿಕ ತಾಯಿಯಾಗುತ್ತಿರುವ ಮಾಹಿತಿಯನ್ನ ಟ್ವೀಟರ್ನಲ್ಲಿ ಹಾಕಿಕೊಂಡಿದ್ದ ಈ ಜೋಡಿ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿರುವ ಲಿಯಾ ತಹುಹು, ನಾನು ಮತ್ತು ಆ್ಯಮಿ ಜನವರಿ 13ರಂದು ಗ್ರೇಸ್ ಮರಿಯಾ ಸ್ಯಾಟರ್ತ್ವೈಟ್ ಅನ್ನು ಬರಮಾಡಿಕೊಂಡಿದ್ದೇವೆ. ನಾವು ಕೃತಜ್ಞರಾಗಿದ್ದು, ಇದಕ್ಕಿಂತ ಸಂತೋಷ ಬೇರೆ ಏನಿದೆ ಎಂದು ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಜಾರಿಗೆ ತರಲಾಗಿರುವ ಹೊಸ ರಜೆ ಪದ್ಧತಿ ಪ್ರಕಾರ ಸಟ್ಟರ್ತ್ ಅವರು ಸದ್ಯ ರಜೆಯಲ್ಲಿದ್ದು ಮೊದಲ ಮಗುವಿನ ಜನನ ನಂತರ ತಂಡಕ್ಕೆ ವಾಪಸ್ ಮರಳಲಿದ್ದಾರೆ.