ಜೋಹನ್ಸ್ಬರ್ಗ್: ದ.ಆಫ್ರಿಕಾ ಕ್ರಿಕೆಟ್ ಮಂಡಳಿಯ ಆಧ್ಯಕ್ಷ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರಾಗಿ ಬೆರೆಸ್‌ಫೋರ್ಡ್ ವಿಲಿಯಮ್ಸ್ ನೇಮಕಗೊಂಡಿದ್ದಾರೆ.
ಶನಿವಾರ ಅಧ್ಯಕ್ಷ ಸ್ಥಾನಕ್ಕೆ ಕ್ರಿಸ್ ನೆಂಜಾನಿ ಅವರು ರಾಜಿನಾಮೆ ನೀಡಿದ್ದರು. ಸೆಪ್ಟೆಂಬರ್ 5 ರಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ವಾರ್ಷಿಕ ಸಭೆ ನಡೆಯಲಿದ್ದು, ಅಲ್ಲಿಯವರೆಗೆ ಹಂಗಾಮಿ ಅಧ್ಯಕ್ಷರಾಗಿ ಬೆರೆಸ್‌ಫೋರ್ಡ್ ವಿಲಿಯಮ್ಸ್ ನೇಮಕವಾಗಿದ್ದಾರೆ.
-
OFFICIAL STATEMENT: Appointment of acting President and acting CEO's resignation pic.twitter.com/36NfLXktzX
— Cricket South Africa (@OfficialCSA) August 18, 2020 " class="align-text-top noRightClick twitterSection" data="
">OFFICIAL STATEMENT: Appointment of acting President and acting CEO's resignation pic.twitter.com/36NfLXktzX
— Cricket South Africa (@OfficialCSA) August 18, 2020OFFICIAL STATEMENT: Appointment of acting President and acting CEO's resignation pic.twitter.com/36NfLXktzX
— Cricket South Africa (@OfficialCSA) August 18, 2020
ನೆಂಜಾನಿ ಕಳೆದ ವರ್ಷ ಸಿಎಸ್ಎ ಸಂವಿಧಾನವನ್ನು ಬದಲಾಯಿಸಿ ಒಂದು ವರ್ಷದ ಅವಧಿಗೆ ತಮ್ಮ ಅಧಿಕಾರಾವಧಿಯನ್ನು ಹೆಚ್ಚಿಸಿಕೊಂಡಿದ್ದರು. ಇದರಿಂದ ಅವರು ಮಂಡಳಿಯ ಸದಸ್ಯರು ಹಾಗೂ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಲ್ಲದೇ ಇತ್ತೀಚೆಗೆ ನೆಂಜಾನಿ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೂಡ ಕೇಳಿಬಂದಿದ್ದವು.
ಇಷ್ಟೆಲ್ಲಾ ಬೆಳವಣಿಗೆಗಳ ನಂತರ ನೆಂಜಾನಿ ತಮ್ಮ ಅಧಿಕಾರಾವಧಿ ಸೆಪ್ಟೆಂಬರ್ 5ರವರೆಗಿದ್ದರೂ 22 ದಿನಗಳ ಮುಂಚೆಯೇ ರಾಜೀನಾಮೆ ಸಲ್ಲಿಸಿದ್ದಾರೆ. ಇವರು 2013ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು.