ETV Bharat / sports

ಸಿಪಿಎಲ್​ ಟೂರ್ನಿ: ಜಮೈಕಾ - ನೇವಿಸ್ ಪೇಟ್ರಿಯಾಟ್ಸ್ ತಂಡಗಳಿಗೆ ಜಯ - ನೇವಿಸ್ ಪೇಟ್ರಿಯಾಟ್ಸ್ ತಂಡಕ್ಕೆ ಜಯ

ಕೆರಿಬಿಯನ್ ಪ್ರೀಮಿಯರ್​ ಲೀಗ್​ ಪಂದ್ಯಗಳಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ ಜಮೈಕಾ ತಲವಾಸ್ ಐದು ವಿಕೆಟ್ ಜಯ ಸಾಧಿಸಿದರೆ, ಸೇಂಟ್ ಕಿಟ್ಸ್ ನೇವಿಸ್ ಪೇಟ್ರಿಯಾಟ್ಸ್, ಬಾರ್ಬಡೋಸ್ ತಂಡವನ್ನು ಆರು ವಿಕೆಟ್​ಗಳಿಂದ ಸೋಲಿಸಿದೆ.

CPL 2020
ನೇವಿಸ್ ಪೇಟ್ರಿಯಾಟ್ಸ್ ತಂಡಗಳಿಗೆ ಜಯ
author img

By

Published : Aug 26, 2020, 2:10 PM IST

ತರೌಬ(ಟ್ರಿನಿಡಾಡ್​): ಜಮೈಕಾ ತಲವಾಸ್​ ಹಾಗೂ ಸೇಂಟ್​ ಕಿಟ್ಸ್​ ನೇವಿಸ್​ ಪೇಟ್ರಿಯೋಟ್ಸ್ ತಂಡಗಳು ಕೆರಿಬಿಯನ್ ಪ್ರೀಮಿಯರ್​ ಲೀಗ್​ ಪಂದ್ಯಗಳಲ್ಲಿ ಜಯ ಸಾಧಿಸಿವೆ.

ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ ಜಮೈಕಾ ತಲವಾಸ್ ಐದು ವಿಕೆಟ್ ಜಯ ಸಾಧಿಸಿದರೆ, ಸೇಂಟ್ ಕಿಟ್ಸ್ ಮತ್ತು ನೇವಿಸ್ ಪೇಟ್ರಿಯಾಟ್ಸ್, ಬಾರ್ಬಡೋಸ್ ತಂಡವನ್ನು ಆರು ವಿಕೆಟ್​ಗಳಿಂದ ಸೋಲಿಸಿದೆ.

ಬಾರ್ಬಡೋಸ್ ತಂಡ ನೀಡಿದ್ದ ಗುರಿ ಬೆನ್ನಟ್ಟಿದ ನೇವಿಸ್ ಪೇಟ್ರಿಯಾಟ್ಸ್ ತಂಡಕ್ಕೆ ಎವಿನ್ ಲೂಯಿಸ್ ಆಸರೆಯಾದ್ರು. ಬೆನ್ ಡಂಕ್ ಕೇವಲ 11 ಎಸೆತಗಳಲ್ಲಿ 22 ರನ್ ಗಳಿಸಿ ತಂಡವನ್ನು ಜಯದತ್ತ ಕೊಂಡೊಯ್ದರು. 3 ಎಸೆತಗಳು ಬಾಕಿ ಇರುವಂತೆ 152 ರನ್​ ಗಳಿಸಿದ ನೆವಿಸ್ ಪೇಟ್ರಿಯಾಟ್ಸ್ ತಂಡ 6 ವಿಕೆಟ್​ಗಳ ಜಯ ದಾಖಲಿಸಿತು.

ಇನ್ನೊಂದು ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ನೀಡಿದ್ದ 109 ರನ್​ಗಳ ಅಲ್ಪ ಗುರಿಯನ್ನು ಬೆನ್ನತ್ತಿದ ಜಮೈಕಾ ತಲವಾಸ್ ಎರಡು ಓವರ್‌ಗಳು ಬಾಕಿ ಇರುವಂತೆ 5 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.