ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ನಾಳೆ ಪಾಕ್ ತಂಡ ಪ್ರವಾಸ ಕೈಗೊಳ್ಳಲಿದ್ದು, ಕೊರೊನಾ ಪಾಸಿಟಿವ್ ಕಂಡು ಬಂದಿರುವ 10 ಪ್ಲೇಯರ್ಸ್ ಪ್ರಯಾಣ ಮಾಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
20 ಪ್ಲೇಯರ್ಸ್ ಹಾಗೂ 11 ಸಹಾಯಕ ಸಿಬ್ಬಂದಿ ನಾಳೆ ಲಂಡನ್ ವಿಮಾನ ಏರಲಿದ್ದಾರೆ. ವೇಗದ ಬೌಲರ್ ಮುಸಾ ಖಾನ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರೋಹಿಲ್ ನಜೀರ್ಗೆ ಕೊರೊನಾ ನೆಗೆಟಿವ್ ಕಾಣಿಸಿಕೊಂಡಿದ್ದು, ಅವರು ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.
-
20 players, 11 support staff to travel to Manchester on Sundayhttps://t.co/rjXWqcEc4O https://t.co/9T8Yg1BsVw
— PCB Media (@TheRealPCBMedia) June 27, 2020 " class="align-text-top noRightClick twitterSection" data="
">20 players, 11 support staff to travel to Manchester on Sundayhttps://t.co/rjXWqcEc4O https://t.co/9T8Yg1BsVw
— PCB Media (@TheRealPCBMedia) June 27, 202020 players, 11 support staff to travel to Manchester on Sundayhttps://t.co/rjXWqcEc4O https://t.co/9T8Yg1BsVw
— PCB Media (@TheRealPCBMedia) June 27, 2020
ಶಬಾದ್ ಖಾನ್, ಹ್ಯಾರಿಸ್ ರೌಪ್, ಹೈದರ್ ಅಲಿ, ಫಖಾರ್ ಜಮಾನ್, ಮೊಹಮ್ಮದ್ ರಿಯಾಜ್, ವಹಾಬ್ ರಿಯಾಜ್, ಇಮ್ರಾನ್ ಖಾನ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸೀನ್ ಹಾಗೂ ಕೌಶೀಫ್ ಭಟ್ಟಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿರುವ ಕಾರಣ ತಂಡದೊಂದಿಗೆ ಪ್ರಯಾಣ ಬೆಳೆಸುತ್ತಿಲ್ಲ.
ಪ್ರಯಾಣ ಬೆಳೆಸುವ ಪ್ಲೇಯರ್ಸ್
ಅಜರ್ ಅಲಿ(ಕ್ಯಾಪ್ಟನ್), ಬಾಬರ್ ಅಜಂ(ಉ.ನಾಯಕ), ಅಬಿದಿ ಅಲಿ, ಅಸಾದ್ ಶಫೀಕ್, ಫಹೀಮ್ ಅಶ್ರಫ್, ಪವಾಡ್ ಆಲಂ, ಅಹ್ಮದ್, ಇಮಾದ್ ವಾಸೀಂ, ಇಮಾಮ್ ಉಲ್ ಹಕ್, ಕೌಶೀದ್ ಶಾ, ಮೊಹಮ್ಮದ್ ಅಬ್ಬಾಸ್, ಮುಸಾ ಖಾನ್, ನಸೀಂ ಶಾ, ರೋಹಿಲ್ ನಜೀರ್, ಸರ್ಫರಾಜ್ ಅಹ್ಮದ್, ಶಹೀನ್ ಶಾ ಆಫ್ರೀದಿ, ಶಾನ್ ಮಾಸೂದ್, ಶೋಹಿಲ್ ಖಾನ್, ಉಸ್ಮಾನ್ ಶಿನ್ವಾರಿ ಹಾಗೂ ಯಾಸೀರ್ ಶಾ
ಇಂಗ್ಲೆಂಡ್ ಪ್ರಯಾಣ ಕೈಗೊಂಡ ಬಳಿಕ ಪಾಕ್ ತಂಡ 14 ದಿನಗಳ ಕ್ವಾರಂಟೈನ್ಗೊಳಗಾಗಲಿದೆ. ಇದಾದ ಬಳಿಕ ನಾಲ್ಕು ದಿನಗಳ ಅಭ್ಯಾಸ ಪಂದ್ಯ ಆಡಲಿದ್ದು, ತದನಂತರ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿದೆ.