ಮೆಲ್ಬೋರ್ನ್: ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿಕೊಟ್ಟಿದ್ದಾರೆ. ಆದರೆ ರಹಾನೆ ಈ ಮೈಲುಗಲ್ಲು ತಲುಪುವ ಮುನ್ನ ಅವರನ್ನು 5 ಬಾರಿ ಔಟ್ ಮಾಡುವ ಅವಕಾಶವನ್ನು ನಾವು ಕಳೆದುಕೊಂಡೆವು ಎಂದು ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತ ತಂಡ 5 ವಿಕೆಟ್ ಕಳೆದುಕೊಂಡು 277 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದೆ. ಈ ಮೂಲಕ 82 ರನ್ಗಳ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. 2ನೇ ದಿನದ ಆರಂಭದಲ್ಲಿ ಶುಬ್ಮನ್ ಗಿಲ್ (45), ಪೂಜಾರ (17) ವಿಕೆಟ್ ಪಡೆದು ಮುನ್ನಡೆ ಸಾಧಿಸಿದ್ದ ಆಸೀಸ್ಗೆ ರಹಾನೆ (104) ಆಕರ್ಷಕ ಶತಕ ತಲೆನೋವು ತಂದಿದೆ. ಇನ್ನುಳಿದಂತೆ, ವಿಹಾರಿ (21), ಪಂತ್ (29) ಅರ್ಧಶತಕಗಳ ಜೊತೆಯಾಟ ನಡೆಸಿದರು.
ಓದಿ: ಐಸಿಸಿ ದಶಕದ ಟಿ20 ಮತ್ತು ಏಕದಿನ ತಂಡಕ್ಕೆ ಧೋನಿ ನಾಯಕ... ಕೊಹ್ಲಿ,ರೋಹಿತ್ಗೂ ಸ್ಥಾನ
ಪಂತ್ ಔಟಾದ ನಂತರ ಜೊತೆಗೂಡಿದ ರಹಾನೆ- ಜಡೇಜಾ(40) ಜೋಡಿ 6ನೇ ವಿಕೆಟ್ಗೆ 104 ರನ್ಗಳ ಮುರಿಯದ ಜೊತೆಯಾಟ ನೀಡಿದ್ದು ಆಸೀಸ್ ಬೌಲರ್ಗಳನ್ನು ಬೆಂಡೆತ್ತಿದ್ದರು. ಆದರೆ ರಹಾನೆ ಶತಕ ಸಿಡಿಸುವ ಮುನ್ನ ಆಸೀಸ್ ಫೀಲ್ಡರ್ಗಳು ಹಲವಾರು ಬಾರಿ ಜೀವದಾನ ನೀಡಿದ್ದರು. ಇದನ್ನು ಪಂದ್ಯದ ನಂತರ ನೆನಪಿಸಿಕೊಂಡ ಆಸೀಸ್ ವೇಗಿ, ನಾವು ರಹಾನೆ ಶತಕ ಸಿಡಿಸುವ ಮುನ್ನ 5 ಬಾರಿ ಔಟ್ ಮಾಡಬಹುದಿತ್ತು ಎಂದು ತಿಳಿಸಿದ್ದಾರೆ.
-
A look at the Honours Board at the G.
— BCCI (@BCCI) December 27, 2020 " class="align-text-top noRightClick twitterSection" data="
.@ajinkyarahane88 scored a Test century in 2014 and here he is today all set to get his name engraved again.
Well done, Skip 💯#AUSvIND pic.twitter.com/1YfqQl3DKk
">A look at the Honours Board at the G.
— BCCI (@BCCI) December 27, 2020
.@ajinkyarahane88 scored a Test century in 2014 and here he is today all set to get his name engraved again.
Well done, Skip 💯#AUSvIND pic.twitter.com/1YfqQl3DKkA look at the Honours Board at the G.
— BCCI (@BCCI) December 27, 2020
.@ajinkyarahane88 scored a Test century in 2014 and here he is today all set to get his name engraved again.
Well done, Skip 💯#AUSvIND pic.twitter.com/1YfqQl3DKk
"ಅವರು (ರಹಾನೆ) ನಿಜಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆತ ಶತಕ ಸಿಡಿಸುವ ಮುನ್ನ 5 ಬಾರಿಯಾದರೂ ನಾವು ಔಟ್ ಮಾಡಬಹುದಿತ್ತು. ಅದೃಷ್ಟ ಆತನ ಬಳಿ ಇದ್ದಿದ್ದರಿಂದ ರನ್ಗಳಿಸಿ ಶತಕ ಪೂರೈಸಿದರು" ಎಂದು ಸ್ಟಾರ್ಕ್ ಹೇಳಿದ್ದಾರೆ.
-
Another dominant day of Test cricket for #TeamIndia.
— BCCI (@BCCI) December 27, 2020 " class="align-text-top noRightClick twitterSection" data="
It was a day that is undoubtedly headlined by Captain @ajinkyarahane88, whose century (104* off 200) will go down as one of the best by an Indian captain on foreign soil.#TeamIndia 277/5 (Rahane 104*, Jadeja 40*) pic.twitter.com/zwuHWWHYjP
">Another dominant day of Test cricket for #TeamIndia.
— BCCI (@BCCI) December 27, 2020
It was a day that is undoubtedly headlined by Captain @ajinkyarahane88, whose century (104* off 200) will go down as one of the best by an Indian captain on foreign soil.#TeamIndia 277/5 (Rahane 104*, Jadeja 40*) pic.twitter.com/zwuHWWHYjPAnother dominant day of Test cricket for #TeamIndia.
— BCCI (@BCCI) December 27, 2020
It was a day that is undoubtedly headlined by Captain @ajinkyarahane88, whose century (104* off 200) will go down as one of the best by an Indian captain on foreign soil.#TeamIndia 277/5 (Rahane 104*, Jadeja 40*) pic.twitter.com/zwuHWWHYjP
ಸ್ಟಾರ್ಕ್ ಬೌಲಿಂಗ್ನಲ್ಲಿ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಭಾರತದ ಕ್ಯಾಚ್ ಡ್ರಾಪ್ ಮಾಡಿದ್ದರು. ಮಿಚೆಲ್ ಸ್ಟಾರ್ಕ್ ಈ ಪಂದ್ಯದಲ್ಲಿ ರಿಷಭ್ ಪಂತ್ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದರು.
ಓದಿ: ರಹಾನೆ-ಜಡೇಜಾ ಜೊತೆಯಾಟಕ್ಕೆ ಬಳಲಿದ ಆಸೀಸ್ : 2ನೇ ದಿನದಾಟದ ಅಂತ್ಯಕ್ಕೆ ಭಾರತ ಮುನ್ನಡೆ