ಮುಂಬೈ : ರಾಹುಲ್ ಜೋಹ್ರಿ ಬಿಸಿಸಿಐ ಸಿಇಒ ಹುದ್ದೆಗೆ ರಾಜಿನಾಮೆ ನೀಡಿದ ಬೆನ್ನಲ್ಲೇ ಬಿಸಿಸಿಐ ಕ್ರಿಕೆಟ್ ಆಪರೇಶನ್‌ನ ಜನರಲ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆ ಬಿಸಿಸಿಐ ಮತ್ತು ಬಿಸಿಸಿಐ ಮತ್ತು ಕರೀಮ್ ನಡುವಿನ ಬಿರುಕು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಮಾಜಿ ವಿಕೆಟ್ ಕೀಪರ್ ಬಿಸಿಸಿಐನಲ್ಲಿ ತಾವೂ ಕೆಲಸದಲ್ಲಿ ಮುಂದುವರಿಸಲು ಸಿದ್ದರಿಲ್ಲ ಎಂದು ತಿಳಿದು ಬಂದಿದೆ.
ಕರೀಮ್ 2017ರಲ್ಲಿ ಡಿಸೆಂಬರ್ನಲ್ಲಿ ಮಾಜಿ ಸಿಇಒ ರಾಹುಲ್ ಅಧಿಕಾರಾವಧಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ದೇಶೀಯ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದ ಕರೀಮ್, ರಾಹುಲ್ ದ್ರಾವಿಡ್‌ರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಅಧ್ಯಕ್ಷರಾಗಿ ನೇಮಕ ಮಾಡುವಲ್ಲಿಯೂ ಸಲಹೆ ನೀಡಿದ್ದರು.
ಕರೀಮ್ ನಿರ್ಗಮನದ ವಿಷಯದ ಬಗ್ಗೆ ಬಿಸಿಸಿಐ ಅಧಿಕಾರಿಗಳು ಇನ್ನು ಮೌನ ಕಾಯ್ದುಕೊಂಡಿದ್ದಾರೆ. ಅಲ್ಲದೆ ಅವರ ನಿರ್ಗಮನದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಅವರ ಬದಲಿಗೆ ಜನರಲ್ ಮ್ಯಾನೇಜರ್ ಆಗಿ ಯಾರನ್ನು ನೇಮಕ ಮಾಡಲಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ.
ಬೆಂಗಾಲ್ ತಂಡದ ಪರ ಆಡಿರುವ ಕರೀಮ್ 18 ವರ್ಷಗಳ ಕ್ರಿಕೆಟ್ ಜೀವನಲ್ಲಿ 20 ಪ್ರಥಮ ದರ್ಜೆ ಪಂದ್ಯಗಳು ಹಾಗೂ 124 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ 22 ಶತಕ ಹಾಗೂ 33 ಅರ್ಧಶತಕಗಳ ಸಹಿತ 7,310 ರನ್, ಲಿಸ್ಟ್ ಎ ಕ್ರಿಕೆಟ್ನಲ್ಲಿ 2305 ರನ್ ಗಳಿಸಿದ್ದಾರೆ.