ETV Bharat / sports

ಐಪಿಎಲ್​ನಿಂದ ಹೊರಗುಳಿಯುತ್ತಿರುವುದಕ್ಕೆ ವಿಷಾದವಿಲ್ಲ: ಆಸ್ಟ್ರೇಲಿಯನ್​ ಕ್ರಿಕೆಟಿಗ

ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್​ಗಳಲ್ಲಿ ಒಬ್ಬರಾಗಿರುವ ಮಿಚೆಲ್​ ಸ್ಟಾರ್ಕ್​ 2020ರ ಐಪಿಎಲ್​ ಪ್ಲೇಯರ್​ ಆ್ಯಕ್ಷನ್​ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುಕೊಂಡಿರಲಿಲ್ಲ.ಇದೀಗ ಟೂರ್ನಮೆಂಟ್​ ಸೆಪ್ಟೆಂಬರ್​-ನವೆಂಬರ್​ಗೆ ಮುಂದೂಡಿದ್ದರೂ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.

ಮಿಚೆಲ್​ ಸ್ಟಾರ್ಕ್​
ಮಿಚೆಲ್​ ಸ್ಟಾರ್ಕ್​
author img

By

Published : Aug 4, 2020, 6:23 PM IST

ಸಿಡ್ನಿ: ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್​ ಸ್ಟಾರ್ಕ್​ ಈ ಬಾರಿ ಐಪಿಎಲ್​ನಲ್ಲಿ ಪಾಲ್ಗೊಳ್ಳದಿರುವುದಕ್ಕೆ ತಮಗೆ ಯಾವುದೇ ರೀತಿಯ ವಿಷಾದವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್​ಗಳಲ್ಲಿ ಒಬ್ಬರಾಗಿರುವ ಮಿಚೆಲ್​ ಸ್ಟಾರ್ಕ್​ 2020ರ ಐಪಿಎಲ್​ ಪ್ಲೇಯರ್​ ಆ್ಯಕ್ಷನ್​ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುಕೊಂಡಿರಲಿಲ್ಲ.ಇದೀಗ ಟೂರ್ನಮೆಂಟ್​ ಸೆಪ್ಟೆಂಬರ್​-ನವೆಂಬರ್​ಗೆ ಮುಂದೂಡಿದ್ದರೂ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.

ಮಿಚೆಲ್​ ಸ್ಟಾರ್ಕ್​
ಮಿಚೆಲ್​ ಸ್ಟಾರ್ಕ್​

ಮಾರ್ಚ್​-ಮೇನಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್​, ಕೊರೊನಾ ವೈರಸ್​ ಕಾರಣದಿಂದ ಸೆಪ್ಟೆಂಬರ್​-ನವೆಂಬರ್​ಗೆ ಮುಂದೂಡಲ್ಪಟ್ಟಿದ್ದು ಭಾರತದಿಂದ ಯುಎಇಗೆ ಸ್ಥಳಾಂತರಗೊಂಡಿದೆ.

ಪಶ್ಚಾತಾಪ ಒಂದು ಅದ್ಭುತ ವಿಷಯ ಎಂದು ನನಗೆ ತಿಳಿದಿದೆ. ಆದರೆ ಐಪಿಎಲ್​ ಬೇರೆ ಸಮಯದಲ್ಲಿ ನಡೆಯುತ್ತಿರುವುದರಿಂದ ನನಗೆ ಯಾವುದೇ ಪಶ್ಚಾತಾಪವಿಲ್ಲ. ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಸೆಪ್ಟಂಬರ್​ನಲ್ಲಿ ನಾನು ಐಪಿಎಲ್​ ನಡೆಯುವಾಗ ಸಂತೋಷದಿಂದ ಸಮಯ ಕಳೆಯಲಿದ್ದೇನೆ. ಮತ್ತು ಮುಂದಿನ ಬೇಸಿಗೆ ಕ್ರಿಕೆಟ್​ಗೆ ಸಿದ್ದವಾಗಲಿದ್ದೇನೆ ಎಂದು ಅವರು ಕ್ರಿಕೆಟ್​ ಆಸ್ಟ್ರೇಲಿಯಾ ವೆಬ್​ಸೈಟ್​ಗೆ ತಿಳಿಸಿದ್ದಾರೆ.

ಐಪಿಎಲ್​ ಮುಂದಿನ ವರ್ಷವೂ ಇರುತ್ತದೆ. ನನಗೆ ಅವಕಾಶ ಬಂದರೆ ಅಥವಾ ಜನರು ನಾನು ಇರಬೇಕೆಂದು ಬಯಸಿದರೆ ಖಂಡಿತವಾಗಿಯೂ ಅದನ್ನು ಪರಿಗಣಿಸಲಿದ್ದೇನೆ. ಆದರೆ ಈ ವರ್ಷದಲ್ಲಿ ನನ್ನ ನಿರ್ಧಾರಕ್ಕೆ ಆರಾಮವಾಗಿರಲಿದ್ದೇನೆ ಎಂದು ಸ್ಟಾರ್ಕ್​ ತಿಳಿಸಿದ್ದಾರೆ.

ಮಿಚೆಲ್​ ಸ್ಟಾರ್ಕ್​ 2014 ಮತ್ತು 2015ರ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಆಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.