ETV Bharat / state

ಬೆಂಗಳೂರು: ಆನ್​​ಲೈನ್​ ಗೇಮ್​ ಹುಚ್ಚು, ಸಾಲಬಾಧೆ ತಾಳಲಾರದೆ ಯುವಕ ಆತ್ಮಹತ್ಯೆ - YOUNG MAN DIED

ಆನ್​ಲೈನ್ ಬೆಟ್ಟಿಂಗ್​ ಆಡಲು ಸಾಲ ಮಾಡಿಕೊಂಡಿದ್ದ ಯುವಕ ಮರಳಿ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರಂ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

YOUNG MAN DIED
ಸಾಂದರ್ಭಿಕ ಚಿತ್ರ (File)
author img

By ETV Bharat Karnataka Team

Published : Dec 4, 2024, 9:09 PM IST

Updated : Dec 4, 2024, 9:36 PM IST

ಬೆಂಗಳೂರು: ಆನ್​ಲೈನ್​ನಲ್ಲಿ ಬೆಟ್ಟಿಂಗ್​ ಆಡಿ​​ ಸಾಲದ ಸುಳಿಗೆ ಸಿಲುಕಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರಂ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರವೀಣ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರವೀಣ್​ ಸ್ನೇಹಿತರಾದ ಸೋಮಶೇಖರ್, ಜಯಾ ಹಾಗೂ ಸಲ್ಮಾನ್ ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಎರಡು ವರ್ಷಗಳಿಂದ ಆನ್​ಲೈನ್ ಬೆಟ್ಟಿಂಗ್​ ಆಟಕ್ಕೆ ದಾಸನಾಗಿದ್ದ ಪ್ರವೀಣ್, ಮನೆಯವರಿಂದ ಹಣ ಪಡೆದು ಬೆಟ್ಟಿಂಗ್​ ಆಡಿ ಹಣ ಕಳೆದುಕೊಂಡಿದ್ದ. ಬೆಟ್ಟಿಂಗ್​ ಆಡಲು ಸ್ನೇಹಿತರಿಂದ ಹಣ ಪಡೆದುಕೊಂಡಿದ್ದ. ಹಣ ವಾಪಸ್ ನೀಡದ‌ ಕಾರಣ ಸ್ನೇಹಿತರು ಪ್ರವೀಣ್​ ಜೊತೆ ಗಲಾಟೆ ಮಾಡಿದ್ದರು. ಸಾಲಬಾಧೆ ತಾಳಲಾರದೆ ಪ್ರವೀಣ್ ಆತ್ಮಹತ್ಯೆ ಶರಣಾಗಿದ್ದ. ಮಗನ ಸಾವಿಗೆ ಸ್ನೇಹಿತರ ಪ್ರಚೋದನೆಯೇ ಕಾರಣ ಎಂದು ಮೃತ ಯುವಕನ ತಂದೆ ಮುನಿಸ್ವಾಮಿ ದೂರು ನೀಡಿದ್ದರು.

ವೈಟ್‌ಫೀಲ್ಡ್ ಡಿಸಿಪಿ‌ ಶಿವಕುಮಾರ್ ಪ್ರತಿಕ್ರಿಯಿಸಿ, "ಟಿ.ಸಿ.ಪಾಳ್ಯ ಮುಖ್ಯರಸ್ತೆಯ ರಾಜೇಶ್ವರಿ ಲೇಔಟ್​ನಲ್ಲಿ ವಾಸವಾಗಿದ್ದ ಮುನಿಸ್ವಾಮಿ ಎಂಬುವವರ ಪುತ್ರ ಪ್ರವೀಣ್ ಪ್ರಥಮ ಪಿಯುಸಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ. ಹೆಚ್ಚು ಸಾಲ ಮಾಡಿದ್ದ ಪ್ರವೀಣ್ ಕಳೆದ ನ.26ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಮಗನ ಸಾವಿಗೆ ಆತನ ಸ್ನೇಹಿತರೇ ಕಾರಣ ಎಂದು ಆರೋಪಿಸಿ ಮೃತನ ತಂದೆ ದೂರು ನೀಡಿದ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಪ್ರವೀಣ್​ ಆನ್​ಲೈನ್ ಬೆಟ್ಟಿಂಗ್​ಗೆ ದಾಸನಾಗಿರುವುದು ಗೊತ್ತಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಮುಳುಗಿಸಿ ವ್ಯಕ್ತಿ ಕೊಲೆ: 11 ತಿಂಗಳ ಬಳಿಕ ಪತ್ನಿ, ಪ್ರಿಯಕರ ಸೇರಿ ಮೂವರ ಬಂಧನ

Last Updated : Dec 4, 2024, 9:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.