ಕ್ರೈಸ್ಟ್ಚರ್ಚ್: ಇಲ್ಲಿನ ಹೇಗ್ಲಿ ಓವಲ್ ಮೈದಾನದಲ್ಲಿ ಆರಂಭಗೊಂಡಿರುವ ಟೀಂ ಇಂಡಿಯಾ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.
-
New Zealand have won the toss and they will bowl first in the 2nd Test.#NZvIND pic.twitter.com/YjiGwdj8a7
— BCCI (@BCCI) February 28, 2020 " class="align-text-top noRightClick twitterSection" data="
">New Zealand have won the toss and they will bowl first in the 2nd Test.#NZvIND pic.twitter.com/YjiGwdj8a7
— BCCI (@BCCI) February 28, 2020New Zealand have won the toss and they will bowl first in the 2nd Test.#NZvIND pic.twitter.com/YjiGwdj8a7
— BCCI (@BCCI) February 28, 2020
ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳಿಂದ ಸೋತಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ, ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇನ್ನು ಟೀಂ ಇಂಡಿಯಾ ಇಂದು ಕೆಲ ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದಿದೆ. ಗಾಯಗೊಂಡಿರುವ ಇಶಾಂತ್ ಶರ್ಮಾ ಬದಲಿಗೆ ಉಮೇಶ್ ಯಾದವ್ ಹಾಗೂ ಸ್ಪಿನ್ನರ್ ಆರ್.ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಆತ್ಮವಿಶ್ವಾಸದಲ್ಲಿರುವ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲ್ಯಾಂಡ್ ಕೂಡ ಒಂದು ಬದಲಾವಣೆ ಮಾಡಿದೆ. ಸ್ಪಿನ್ನರ್ ಅಜಿಜ್ ಪಟೇಲ್ರನ್ನು ಕೈಬಿಟ್ಟು ವೇಗಿ ನೀಲ್ ವಾಗ್ನರ್ಗೆ ಅವಕಾಶ ನೀಡಲಾಗಿದೆ.