ETV Bharat / sports

ವಿರಾಟ್​ ಹುಟ್ಟುಹಬ್ಬಕ್ಕೆ ಶುಭ ಕೋರಿ, ಆರ್​ಸಿಬಿಗಾಗಿ ಟ್ರೋಫಿ ಗೆದ್ದುಕೊಡಿ ಎಂದ ಯುನಿವರ್ಸಲ್ ಬಾಸ್​

author img

By

Published : Nov 5, 2020, 4:14 PM IST

ವಿರಾಟ್ ನೇತೃತ್ವದ ಆರ್​ಸಿಬಿ ಈ ಬಾರಿ ಐಪಿಎಲ್​ನಲ್ಲಿ 14 ಪಂದ್ಯಗಳಿಂದ 7 ಗೆಲುವು ಹಾಗೂ 7 ಸೋಲುಗಳೊಂದಿಗೆ 14 ಅಂಕ ಪಡೆದು 3 ವರ್ಷಗಳ ನಂತರ ಪ್ಲೇ ಆಫ್​ ಪ್ರವೇಶಿಸಿದೆ. ಶುಕ್ರವಾರ ಆರ್​ಸಿಬಿ ಸನ್​ ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ವಿರಾಟ್​ ಕೊಹ್ಲಿ, ಕ್ರಿಸ್ ಗೇಲ್​
ವಿರಾಟ್​ ಕೊಹ್ಲಿ, ಕ್ರಿಸ್ ಗೇಲ್​

ದುಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ಆರ್​ಸಿಬಿ ಮಾಜಿ ದಾಂಡಿಗ ಕ್ರಿಸ್​ ಗೇಲ್​ ಶುಭ ಕೋರಿದ್ದಾರೆ. ಅಲ್ಲದೆ ಆರ್​ಸಿಬಿಗೆ ಕಪ್​ ಗೆಲ್ಲುವಂತೆ ಹೇಳಿದ್ದಾರೆ.

2011ರಿಂದ 2017ರವರೆಗೆ ಆರ್​ಸಿಬಿ ಪರ ಆಡಿದ್ದ ಯುನಿವರ್ಸಲ್​ ಬಾಸ್,​ ಆರ್​ಸಿಬಿ 2 ಬಾರಿ ಫೈನಲ್​ಗೇರಲು ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ಹಾಗೂ ಗೇಲ್​ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಇಂದು 32ನೇ ವರ್ಷದ ಜನ್ಮದಿನವನ್ನಾಚರಿಸಿಕೊಳ್ಳುತ್ತಿರುವ ತಮ್ಮ ಗೆಳೆಯನಿಗೆ ವಿಶೇಷ ಸಂದೇಶದ ಜೊತೆಗೆ ಈ ವರ್ಷದ ಐಪಿಎಲ್ ಗೆಲ್ಲಬೇಕೆಂದು ಕೇಳಿಕೊಂಡಿದ್ದಾರೆ.

"ಹ್ಯಾಪಿ ಬರ್ತಡೇ ಲೆಜೆಂಡ್​ ಕೊಹ್ಲಿ, ನಿಮಗೆ ಶುಭಾಶಯಗಳು ಕಾಕ, ಈ ವರ್ಷ ಆರ್​ಸಿಬಿಗೆ ಕಪ್​ ತಂದುಕೊಡಿ" ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.

ವಿರಾಟ್ ನೇತೃತ್ವದ ಆರ್​ಸಿಬಿ ಈ ಬಾರಿ ಐಪಿಎಲ್​ನಲ್ಲಿ 14 ಪಂದ್ಯಗಳಿಂದ 7 ಗೆಲುವು ಹಾಗೂ 7 ಸೋಲುಗಳೊಂದಿಗೆ 14 ಅಂಕ ಪಡೆದು 3 ವರ್ಷಗಳ ನಂತರ ಪ್ಲೇ ಆಫ್​ ಪ್ರವೇಶಿಸಿದೆ. ಶುಕ್ರವಾರ ಆರ್​ಸಿಬಿ ಸನ್ ​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.