ಮುಂಬೈ : ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ನ 4ನೇ ಪಂದ್ಯದಲ್ಲಿ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಐಪಿಎಲ್ ಇತಿಹಾಸದಲ್ಲಿ 350 ಸಿಕ್ಸರ್ ಪೂರೈಸಿದ್ದಾರೆ. ನಗದು ಸಮೃದ್ಧ ಲೀಗ್ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ ಹೊಂದಿರುವ ಗೇಲ್ ಪ್ರಸ್ತುತ 2ನೇ ಸ್ಥಾನದಲ್ಲಿರುವ ಎಬಿಡಿ ವಿಲಿಯರ್ಸ್ಗಿಂತ 115 ಸಿಕ್ಸರ್ ಮುಂದಿದ್ದಾರೆ. ಆರ್ಸಿಬಿಯಲ್ಲಿರುವ ಎಬಿಡಿ ವಿಲಿಯರ್ಸ್ 235 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.
-
3️⃣5️⃣0️⃣ IPL sixes unlocked 🔓
— Punjab Kings (@PunjabKingsIPL) April 12, 2021 " class="align-text-top noRightClick twitterSection" data="
First game of the season and a record for him right away 💥#SaddaPunjab #PunjabKings #IPL2021 #RRvPBKS pic.twitter.com/QaG8DGriku
">3️⃣5️⃣0️⃣ IPL sixes unlocked 🔓
— Punjab Kings (@PunjabKingsIPL) April 12, 2021
First game of the season and a record for him right away 💥#SaddaPunjab #PunjabKings #IPL2021 #RRvPBKS pic.twitter.com/QaG8DGriku3️⃣5️⃣0️⃣ IPL sixes unlocked 🔓
— Punjab Kings (@PunjabKingsIPL) April 12, 2021
First game of the season and a record for him right away 💥#SaddaPunjab #PunjabKings #IPL2021 #RRvPBKS pic.twitter.com/QaG8DGriku
ಇಂದಿನ ಪಂದ್ಯದಲ್ಲಿ ಕ್ರಿಸ್ ಗೇಲ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 40 ರನ್ ಬಾರಿಸಿ ಔಟಾದರು. ಒಟ್ಟಾರೆ ಕ್ರಿಸ್ಗೇಲ್ 133 ಪಂದ್ಯಗಳಿಂದ 31 ಅರ್ಧಶತಕ, 6 ಶತಕಗಳ ಸಹಿತ 4812 ರನ್ ಬಾರಿಸಿದ್ದಾರೆ. ಐಪಿಎಲ್ನಲ್ಲಿ ಗರಿಷ್ಠ ಶತಕ ಸಿಡಿಸಿರುವ ದಾಖಲೆ ಕೂಡ ಗೇಲ್ ಹೆಸರಿನಲ್ಲಿದೆ. ಕಳೆದ 3 ಮೂರು ವರ್ಷಗಳಿಂದ ಗೇಲ್ ಪಂಜಾಬ್ ತಂಡದಲ್ಲಿದ್ದಾರೆ. 2011ರಿಂದ 2017ರವರೆಗೆ ಆರ್ಸಿಬಿಯಲ್ಲಿ ಮತ್ತು 2008ರಿಂದ 2010ರವರೆಗೆ ಕೋಲ್ಕತಾ ನೈಟ್ ರೈಡರ್ಸ್ನಲ್ಲಿದ್ದರು.
ಐಪಿಎಲ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿರುವ ಬ್ಯಾಟ್ಸ್ಮನ್ಗಳು
- ಕ್ರಿಸ್ ಗೇಲ್-351
- ಎಬಿಡಿ ವಿಲಿಯರ್ಸ್-237
- ಎಂಎಸ್ ಧೋನಿ-216
- ರೋಹಿತ್ ಶರ್ಮಾ -214
- ವಿರಾಟ್ ಕೊಹ್ಲಿ-201
- ಸುರೇಶ್ ರೈನಾ-198
- ಕೀರನ್ ಪೊಲಾರ್ಡ್-198
- ಡೇವಿಡ್ ವಾರ್ನರ್-195
- ಶೇನ್ ವಾಟ್ಸನ್-190