ದುಬೈ: ಕೆಲವು ದಿನಗಳ ಹಿಂದೆ ಇಬ್ಬರು ಆಟಗಾರರು ಸೇರಿದಂತೆ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಎಲ್ಲಾ 13 ಸಿಎಸ್ಕೆ ತಂಡದ ಸಿಬ್ಬಂದಿಗಳು ಇಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದು, ಹಳದಿ ಸೈನ್ಯದಲ್ಲಿ ಸಮಧಾನ ತಂದಿದೆ.
ಕೋವಿಡ್ 19 ಪಾಸಿಟಿವ್ ಬಂದಮೇಲೆ ಸಿಎಸ್ಕೆ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳು ಕ್ವಾರಂಟೈನ್ನಲ್ಲಿದ್ದರು. ಈ ಅವಧಿಯಲ್ಲಿ ನಡೆಸಿದ ಮೊದಲ ಪರೀಕ್ಷೆಯಲ್ಲಿ ಎಲ್ಲರೂ ನೆಗೆಟಿವ್ ಪಡೆದಿದ್ದಾರೆ. ಆದರೆ ವರದಿಯ ಪ್ರಕಾರ ಸೆಪ್ಟೆಂಬರ್ 3 ರಂದು ನಡೆಯುವ ಮತ್ತೊಂದು ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರವಷ್ಟೇ ಎಲ್ಲರೂ ಮೈದಾನಕ್ಕಿಳಿಯಲಿದ್ದಾರೆ.
ದುಬೈಗೆ ಬಂದಿಳಿದ ಎಂಗಿಡಿ ಮತ್ತು ಡುಪ್ಲೆಸಿಸ್
-
Early morning glories from the Rainbow Nation! #StartTheWhistles #HomeSweetDen 🦁💛 pic.twitter.com/fGOtgJ1LIN
— Chennai Super Kings (@ChennaiIPL) September 1, 2020 " class="align-text-top noRightClick twitterSection" data="
">Early morning glories from the Rainbow Nation! #StartTheWhistles #HomeSweetDen 🦁💛 pic.twitter.com/fGOtgJ1LIN
— Chennai Super Kings (@ChennaiIPL) September 1, 2020Early morning glories from the Rainbow Nation! #StartTheWhistles #HomeSweetDen 🦁💛 pic.twitter.com/fGOtgJ1LIN
— Chennai Super Kings (@ChennaiIPL) September 1, 2020
ಪ್ಲೆಸಿಸ್ ಪತ್ನಿ ಎರಡನೇ ಮಗುವಿಗೆ ಜನ್ಮನೀಡಿದ್ದರಿಂದ ಅವರು ತಡವಾಗಿ ಯುಎಇಗೆ ಬರುವುದಾಗಿ ತಿಳಿಸಿದ್ದರು. ಇದೀಗ ತಮ್ಮ ತಂಡದ ಸಹ ಆಟಗಾರ ಲುಂಗಿ ಎಂಗಿಡಿ ಜೊತೆ ಯುಎಇಗೆ ಬಂದಿಳಿದಿದ್ದು 6 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸುರೇಶ್ ರೈನಾ ತಂಡದಿಂದ ಹೊರಬಿದ್ದ ಬೇಸರದಲ್ಲಿ ತಂಡಕ್ಕೆ ಈ ಎರಡು ವಿಷಯಗಳು ಸ್ವಲ್ಪ ನೆಮ್ಮದಿ ತಂದಿವೆ.