ETV Bharat / sports

ಆತ ಒಬ್ಬ ಗ್ರೇಟ್​ ಕ್ಯಾಪ್ಟನ್​​, ಅವರ ನಾಯಕತ್ವದಲ್ಲಿ ಆಡಲು ಕಾತುರದಿಂದಿದ್ದೇನೆ: ಸ್ಯಾಮ್​ ಕರ್ರನ್​ - curran wait to play with dhoni

ಈಗಾಗಲೆ ಇಂಗ್ಲೆಂಡ್ ತಂಡದ ಪರ ಅದ್ಭುತ ಆಲ್​ರೌಂಡರ್​ ಪ್ರದರ್ಶನ ನೀಡುತ್ತಿರುವ ಕರ್ರನ್​, ನಾನು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಲೆಜೆಂಡ್​ಗಳ ಜೊತೆ ಡ್ರೆಸಿಂಗ್​ ರೂಮ್​ ಹಂಚಿಕೊಳ್ಳಲು ಹಾಗೂ ಅವರ ಆಲೋಚನೆಗಳನ್ನು ರೂಢಿಸಿಕೊಳ್ಳಲು ಕೂತೂಹಲದಿಂದ ಕಾಯುತ್ತಿದ್ದೇನೆ. ಈಗಾಗಲೆ ಸಿಎಸ್​ಕೆ ಭಾಗವಾಗಿದ್ದ ಸ್ಯಾಮ್​ ಬಿಲ್ಲಿಂಗ್ಸ್ ​ ಅವರಿಂದ ಸಿಎಸ್​ಕೆ ತಂಡದ ಬಗ್ಗೆ ಕೇಳಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Sam curran
ಸ್ಯಾಮ್​ ಕರ್ರನ್​
author img

By

Published : Apr 15, 2020, 1:58 PM IST

ಲಂಡನ್​: ಇಂಗ್ಲೆಂಡ್​ ತಂಡದ ಪ್ರತಿಭಾನ್ವಿತ ಆಲ್​ರೌಂಡರ್​ ಸ್ಯಾಮ್​ ಕರ್ರನ್​ ಧೋನಿ ನಾಯಕತ್ವದಲ್ಲಿ ಆಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

2019ರ ಐಪಿಎಲ್​ನಲ್ಲಿ ಹ್ಯಾಟ್ರಿಕ್ ವಿಕೆಟ್​ ಪಡೆದು ಮೊದಲ ಸೀಸನ್​ನಲ್ಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಇಂಗ್ಲೆಂಡ್​ನ ಯುವ ಆಲ್​ರೌಂಡರ್​ ಸ್ಯಾಮ್​ ಕರ್ರನ್ 2020ರ ಐಪಿಎಲ್​ಗೆ ನಡೆದ ಐಪಿಎಲ್​ ಹರಾಜಿನಲ್ಲಿ 5.5 ಕೋಟಿ ರೂ ನೀಡಿ ಖರೀದಿಸಿತ್ತು.

ಈಗಾಗಲೆ ಇಂಗ್ಲೆಂಡ್ ತಂಡದ ಪರ ಅದ್ಭುತ ಆಲ್​ರೌಂಡರ್​ ಪ್ರದರ್ಶನ ನೀಡುತ್ತಿರುವ ಕರ್ರನ್​, ನಾನು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಲೆಜೆಂಡ್​ಗಳ ಜೊತೆ ಡ್ರೆಸಿಂಗ್​ ರೂಮ್​ ಹಂಚಿಕೊಳ್ಳಲು ಹಾಗೂ ಅವರ ಆಲೋಚನೆಗಳನ್ನು ರೂಢಿಸಿಕೊಳ್ಳಲು ಕೂತೂಹಲದಿಂದ ಕಾಯುತ್ತಿದ್ದೇನೆ. ಈಗಾಗಲೆ ಸಿಎಸ್​ಕೆ ಭಾಗವಾಗಿದ್ದ ಸ್ಯಾಮ್​ ಬಿಲ್ಲಿಂಗ್ಸ್ ​ ಅವರಿಂದ ಸಿಎಸ್​ಕೆ ತಂಡದ ಬಗ್ಗೆ ಕೇಳಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಈ ಸಮಯದಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಉತ್ಸುಕನಾಗಿದ್ದೇನೆ. ಎಲ್ಲಾ ಸರಿಯಿದ್ದಿದ್ದೆರೆ ನಾವು ಬಹುಶಹ ಚೆನ್ನೈನಲ್ಲಿ ಒಟ್ಟಿಗೆ ಇರುತ್ತಿದ್ದೆವು. ಆದರೆ ಇಂದು ಹೆಚ್ಚಿನ ಮಹತ್ವದ ಸಂಗತಿಗಳು ನಡೆಯುತ್ತಿವೆ. ನಾನು ಧೋನಿ ಅವರ ನಾಯಕತ್ವದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದು ಕರ್ರನ್​ ತಿಳಿಸಿದ್ದಾರೆ.

ನಾಯಕ ಧೋನಿ ಬಗ್ಗೆ ಇಲ್ಲಿಯವರೆಗೂ ಕೇಳಿದ್ದೇನೆ ಇದೀಗ ಅವರ ಜೊತೆಯಾಗಿ ಆಡುವುದಕ್ಕೆ ಹಾಗೂ ಕೋಚ್​ ಸ್ಟೀಫನ್ ಫ್ಲೆಮಿಂಗ್​ ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದಕ್ಕೆ ನನಗೆ ಇದೊಂದು ಅದ್ಭುತ ಅವಕಾಶ ಸಿಕ್ಕಿದೆ. ಚೆನ್ನೈ ಒಂದು ಅದ್ಭುತ ತಂಡವಾಗಿದ್ದು, ಒಂದು ವೇಳೆ ಐಪಿಎಲ್​ ಯಾವಾಗ ನಡೆದರು ನಾನು ಅದರ ಪರ ಆಡಲು ತಯಾರಿದ್ದೇನೆ ಎಂದಿದ್ದಾರೆ.

ಇನ್ನು ಸಿಎಸ್​ಕೆ ಕುಟಂಬದ ವಾಟ್ಸಪ್​ ಗ್ರೂಪ್​ಗೆ ಸೇರಿಕೊಂಡಿದ್ದು, ಎಲ್ಲರು ನನ್ನನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಆ ದಿನ ನನಗೆ ವಿಶೇಷವಾಗಿತ್ತು. ಗ್ರೂಪ್​ನಲ್ಲಿ ವೈರಸ್​ ಕುರಿತು ತುಂಬಾ ಮಾಹಿತಿ ದೊರೆತಿದೆ ಎಂದು ತಿಳಿಸಿರುವ ಅವರು ಆದಷ್ಟು ಬೇಗ ಎಲ್ಲ ಸರಿಯಾಗಲಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.