ETV Bharat / sports

ಸರಣಿ ಗೆದ್ದ ಭಾರತ ತಂಡ ಮತ್ತು ಆಯೋಜನೆಗೆ ನೆರವಾದ ಬಿಸಿಸಿಐಗೆ ಕ್ರಿಕೆಟ್​ ಆಸ್ಟ್ರೇಲಿಯಾದಿಂದ ಅಭಿನಂದನಾ ಪತ್ರ - ನಿಕ್​ ಹ್ಯಾಕ್ಲೆ

ಮಂಗಳವಾರ ಗಬ್ಬಾದಲ್ಲಿ 3 ವಿಕೆಟ್​ಗಳ ಜಯ ಸಾಧಿಸುವ ಮೂಲಕ ರಹಾನೆ ನೇತೃತ್ವದ 2ನೇ ದರ್ಜೆ ಭಾರತ ತಂಡ ಸಂಪೂರ್ಣ ಫಿಟ್​ ಇರುವ ಆಸ್ಟ್ರೇಲಿಯಾ ತಂಡವನ್ನು 2-1ರಲ್ಲಿ ಮಣಿಸಿ ಬಾರ್ಡರ್​ ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಕ್ರಿಕೆಟ್​ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಮತ್ತು ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ
ಕ್ರಿಕೆಟ್ ಆಸ್ಟ್ರೇಲಿಯಾ
author img

By

Published : Jan 20, 2021, 10:34 PM IST

ಬ್ರಿಸ್ಬೇನ್: ಕೋವಿಡ್ ನಡುವೆಯೂ ಆಸ್ಟ್ರೇಲಿಯಾಗೆ ಬಂದು ಐತಿಹಾಸಿಕ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಕ್ಕೆ ಭಾರತ ತಂಡ ಮತ್ತು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಕ್ರಿಕೆಟ್ ಆಸ್ಟ್ರೇಲಿಯಾ ಧನ್ಯವಾದ ಅರ್ಪಿಸಿದೆ.

ಮಂಗಳವಾರ ಗಬ್ಬಾದಲ್ಲಿ 3 ವಿಕೆಟ್​ಗಳ ಜಯ ಸಾಧಿಸುವ ಮೂಲಕ ರಹಾನೆ ನೇತೃತ್ವದ 2ನೇ ದರ್ಜೆ ಭಾರತ ತಂಡ ಸಂಪೂರ್ಣ ಫಿಟ್​ ಇರುವ ಆಸ್ಟ್ರೇಲಿಯಾ ತಂಡವನ್ನು 2-1ರಲ್ಲಿ ಮಣಿಸಿ ಬಾರ್ಡರ್​ ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಕ್ರಿಕೆಟ್​ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಮತ್ತು ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಕ್ರಿಕೆಟ್​ ಆಸ್ಟ್ರೇಲಿಯಾ ಕಡೆಯಿಂದ ಸರಣಿ ಗೆದ್ದ ಭಾರತ ತಂಡಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಟೀಂ ಇಂಡಿಯಾದ ಈ ಅಭೂತಪೂರ್ವ ಜಯ ಮುಂದಿನ ತಲೆಮಾರಿನವರೆಗೂ ನೆನಪಿನಲ್ಲಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಪಾತ್ರ ಮಹತ್ವದ್ದಾಗಿತ್ತು ಎಂದು ಸಿಎ ಪತ್ರದಲ್ಲಿ ತಿಳಿಸಿದೆ.

  • An open letter to our friends in Indian Cricket, and to everyone who played their part to help deliver this memorable series! 🤜🤛 @BCCI pic.twitter.com/rk4cluCjEz

    — Cricket Australia (@CricketAus) January 20, 2021 " class="align-text-top noRightClick twitterSection" data=" ">

ಪ್ರಮುಖವಾಗಿ ಅತ್ಯಂತ ಕಠಿಣ ಬಯೋ ಬಬಲ್​​ನಲ್ಲಿ ಉಳಿದುಕೊಂಡು ವಿಶ್ವದಾದ್ಯಂತ ಜನರಿಗೆ ಅಗತ್ಯವಾಗಿ ಬೇಕಾಗಿದ್ದ ಸಂದರ್ಭದಲ್ಲಿ ಸಂತೋಷನ್ನು ಉಂಡುಮಾಡಲು ನೆರವಾದ ಭಾರತದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ಸ್ನೇಹ, ವಿಶ್ವಾಸ ಮತ್ತು ಬದ್ಧತೆಗೆ ಎಂದೆಂದಿಗೂ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸಿಡ್ನಿ ಟೆಸ್ಟ್‌ನಲ್ಲಿ ಪ್ರೇಕ್ಷಕರಿಂದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರಿತ್ ಬುಮ್ರಾ ವಿರುದ್ಧದ ಜನಾಂಗೀಯ ನಿಂದನೆ ವಿಚಾರಕ್ಕೆ ಸಿಎ ವಿಷಾದ ವ್ಯಕ್ತಪಡಿಸುತ್ತದೆ. ಆದರೆ ಇಂತಹ ಅಹಿತಕರ ವಿವಾದಗಳನ್ನು ಬದಿಗೊತ್ತಿ ಕ್ರಿಕೆಟ್‌ ಮೇಲೆ ಗಮನ ಕೇಂದ್ರೀಕರಿಸಿ ಸರಣಿ ಯಶಸ್ವಿಯಾಗಿರುವುದು ನಮಗೆ ಸಂತೋಷವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನು ಓದಿ:16 ಆಟಗಾರರನ್ನು ಉಳಿಸಿಕೊಂಡ ಪಂಜಾಬ್​: ಮ್ಯಾಕ್ಸ್​​ವೆಲ್​, ಕರುಣ್​​ ನಾಯರ್​ಗೆ ಗೇಟ್​ಪಾಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.