ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಗೆ ಮುನ್ನ ಭಾರತ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಮೈದಾನಕ್ಕಿಳಿಯಲು ಕಾಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗುವ ಮೂಲಕ ಭಾರತದಲ್ಲಿ ದೇಶೀಯ ಕ್ರಿಕೆಟ್ ಆರಂಭವಾಗಲಿದೆ. ಈ ನಡುವೆ ಟ್ವೀಟ್ ಮಾಡಿರುವ ಅಗರ್ವಾಲ್, ಮೈದಾನಕ್ಕೆ ಇಳಿಯುವುದಕ್ಕಾಗಿ ಕಾಯಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್ ಆರಂಭಿಸಿ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಜರ್ಸಿಯನ್ನು ಧರಿಸಿರುವ ಚಿತ್ರದೊಂದಿಗೆ ಟ್ವಿಟರ್ನಲ್ಲಿ ಬರೆದಿದ್ದಾರೆ.
-
Can't wait to hit the ground running.
— Mayank Agarwal (@mayankcricket) August 4, 2020 " class="align-text-top noRightClick twitterSection" data="
Bring it on! 👊🏻 @lionsdenkxip#SaddaPunjab #KXIP #IPL2020 pic.twitter.com/Px1svgY8qX
">Can't wait to hit the ground running.
— Mayank Agarwal (@mayankcricket) August 4, 2020
Bring it on! 👊🏻 @lionsdenkxip#SaddaPunjab #KXIP #IPL2020 pic.twitter.com/Px1svgY8qXCan't wait to hit the ground running.
— Mayank Agarwal (@mayankcricket) August 4, 2020
Bring it on! 👊🏻 @lionsdenkxip#SaddaPunjab #KXIP #IPL2020 pic.twitter.com/Px1svgY8qX
ಅಗರ್ವಾಲ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಾಕಷ್ಟು ಭರವಸೆಯನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಉತ್ತಮ ಪ್ರದರ್ಶನ ತೋರಲಿದ್ದು, ಸಾಕಷ್ಟು ರನ್ ಗಳಿಸುತ್ತಾರೆ ಎಂದು ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ.
ಅಗರ್ವಾಲ್ ಇದುವರೆಗೆ ಭಾರತಕ್ಕಾಗಿ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಮೂರು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಒಳಗೊಂಡಂತೆ 974 ರನ್ ಗಳಿಸಿದ್ದಾರೆ.
"ಅಗರ್ವಾಲ್ ದೇಶೀಯ ಆಟಗಳಲ್ಲಿ ಮತ್ತು ಭಾರತ -ಎ ತಂಡದಲ್ಲಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಒಂದು ಅಥವಾ ಎರಡು ವರ್ಷ ದೇಶೀಯ ಕ್ರಿಕೆಟ್ ಆಡುವ ಮತ್ತು ಇದ್ದಕ್ಕಿದ್ದಂತೆ ಬೆಳಕಿಗೆ ಬರುವ ಇತರ ಆಟಗಾರರಂತಲ್ಲ ಮಯಾಂಕ್. ಅವರು ಸಮಯ ಕಳೆದಂತೆ ಮತ್ತಷ್ಟು ಉತ್ತಮವಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ನೆಹ್ರಾ ಹೇಳಿದ್ದಾರೆ.