ETV Bharat / sports

ನನಗೆ ಕೊರೊನಾ ಸೋಂಕು ತಗುಲಿಲ್ಲ.. ವಿಂಡೀಸ್ ದಿಗ್ಗಜ ಲಾರಾ ಸ್ಪಷ್ಟನೆ - ಬ್ರಿಯಾನ್ ಲಾರಾ ಲೇಟೆಸ್ಟ್ ನ್ಯೂಸ್

ತಮಗೆ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿ ಸುಳ್ಳು, ನಾನು ಆರೋಗ್ಯವಾಗಿದ್ದೇನೆ ಎಂದು ವೆಸ್ಟ್ ಇಂಡೀಸ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಸ್ಪಷ್ಟಪಡಿಸಿದ್ದಾರೆ.

Brian Lara denies testing positive for COVID-19,
ಬ್ರಿಯಾನ್ ಲಾರಾ ಸ್ಪಷ್ಟನೆ
author img

By

Published : Aug 6, 2020, 12:11 PM IST

ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾಗಿರುವ ಬಗ್ಗೆ ಹರಡಿರುವ ವದಂತಿಗಳನ್ನು ವೆಸ್ಟ್ ಇಂಡೀಸ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ನಿರಾಕರಿಸಿದ್ದಾರೆ.

ಮಾಜಿ ವಿಂಡೀಸ್ ಬ್ಯಾಟ್ಸ್‌ಮನ್ ಲಾರಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ವದಂತಿ ನಿಜವಲ್ಲ. ಜನರು ಈ ಸೋಂಕು ನಕಾರಾತ್ಮಕತೆಯನ್ನು ಹರಡುವ ಸಾಧನವಾಗಿ ಬಳಸಬಾರದು ಎಂದು ಹೇಳಿದ್ದಾರೆ.

'ಎಲ್ಲರಿಗೂ ನಮಸ್ಕಾರ, ನಾನು ಕೊರೊನಾ ಸೋಂಕಿಗೆ ತುತ್ತಾಗಿದ್ದೇನೆ ಎಂಬ ವದಂತಿಗಳನ್ನು ಓದಿದ್ದೇನೆ. ನಾನು ಈ ಬಗ್ಗೆ ಸ್ಪಷ್ಟಪಡಿಸುವುದು ಮುಖ್ಯವಾಗಿದೆ. ಈ ಮಾಹಿತಿಯು ಸುಳ್ಳು ಮಾತ್ರವಲ್ಲ, ಈಗಾಗಲೇ ಸಂಕಟವನ್ನು ಅನುಭವಿಸುತ್ತಿರುವ ಸಮುದಾಯದಲ್ಲಿ ಇಂತಹ ಭೀತಿಯನ್ನು ಹರಡುವುದು ಸಹ ಹಾನಿಕಾರಕವಾಗಿದೆ' ಎಂದು ಕೋವಿಡ್ ಪರಿಸ್ಥಿತಿಯ ಬಗ್ಗೆ ಲಾರಾ ಇನ್​​​ಸ್ಟಾಗ್ರಾಂ​ ಪೋಸ್ಟ್​ನಲ್ಲಿ ಹೇಳಿದ್ದಾರೆ.

Brian Lara denies testing positive for COVID-19,
ಬ್ರಿಯಾನ್ ಲಾರಾ ಸ್ಪಷ್ಟನೆ

'ನೀವು ವೈಯಕ್ತಿಕವಾಗಿ ನನ್ನ ಮೇಲೆ ಪರಿಣಾಮ ಬೀರದಿದ್ದರೂ, ತಪ್ಪಾದ ಮಾಹಿತಿಯ ಹರಡುವಿಕೆಯು ಅಸಡ್ಡೆ ಮತ್ತು ನನ್ನ ಆಪ್ತವಲಯದ ಬಹಳಷ್ಟು ಜನರಲ್ಲಿ ಅನಗತ್ಯ ಚಿಂತೆ ಉಂಟುಮಾಡುತ್ತದೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಎಲ್ಲರೂ ಸುರಕ್ಷಿತವಾಗಿರಲು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಏಕೆಂದರೆ ಕೋವಿಡ್- 19 ಮುಂದಿನ ದಿನಗಳಲ್ಲಿ ಕಡಿಮೆ ಆಗುವುದಿಲ್ಲ' ಎಂದು ಹೇಳಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಲಾರಾ ಸಾಧನೆ

ಕಳೆದ 24 ಗಂಟೆಗಳಲ್ಲಿ, ಲಾರಾ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅನೇಕ ಮಂದಿ ಜಾಲತಾಣದಲ್ಲಿ ವದಂತಿ ಹಬ್ಬಿದ್ದರು. ಹೀಗಾಗಿ ವಿಂಡೀಸ್ ತಂಡದ ಮಾಜಿ ನಾಯಕ ತಾವು ಪರೀಕ್ಷೆಗೆ ಒಳಗಾಗಿದ್ದು ಸೋಂಕು ತಗುಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.