ETV Bharat / sports

ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಹುಡುಗ ಶ್ರೇಷ್ಠ ಆಟಗಾರನಾಗಿದ್ದಾನೆ : ವಿರೇಂದ್ರ ಸೆಹ್ವಾಗ್​ - Brisbane Test

ಸರಣಿ ಆರಂಭಕ್ಕೂ ಮುನ್ನ ಟೆಸ್ಟ್​ ತಂಡಕ್ಕೆ ಸಿರಾಜ್​ ಆಯ್ಕೆಯಾಗಿದ್ದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಮತ್ತು ಆಯ್ಕೆ ಸಮಿತಿಯನ್ನು ಟೀಕಿಸಿದ್ದರು. ಆದರೆ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಯುವ ವೇಗಿ ಟೀಕೆಗಳಿಗೆ ಪ್ರದರ್ಶನದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅವರು ಆಡಿರುವ ಮೂರು ಪಂದ್ಯಗಳಿಂದ 13 ವಿಕೆಟ್​ ಪಡೆದು ಮಿಂಚಿದ್ದಾರೆ..

ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್​ ಸರಣಿ
ವಿರೇಂದ್ರ ಸೆಹ್ವಾಗ್
author img

By

Published : Jan 18, 2021, 5:33 PM IST

Updated : Jan 18, 2021, 5:40 PM IST

ನವದೆಹಲಿ : ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಕೊನೆಯ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಪಡೆದಿರುವ ಯುವ ವೇಗಿ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್​ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​, ಸರಣಿ ಶ್ರೇಷ್ಠ ಪ್ರಶಸ್ತಿ ಸಿರಾಜ್​ಗೆ ಸಿಗಬೇಕೆಂದು ಆಶಿಸಿದ್ದಾರೆ.

ಸರಣಿ ಆರಂಭಕ್ಕೂ ಮುನ್ನ ಟೆಸ್ಟ್​ ತಂಡಕ್ಕೆ ಸಿರಾಜ್​ ಆಯ್ಕೆಯಾಗಿದ್ದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಕೊಹ್ಲಿ ಮತ್ತು ಆಯ್ಕೆ ಸಮಿತಿಯನ್ನು ಟೀಕಿಸಿದ್ದರು. ಆದರೆ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಯುವ ವೇಗಿ ಟೀಕೆಗಳಿಗೆ ಪ್ರದರ್ಶನದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅವರು ಆಡಿರುವ ಮೂರು ಪಂದ್ಯಗಳಿಂದ 13 ವಿಕೆಟ್​ ಪಡೆದು ಮಿಂಚಿದ್ದಾರೆ.

  • The boy has become a man on this tour. Siraj, Leader of the attack in his first Test series and he has led from.the front. The way newcomers have performed for India on this tour will be etched in memories for a long long time. Will be fitting if they retain the trophy. pic.twitter.com/8bRvMI1iwR

    — Virender Sehwag (@virendersehwag) January 18, 2021 " class="align-text-top noRightClick twitterSection" data=" ">

"ಸಿರಾಜ್​ ಈ ಪ್ರವಾಸದಲ್ಲೇ ಶ್ರೇಷ್ಠ ಆಟಗಾರನಾಗಿದ್ದಾರೆ. ಮೊದಲ ಸರಣಿಯಲ್ಲೇ ತಂಡದ ಬೌಲಿಂಗ್ ವಿಭಾಗದ ನಾಯಕನಾಗಿದ್ದಲ್ಲದೆ, ತಮ್ಮಂತೆಯೇ ಅನುಭವಿಗಳಲ್ಲದವರನ್ನ ಮುಂದೆ ನಿಂತು ನಡೆಸಿದ್ದಾರೆ.

ಈ ಪ್ರವಾಸದಲ್ಲಿ ಹೊಸ ಆಟಗಾರನಾಗಿ ಬಂದು ಭಾರತ ತಂಡಕ್ಕಾಗಿ ಈ ರೀತಿಯ ಪ್ರದರ್ಶನ ತೋರಿರುವ ನೆನಪು ದೀರ್ಘಕಾಲ ಉಳಿಯಲಿದೆ. ಖಂಡಿತ ಟ್ರೋಫಿಯನ್ನು ಉಳಿಸಿಕೊಳ್ಳುವುದಕ್ಕೆ ಭಾರತ ಸಮರ್ಥ ತಂಡವಾಗಿದೆ " ಎಂದು ಸೆಹ್ವಾಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸಿರಾಜ್​ ಮೊದಲ ಪಂದ್ಯದಲ್ಲಿ 5, 2ನೇ ಪಂದ್ಯದಲ್ಲಿ 2 ಹಾಗೂ ಕೊನೆಯ ಪಂದ್ಯದಲ್ಲಿ 6 ವಿಕೆಟ್​ ಪಡೆದಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಕಮಿನ್ಸ್​ 15 ವಿಕೆಟ್​ ಪಡೆದು ಅಗ್ರಸ್ಥಾನದಲ್ಲಿದ್ರೆ, ಸಿರಾಜ್​ 13 ವಿಕೆಟ್​ ಪಡೆದು 2ನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ನೋವು, ನಿಂದನೆ, ಅವಮಾನ ಮೆಟ್ಟಿ ನಿಂತ ಸಿರಾಜ್: ಪ್ರಸಕ್ತ ಸರಣಿಯಲ್ಲಿ 5 ವಿಕೆಟ್ ಪಡೆದ ಏಕೈಕ ಭಾರತೀಯ

Last Updated : Jan 18, 2021, 5:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.