ETV Bharat / sports

ಎರಡೂ ಕಡೆ ರನ್ ​ಔಟ್​ ಆದ ಅಡಿಲೇಡ್​ ಬ್ಯಾಟ್ಸ್​ಮನ್​: ವಿಡಿಯೋ ನೋಡಿ

author img

By

Published : Jan 24, 2021, 7:34 PM IST

ಸಿಡ್ನಿ ಥಂಡರ್​ ವಿರುದ್ಧ ನಡೆದ ಪಂದ್ಯದಲ್ಲಿ 10ನೇ ಓವರ್​ರಲ್ಲಿ ಈ ಘಟನೆ ನಡಿದಿದೆ. ಕ್ರಿಸ್​ ಗ್ರೀನ್ ಬೌಲಿಂಗ್​ನಲ್ಲಿ​ ಅಡಿಲೇಡ್​ ತಂಡದ ಪೀಟರ್ ಸಾಲ್ಟ್​ ಚೆಂಡನ್ನು ಸ್ಟ್ರೇಟ್​ ಡ್ರೈವ್​ ಮಾಡಿದರು. ಗ್ರೀನ್​ ಆ ಚೆಂಡನ್ನು ತಡೆಯುವ ಪ್ರಯತ್ನ ಮಾಡಿದರು. ಅವರ ಬೆರಳಿಗೆ ಬಿದ್ದ ಚೆಂಡು ನೇರವಾಗಿ ಸ್ಟಂಪ್​ಗೆ ಅಪ್ಪಳಿಸಿತು. ಆಷ್ಟರಲ್ಲಿ ವೆದರ್ಲ್ಯಾಂಡ್​ ಕ್ರೀಸ್​ ಬಿಟ್ಟಿದ್ದರಿಂದ ಗ್ರೀನ್​ ರನ್​ಔಟ್​ಗೆ ಅಪೀಲ್​ ಮಾಡಿದರು.

ಜ್ಯಾಕ್ ವೆದರ್ಲ್ಯಾಂಡ್​ ರನ್​ಔಟ್​
ಜ್ಯಾಕ್ ವೆದರ್ಲ್ಯಾಂಡ್​ ರನ್​ಔಟ್​

ಅಡಿಲೇಡ್: ಬಿಗ್​ಬ್ಯಾಶ್ ಲೀಗ್​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅಡಿಲೇಡ್​ ಸ್ಟ್ರೈಕರ್ಸ್​ ಬ್ಯಾಟ್ಸ್​ಮನ್​ ಜ್ಯಾಕ್​ ವೆದರ್​ಲ್ಯಾಂಡ್ ಸ್ಟ್ರೈಕ್ ಮತ್ತು ನಾನ್​ ಸ್ಟ್ರೈಕ್​ ಎರಡೂ ಕಡೆ ವಿಲಕ್ಷಣ ರೀತಿಯಲ್ಲಿ ರನ್ ಔಟ್​ ಆಗುವ ಮೂಲಕ ಟ್ರೋಲ್​ ಆಗುತ್ತಿದ್ದಾರೆ.

ಸಿಡ್ನಿ ಥಂಡರ್​ ವಿರುದ್ಧ ನಡೆದ ಪಂದ್ಯದಲ್ಲಿ 10ನೇ ಓವರ್​ರಲ್ಲಿ ಈ ಘಟನೆ ನಡಿದಿದೆ. ಕ್ರಿಸ್​ ಗ್ರೀನ್ ಬೌಲಿಂಗ್​ನಲ್ಲಿ​ ಅಡಿಲೇಡ್​ ತಂಡದ ಪೀಟರ್ ಸಾಲ್ಟ್​ ಚೆಂಡನ್ನು ಸ್ಟ್ರೇಟ್​ ಡ್ರೈವ್​ ಮಾಡಿದರು. ಗ್ರೀನ್​ ಆ ಚೆಂಡನ್ನು ತಡೆಯುವ ಪ್ರಯತ್ನ ಮಾಡಿದರು. ಅವರ ಬೆರಳಿಗೆ ಬಿದ್ದ ಚೆಂಡು ನೇರವಾಗಿ ಸ್ಟಂಪ್​ಗೆ ಅಪ್ಪಳಿಸಿತು. ಆಷ್ಟರಲ್ಲಿ ವೆದರ್ಲ್ಯಾಂಡ್​ ಕ್ರೀಸ್​ ಬಿಟ್ಟಿದ್ದರಿಂದ ಗ್ರೀನ್​ ರನ್​ಔಟ್​ಗೆ ಅಪೀಲ್​ ಮಾಡಿದರು.

ಮತ್ತೆ ಚೆಂಡು ಸ್ಟಂಪ್​ಗೆ ಬಡಿದ ನಂತರ ಪೀಟರ್ ಸಾಲ್ಟ್​ ಒಂದು ರನ್​ಗಾಗಿ ಕರೆ ಮಾಡಿದರು. ವೆದರ್ಲ್ಯಾಂಡ್​ ಮತ್ತೆ ಓಡಿದರು. ಆದರೆ ಫೀಲ್ಡರ್​ ಕೀಪರ್​ಗೆ ಚೆಂಡನ್ನು ಸರಿಯಾದ ಸಮಯಕ್ಕೆ ನೀಡಿದ್ದರಿಂದ ಅಲ್ಲೂ ಕೂಡ ಕ್ರೀಸ್​ ಮುಟ್ಟುವಲ್ಲಿ ಅವರು ವಿಫಲರಾದರು. ಮೂರನೇ ಅಂಪೈರ್​ ಟಿವಿ ರೀಪ್ಲೇ ವೀಕ್ಷಿಸಿದಾಗ ವೆದರ್ಲ್ಯಾಂಡ್​ ಎರಡೂ ಕಡೆ ರನ್​ಔಟ್​ ಆಗಿರುವುದು ಸ್ಪಷ್ಟವಾಗಿತ್ತು.

​ಅದಾಗ್ಯೂ ಒಬ್ಬ ಬ್ಯಾಟ್ಸ್​ಮನ್​ ಒಂದೇ ಎಸೆತದಲ್ಲಿ ಎರಡು ಬಾರಿ ಔಟ್ ಆಗುವುದು ಆಸಾಧ್ಯವಾಗಿರುವುದರಿಂದ ನಾನ್​ಸ್ಟ್ರೈಕರ್​ ಕೊನೆಯಲ್ಲಿ ಗ್ರೀನ್​ ಸಾಹಸದಿಂದ ರನ್​ ಔಟ್ ಆಗಿದ್ದನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಈ ಪಂದ್ಯದಲ್ಲಿ ಅಡಿಲೇಡ್​ ಸ್ಟ್ರೈಕರ್ಸ್​ 159 ರನ್ ​ಗಳಿಸಿದರೆ, ಇದನ್ನು ಹಿಂಬಾಲಿಸಿದ ಸಿಡ್ನಿ ಥಂಡರ್​ 153 ರನ್​ಗಳನ್ನಷ್ಟೇ ಗಳಿಸಿಲು ಶಕ್ತವಾಗಿ 6 ರನ್​ಗಳ ಸೋಲು ಕಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.