ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಬೆನ್ ಸ್ಟೋಕ್ಸ್ 2020 ಟೆಸ್ಟ್ ಕ್ರಿಕೆಟ್ನಲ್ಲಿ ಹಲವಾರು ದಾಖಲೆಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಸುಮಾರು 5 ದಶಕಗಳ ನಂತರ ಇಂಗ್ಲೆಂಡ್ಗೆ ಏಕದಿನ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಬೆನ್ಸ್ಟೋಕ್ಸ್ 2020ರ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 176 ರನ್ಗಳಿಸಿದ್ದ ಅವರು ಎರಡನೇ ಇನ್ನಿಂಗ್ಸ್ನಲ್ಲಿ 57 ಎಸೆತಗಳಲ್ಲಿ 78 ರನ್ ಸಿಡಿಸಿದ್ದರು. ಜೊತೆಗೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2020ರ ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಹಲವು ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚು ರನ್ಗಳಿಸಿರುವ ಅವರು, ಬೌಲಿಂಗ್ನಲ್ಲೂ ಹೆಚ್ಚು ವಿಕೆಟ್ ಪಡೆದವರಾಗಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಇಷ್ಟೇ ಅಲ್ಲದೆ ಅತಿ ಹೆಚ್ಚು ಸಿಕ್ಸರ್, ಫೋರ್ಸ್, ಹೆಚ್ಚು ಕ್ಯಾಚ್ ಕೂಡ ಅವರ ಹೆಸರಿನಲ್ಲಿಯೇ ಇದೆ.
2020ರ ಟೆಸ್ಟ್ ಕ್ರಿಕೆಟ್ನಲ್ಲಿ ಬೆನ್ಸ್ಟೋಕ್ಸ್ ಸಾಧನೆ
- ಹೆಚ್ಚು ರನ್ : 612
- ಹೆಚ್ಚು ವಿಕೆಟ್: 17
- ಹೆಚ್ಚು ಕ್ಯಾಚ್: 12
- ಹೆಚ್ಚು ಶತಕ: 02
- ಹೆಚ್ಚು ಫೋರ್ಸ್ : 65
- ಹೆಚ್ಚು ಸಿಕ್ಸರ್ಸ್: 11