ETV Bharat / sports

ಸ್ಟೋಕ್ಸ್​, ಡೊಮಿನಿಕ್ ಭರ್ಜರಿ ಶತಕ: ಇಂಗ್ಲೆಂಡ್​ ಬೃಹತ್​ ಮೊತ್ತ, ವಿಂಡೀಸ್​ಗೆ ಆರಂಭಿಕ ಆಘಾತ!

ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ​​ ಟೆಸ್ಟ್​ ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 459 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ. ಬಳಿಕ ವಿಂಡೀಸ್ ಮೊದಲ ಇನ್ನಿಂಗ್ಸ್​ನಲ್ಲಿ​ ಒಂದು ವಿಕೆಟ್​ ಕಳೆದುಕೊಂಡು 32 ರನ್​ ಗಳಿಸಿದೆ.

ben-stokes-dom-sibley-century-england-in-strong-position-in-second-test
ಸ್ಟೋಕ್ಸ್​, ಡೊಮಿನಿಕ್ ಭರ್ಜರಿ ಶತಕ
author img

By

Published : Jul 18, 2020, 5:10 AM IST

ಮ್ಯಾಂಚೆಸ್ಟರ್​: ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ​​ ಟೆಸ್ಟ್​ ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 459 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ, ಅಲ್ಲದೆ ವಿಂಡೀಸ್​ಗೆ ಆರಂಭಿಕ ಆಘಾತ ನೀಡಿದೆ.

ಮೊದಲ ದಿನ ಮಳೆಯಿಂದ ಪಂದ್ಯವು ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿದ್ದರೂ ದಿನದಾಟದ ಅಂತ್ಯಕ್ಕೆ ಆಂಗ್ಲರು 82 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 207 ರನ್​ ಗಳಿಸಿದ್ದರು. ಅಜೇಯ ಅರ್ಧಶತಕ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರ ಡೊಮಿನಿಕ್​ ಸಿಬ್ಲಿ ಹಾಗೂ ಆಲ್​ರೌಂಡರ್​ ಬೆನ್​ ಸ್ಟೋಕ್ಸ್ ಭರ್ಜರಿ ಶತಕಗಳನ್ನು ಸಿಡಿಸಿ ಇಂಗ್ಲೆಂಡ್​ನ ಬೃಹತ್​ ಮೊತ್ತಕ್ಕೆ ನೆರವಾದರು.

ಡೊಮಿನಿಕ್​ ಸಿಬ್ಲಿ ತಾಳ್ಮೆಯ 120 ರನ್​ ಹಾಗೂ ಬೆನ್​ ಸ್ಟೋಕ್ಸ್ 176 ರನ್​ ಬಾರಿಸಿದರಲ್ಲದೆ, ನಾಲ್ಕನೇ ವಿಕೆಟ್​ಗೆ 260 ರನ್​ಗಳ ಭರ್ಜರಿ ಜೊತೆಯಾಟವಾಡಿದರು. 2ನೇ ದಿನದಾಟದ ಪೂರ್ಣ ಪ್ರಾರಮ್ಯ ಮೆರೆದ ಆಂಗ್ಲರು ವಿಂಡೀಸ್​ ಬೌಲರ್​ಗಳನ್ನು ಕಾಡಿದರು. ವಿಕೆಟ್​ ಕೀಪರ್​ ಬ್ಯಾಟ್ಸ್​​ಮನ್ ಜೋಶ್​ ಬಟ್ಲರ್​ 41, ಡಾನ್​ ಬೆಸ್​ 31 ರನ್​ಗಳ ಕಾಣಿಕೆ ನೀಡಿದರು. ಒಟ್ಟಾರೆ ಆಂಗ್ಲ ತಂಡ 162 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 459 ರನ್​ ಬಾರಿಸಿ ಡಿಕ್ಲೇರ್​ ಮಾಡಿಕೊಂಡಿತು. ವಿಂಡೀಸ್​ ಪರ ಸ್ಪಿನ್ನರ್​ ರೋಸ್ಟನ್​ ಚೇಸ್​ 5 ವಿಕೆಟ್ ಕಬಳಿಸಿದರು.

ಬಳಿಕ ಬ್ಯಾಟಿಂಗ್​ಗಳಿದ ವಿಂಡೀಸ್​ ತಂಡಕ್ಕೆ ಯುವ ವೇಗಿ ಸ್ಯಾಮ್​ ಕರನ್​ ಆರಂಭಿಕ ಆಘಾತ ನೀಡಿದ್ದಾರೆ. 32 ರನ್​ ಗಳಿಸಿರುವ ಕೆರಿಬಿಯನ್​ ತಂಡ ಒಂದು ವಿಕೆಟ್​ ಕಳೆದುಕೊಂಡಿದೆ. ಆರಂಭಿಕ ಆಟಗಾರ ಜಾನ್​ ಕಾಂಪ್ಬೆಲ್​ 12 ರನ್​ ಗಳಿಸಿ ಔಟ್​ ಆದರು. ಕ್ರೇಗ್​ ಬ್ರಾಥ್​ವೈಟ್​ 6 ಹಾಗೂ ನೈಟ್​ ವಾಚ್​ಮನ್​ ಅಲ್ಜಾರಿ ಜೋಸೆಫ್​ 14 ರನ್​ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್​ ಗೆದ್ದಿರುವ ಕೆರಿಬಿಯನ್ನರು ಈ ಪಂದ್ಯ ಜಯಿಸಿ ಸರಣಿ ಗೆಲುವಿನ ವಿಶ್ವಾಸದಲ್ಲಿದ್ದರೆ, ಆಂಗ್ಲರು ಸರಣಿಯಲ್ಲಿ ಸಮಬಲ ಸಾಧಿಸಲು ಈ ಪಂದ್ಯ ಗೆಲ್ಲಲೇಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.