ETV Bharat / sports

ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಮಹಿಮ್​ ವರ್ಮಾ - ಬಿಸಿಸಿಐ ಉಪಾಧ್ಯಕ್ಷ ಮಹಿಮ್​ ವರ್ಮಾ ಬಿಸಿಸಿಐ

ಬಿಸಿಸಿಐ ಉಪಾಧ್ಯಕ್ಷರಾಗಿದ್ದ ಮಹಿಮ್ ವರ್ಮಾ ಅವರ ತಂಡ ಉತ್ತರಖಂಡ್‌ನ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಅವರ ಕಳೆದ ತಿಂಗಳು ಅಧಿಕಾರಕ್ಕೆ ಬಂದಿತ್ತು. ಇದೀಗ ಉತ್ತರಖಂಡ್​ನ ಕಾರ್ಯದರ್ಶಿ ಪಟ್ಟ ಗಿಟ್ಟಿಸಿಕೊಂಡಿರುವ ಅವರು ತಮ್ಮ ರಾಜಿನಾಮೆಯನ್ನು ಬಿಸಿಸಿಐ ಸಿಇಒ ರಾಹುಲ್​ ಜೋಹ್ರಿಗೆ ಸಲ್ಲಿಸಿದ್ದಾರೆ.

ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಮಹಿಮ್​ ವರ್ಮಾ

author img

By

Published : Apr 14, 2020, 9:35 AM IST

ನವದೆಹಲಿ: ಉತ್ತರಖಂಡ್‌ನ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಜವಾಬ್ದಾರಿ ದೊರೆತಿರುವುದರಿಂದ ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ಮಹಿಮ್​ ವರ್ಮಾ ರಾಜಿನಾಮೆ ನೀಡಿದ್ದಾರೆ.

ಬಿಸಿಸಿಐ ಉಪಾಧ್ಯಕ್ಷರಾಗಿದ್ದ ಮಹಿಮ್ ವರ್ಮಾ ಅವರ ತಂಡ ಉತ್ತರಖಂಡ್‌ನ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಲ್ಲಿ ಅವರ ಕಳೆದ ತಿಂಗಳು ಅಧಿಕಾರಕ್ಕೆ ಬಂದಿತ್ತು. ಇದೀಗ ಉತ್ತರಖಂಡ್​ನ ಕಾರ್ಯದರ್ಶಿ ಪಟ್ಟ ಗಿಟ್ಟಿಸಿಕೊಂಡಿರುವ ಅವರು ತಮ್ಮ ರಾಜಿನಾಮೆಯನ್ನು ಬಿಸಿಸಿಐ ಸಿಇಒ ರಾಹುಲ್​ ಜೊಹ್ರಿಗೆ ಸಲ್ಲಿಸಿದ್ದಾರೆ.

ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಮಹಿಮ್​ ವರ್ಮಾ
ಮಹಿಮ್​ ವರ್ಮಾ-ಸೌರವ್​ ಗಂಗೂಲಿ

"ಸರಾಗವಾಗಿ ನಡೆಯದ ನನ್ನ ರಾಜ್ಯದ ಕ್ರಿಕೆಟ್​ ಅಸೋಸಿಯೇಷನ್‌ ಸೂಕ್ಷ್ಮವಾಗಿ ನೋಡಿಕೊಳ್ಳಬೇಕಿದೆ. ಹೀಗಾಗಿ ನನ್ನ ರಾಜೀನಾಮೆಯನ್ನು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ಕಳುಹಿಸಿದ್ದೇನೆ. ನನ್ನ ರಾಜಿನಾಮೆ ಸ್ವೀಕರಿಸಲ್ಪಡುತ್ತದೆ ಎಂದು ನನಗೆ ಭರವಸೆಯಿದೆ" ಎಂದು ಸೋಮವಾರ ಮಹಿಮ್​ ತಿಳಿಸಿದ್ದಾರೆ.

ಬಿಸಿಸಿಐ ಸಂವಿಧಾನದ ಪ್ರಕಾರ ಒಬ್ಬ ವ್ಯಕ್ತಿ ರಾಜ್ಯ ಮತ್ತು ರಾಷ್ಟ್ರೀಯ ಕ್ರಿಕೆಟ್​ ಅಸೋಸಿಯೇಷನ್​ನಲ್ಲಿ ಒಟ್ಟಿಗೆ ಎರಡು ಜವಾಬ್ದಾರಿ ನಿರ್ವಹಿಸುವಂತಿಲ್ಲ. ಹೀಗಾಗಿ ಮಹಿಮ್ ತಮ್ಮ ರಾಜ್ಯದ ಕ್ರಿಕೆಟ್​ ಅನ್ನು ಬೆಳೆಸುವ ಉದ್ದೇಶದಿಂದ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ನಾನು ಈ ವಿಚಾರವನ್ನು ಈಗಾಗಲೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರ ಬಳಿ ಚರ್ಚಿಸಿದ್ದೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನು ರಾಜ್ಯ ಮಂಡಳಿಯ ಅಧಿಕಾರ ಸ್ವೀಕರಿಸುತ್ತೇನೆ. ಅಸೋಸಿಯೇಷನ್​ ಗೊಂದಲದಲ್ಲಿದೆ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಬಿಸಿಸಿಐ ನಿಯಮದ ಪ್ರಕಾರ, ಬೋರ್ಡ್‌ನ ಒಂದು ಸ್ಥಾನ ತೆರವಾದರೆ 45 ದಿನಗಳ ಒಳಗೆ ಸಭೆ ನಡೆಸಬೇಕಾಗುತ್ತದೆ. ಸಭೆಯಲ್ಲಿ ತೆರವಾದ ಸ್ಥಾನಕ್ಕೆ ಬೇರೆಯವರನ್ನು ಆರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಧ್ಯಕ್ಕೆ ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಸೂಕ್ತ ಅಭ್ಯರ್ಥಿ ಆಯ್ಕೆಯ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಸದ್ಯ ದೇಶದಲ್ಲಿ ಕೊರೊನಾವೈರಸ್‌ನಿಂದ ಲಾಕ್‌ಡೌನ್ ಇರುವುದರಿಂದ ಬಿಸಿಸಿಐ ಮುಂದಿನ ನಡೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.