ETV Bharat / sports

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಡಿಸ್ಚಾರ್ಜ್: ಆಸ್ಪತ್ರೆ ಬಳಿ ದಾದಾ ಮಾತು! ವಿಡಿಯೋ - ಸೌರವ್ ಗಂಗೂಲಿ ಲೇಟೆಸ್ಟ್ ನ್ಯೂಸ್

ಗಂಗೂಲಿ ಅವರ ಆರೋಗ್ಯ ಸುಧಾರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಅವರು ಈಗ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Sourav Ganguly discharged from hospital today
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಡಿಸ್ಚಾರ್ಜ್
author img

By

Published : Jan 7, 2021, 10:04 AM IST

Updated : Jan 7, 2021, 11:00 AM IST

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಈದೇ ವೇಳೆ ಮಾತನಾಡಿದ ಗಂಗೂಲಿ ಆಸ್ಪತ್ರೆ ವೈದ್ಯಕೀಯ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ನಾನು ಸಂಪೂರ್ಣವಾಗಿ ಫಿಟ್ ಆಗಿದ್ದು, ಶೀಘ್ರದಲ್ಲೆ ನನ್ನ ಕರ್ತವ್ಯಕ್ಕೆ ಮರಳುತ್ತೇನೆ ಎಂದು ಅಭಿಮಾನಿಗಳತ್ತ ಕೈ ಬೀಸಿ ಮನೆಗೆ ತೆರಳಿದ್ರು.

ಸೌರವ್ ಗಂಗೂಲಿ

ಜನವರಿ 2 ರಂದು ಲಘು ಹೃದಯಾಘಾತದ ಬಳಿಕ ಕೋಲ್ಕತ್ತಾದ ವುಡ್​ಲ್ಯಾಂಡ್ಸ್​​ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಗಂಗೂಲಿ ಆರೋಗ್ಯ ಸುಧಾರಿಸಿದೆ. ಸುಮಾರು 15 ವೈದ್ಯರ ತಂಡ ಗಂಗೂಲಿ ಅವರ ಆರೋಗ್ಯ ತಪಾಸಣೆಯ ಬಳಿಕ, ಬುಧವಾರ ಅವರನ್ನು ಡಿಸ್ಚಾರ್ಜ್ ಮಾಡಲು ನಿರ್ಧರಿಸಿತ್ತು. ಆದರೆ ಗಂಗೂಲಿ ಅವರೇ ಮತ್ತೊಂದು ದಿನ ಆಸ್ಪತ್ರೆಯಲ್ಲಿ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದರು.

ಗಂಗೂಲಿ ಅವರೇ ಇನ್ನೊಂದು ದಿನ ಆಸ್ಪತ್ರೆಯಲ್ಲಿ ಉಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ವೈದ್ಯರು ನಿನ್ನೆ ಮಾಹಿತಿ ನೀಡಿದ್ದರು. ಹೀಗಾಗಿ ಬಿಸಿಸಿಐ ಅಧ್ಯಕ್ಷರು ನಿನ್ನೆ ಕೂಡ ಆಸ್ಪತ್ರೆಯಲ್ಲೇ ಉಳಿದಿದ್ದರು. ಇಂದು ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದರು

ಗಂಗೂಲಿ ಅವರ ಆರೋಗ್ಯ ಸುಧಾರಿಸಿದ್ದು ಬಿಡುಗಡೆ ನಂತರ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಅವರು ಶೀಘ್ರ ದಿನನಿತ್ಯದ ಸಹಜ ಜೀವನಕ್ಕೆ ಮರಳಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Last Updated : Jan 7, 2021, 11:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.