ETV Bharat / sports

14ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆ: ಬದಲಿ ಸ್ಥಳದ ಆಲೋಚನೆ ಇಲ್ಲ ಎಂದ ಧುಮಾಲ್​ - ಅರುಣ ಧುಮಾಲ್

ಐಪಿಎಲ್ ಗವರ್ನಿಂಗ್ ಕೌನ್ಸಿಲ್​ನಲ್ಲಿರುವ ಧುಮಾಲ್ ಕಳೆದ ಬಾರಿ ಸಾಂಕ್ರಾಮಿಕದಿಂದಾಗಿ ಯುಎಇಯಲ್ಲಿ ಹಿಂದಿನ ಐಪಿಎಲ್​ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಆದರೆ 14ನೇ ಆವೃತ್ತಿಗೆ ತವರಿನಲ್ಲೇ ನಡೆಸುವ ವಿಶ್ವಾಸದಲ್ಲಿ ಬಿಸಿಸಿಐ ಇದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಧುಮಾಲ್ ಹೇಳಿದ್ದಾರೆ.

ಐಪಿಎಲ್ 2021
ಐಪಿಎಲ್ 2021
author img

By

Published : Jan 31, 2021, 12:34 PM IST

ಮುಂಬೈ: ಭಾರತದಲ್ಲಿ ಕೋವಿಡ್​ 19 ಪ್ರಮಾಣ ಕಡಿಮೆಯಾಗುತ್ತಿದ್ದು, ದಿನಕ್ಕೆ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದರಿಂದ ನಾವು 2021ರ ಐಪಿಎಲ್​ಗಾಗಿ ಬ್ಯಾಕ್​ಅಪ್​ ಸ್ಥಳದ ಅವಕಾಶದ ಅವಶ್ಯಕತೆಯಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ ಧುಮಾಲ್ ಶನಿವಾರ ತಿಳಿಸಿದ್ದಾರೆ.

ಐಪಿಎಲ್ ಗವರ್ನಿಂಗ್ ಕೌನ್ಸಿಲ್​ನಲ್ಲಿರುವ ಧುಮಾಲ್ ಕಳೆದ ಬಾರಿ ಸಾಂಕ್ರಾಮಿಕದಿಂದಾಗಿ ಯುಎಇಯಲ್ಲಿ ಹಿಂದಿನ ಐಪಿಎಲ್​ ಆವೃತ್ತಿಯನ್ನು ಆಯೋಜಿಸಲಾಗಿತ್ತು, ಆದರೆ 14ನೇ ಆವೃತ್ತಿಗೆ ತವರಿನಲ್ಲೇ ನಡೆಸುವ ವಿಶ್ವಾಸದಲ್ಲಿ ಬಿಸಿಸಿಐ ಇದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಧುಮಾಲ್ ಹೇಳಿದ್ದಾರೆ.

"ನಾವು ಐಪಿಎಲ್​ಅನ್ನು ಭಾರತದಲ್ಲಿ ಆಯೋಜಿಸುವುದಕ್ಕೆ ಕೆಲಸ ಮಾಡುತ್ತಿದ್ದೇವೆ. ನಾವು ಶ್ರೀಮಂತ ಕ್ರಿಕೆಟ್​ ಲೀಗ್​ಅನ್ನು ಆಯೋಜಿಸುತ್ತೇವೆ ಎಂಬ ವಿಶ್ವಾಸವೂ ಇದೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಬದಲೀ​ ಸ್ಥಳದ ಬಗ್ಗೆ ಆಲೋಚನೆಯನ್ನೂ ಮಾಡಿಲ್ಲ. ಭಾರತ ಈ ಸಮಯದಲ್ಲಿ ಯುಎಇಗಿಂತಲೂ ಸುರಕ್ಷತೆಯುಳ್ಳ ಸ್ಥಳವಾಗಿದೆ. ಮುಂದೆ ಇನ್ನು ಉತ್ತಮ ರೀತಿಯಲ್ಲಿ ಸುಧಾರಿಸಿಕೊಳ್ಳಲಿದೆ ಎಂದು ನಾವು ಆಶಿಸುತ್ತಿದ್ದು, ಲೀಗ್​ಅನ್ನು ಇಲ್ಲೆ ನಡೆಸಲಿದ್ದೇವೆ" ಎಂದಿದ್ದಾರೆ.

ಅರುಣ್ ಧುಮಾಲ್
ಅರುಣ್ ಧುಮಾಲ್

ಐಪಿಎಲ್​ಅನ್ನು ಭಾರತದಲ್ಲೇ ಆಯೋಜಿಸುವ ಸಲುವಾಗಿ ಬಿಸಿಸಿಐ ಕೆಲವು ಕ್ರೀಡಾಂಗಣಗಳಲ್ಲಿ ಮಾತ್ರ ಬಿಸಿಸಿಐ ಆಯ್ಕೆ ಮಾಡಿದೆ. ಅದರಲ್ಲಿ ಮುಂಬೈ ವಾಂಖೆಡೆ ಕ್ರೀಡಾಂಗಣ, ಬ್ರಾಬೌರ್ನ್ ಸ್ಟೇಡಿಯಂ, ಡಿವೈ ಪಾಟಿಲ್ ಸ್ಟೇಡಿಯಂ, ರಿಲಯನ್ಸ್ ಕ್ರಿಕೆಟ್ ಸ್ಟೇಡಿಯಂ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2021 ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

14ನೇ ಆವೃತ್ತಿಯ ಐಪಿಎಲ್​ನ ನಾಕೌಟ್ ಹಾಗೂ ಫೈನಲ್ ಪಂದ್ಯ ಅಹ್ಮಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಸಯ್ಯದ್ ಮುಷ್ತಾಕ್ ಅಲಿ ನಾಕೌಟ್ ಪಂದ್ಯಗಳು, ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟೆಸ್ಟ್​ ಪಂದ್ಯಗಳು ಹಾಗೂ ಟಿ20 ಸರಣಿ ಈ ನೂತನ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ.

ಇದನ್ನು ಓದಿ:2ನೇ ಆ್ಯಂಜಿಯೋಪ್ಲಾಸ್ಟಿ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ದಾದಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.