ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ದುಬೈನಲ್ಲಿ ನಡೆಸಲು ಈಗಾಗಲೇ ದಿನಾಂಕ ಘೋಷಣೆ ಮಾಡಿರುವ ಭಾರತೀಯ ಕ್ರಿಕೆಟ್ ಮಂಡಳಿ ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮತಿ ಸಹ ಪಡೆದುಕೊಂಡಿದೆ. ಇದರ ಮಧ್ಯೆ ಇದೀಗ 13ನೇ ಆವೃತ್ತಿ ಟೈಟಲ್ ಪ್ರಾಯೋಜಕತ್ವಕ್ಕಾಗಿ ಬಿಡ್ ಆಹ್ವಾನಿಸಿದೆ.
ಭಾರತ-ಚೀನಾ ನಡುವಿನ ಸಂಘರ್ಷದ ಬಳಿಕ ಐಪಿಎಲ್ನಲ್ಲಿ ಪ್ರಾಯೋಕತ್ವ ತೆಗೆದುಕೊಂಡಿದ್ದ ಚೀನಾ ವಿವೋ ಕಂಪನಿ ಹಿಂದೆ ಸರಿದುಕೊಂಡಿರುವ ಕಾರಣ 4 ತಿಂಗಳ ಅವಧಿಗಾಗಿ ಬಿಸಿಸಿಐ ಬಿಡ್ ಕರೆದಿದೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಅಮೆಜಾನ್, ಜಿಯೋ ಸೇರಿ ಹಲವರ ನಡುವೆ ತುರುಸಿನ ಸ್ಪರ್ಧೆ
ಆಗಸ್ಟ್ 14ರೊಳಗೆ ಪ್ರಾಯೋಜತ್ವ ಮಾಡಲು ನಿರ್ಧರಿಸಿರುವ ಕಂಪನಿಗಳು ಮಾಹಿತಿ ರವಾನೆ ಮಾಡಲು ಬಿಸಿಸಿಐ ತಿಳಿಸಿದ್ದು, ಅಂತಿಮ ಬಿಡ್ ಯಾರು ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನ ಬಿಸಿಸಿಐ ಆಗಸ್ಟ್ 18ರಂದು ನೀಡಲಿದೆ. ಬಿಡ್ಗೆ ಹೆಸರು ಸಲಿಕೆ ಮಾಡುವ ಕಂಪನಿ ವಹಿವಾಟು 300 ಕೋಟಿ ರೂ. ಆಗಿರಬೇಕು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಹೊರಡಿಸಿದೆ.

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ, ಪಡೆದುಕೊಳ್ಳಲು ಬೈಜುಸ್, ಕೋಕಾ ಕೋಲಾ, ಜಿಯೋ, ಅಮೆಜಾನ್, ಫೋನ್ ಪೇ, ಅನ್ ಅಕಾಡೆಮಿ ಹಾಗೂ ಪಂತಜಲಿ ನಡುವೆ ನೇರ ಸ್ಫರ್ಧೆ ಉಂಟಾಗಿದೆ ಎಂದು ತಿಳಿದು ಬಂದಿದೆ.
2021ರಿಂದ 2023ರ ಆವೃತ್ತಿಗೆ ವಿವೋ ಐಪಿಎಲ್ಗೆ ಟೈಟಲ್ ಪ್ರಾಯೋಜಕತ್ವಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ.