ETV Bharat / sports

ಐಪಿಎಲ್​ ನಡೆಯದಿದ್ದರೆ ಬಿಸಿಸಿಐಗೆ ಸಾವಿರಾರು ಕೋಟಿ ರೂ. ನಷ್ಟ: ಗಂಗೂಲಿ

13ನೇ ಆವೃತ್ತಿಯ ಐಪಿಎಲ್​ ಟೂರ್ನಿ ರದ್ದಾದರೆ ಬಿಸಿಸಿಐಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ ಎಂದಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ. ಅಲ್ಲದೆ, ಪ್ರೇಕ್ಷಕರಿಲ್ಲದೆ ಮಿಲಿಯನ್​ ಡಾಲರ್​ ಟೂರ್ನಿ ನಡೆಸಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಗಂಗೂಲಿ
author img

By

Published : May 16, 2020, 9:43 AM IST

ಮುಂಬೈ: ಕ್ರಿಕೆಟ್​ ಜಗತ್ತಿನ ಶ್ರೀಮಂತ ಲೀಗ್​ ಆಗಿರುವ ಐಪಿಎಲ್​ ಕೊರೊನಾ ಭೀತಿಯಿಂದ ಅನಿರ್ಧಿಷ್ಟಾವಧಿವರೆಗೆ ಮುಂದೂಡಲ್ಪಟ್ಟಿದೆ. ಇದೀಗ ಮಿಲಿಯನ್​ ಡಾಲರ್​ ಟೂರ್ನಿ ನಡೆಯದೇ ಹೋದರೆ ಬಿಸಿಸಿಐಗೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ ಟೂರ್ನಿ ರದ್ದಾದರೆ ಬಿಸಿಸಿಐಗೆ ಸಾವಿರಾರು ಕೋಟಿ ರೂ. ನಷ್ಟವಾಗಲಿದೆ. ಪ್ರಕೇಕ್ಷಕರಿಲ್ಲದೆ ಮಿಲಿಯನ್​ ಡಾಲರ್​ ಟೂರ್ನಿ ನಡೆಸಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್​ 29ರಂದು 13ನೇ ಐಪಿಎಲ್​ಗೆ ಚಾಲನೆ ನೀಡಬೇಕಿತ್ತು. ಆದರೆ ಕೊರೊನಾ ಭೀತಿ ಕಾರಣ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿತ್ತು. ಈ ಕಾರಣದಿಂದ ಐಪಿಎಲ್​ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿತ್ತು. ಇದೀಗ ಕೊರೊನಾ ರೌದ್ರನರ್ತನ ಮುಂದುವರಿದಿರುವುದರಿಂದ ಐಪಿಎಲ್‌ ನಡೆಯದೇ ಇದ್ದರೆ ಸುಮಾರು 4000 ಸಾವಿರ ಕೋಟಿ ರೂ. ನಷ್ಟವಾಗಲಿದೆ. ಐಪಿಎಲ್​ ನಡೆದರೆ ಆಟಗಾರರ ವೇತನವನ್ನು ಕಡಿತಗೊಳಿಸುವುದಿಲ್ಲ ಎಂದಿದ್ದಾರೆ.

ಇನ್ನು, ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ನಡೆಸಿದರೆ ಅದು ಆಕರ್ಷಣೆ ಕಳೆದುಕೊಳ್ಳಲಿದೆ ಎಂಬ ಅನುಭವ ನನಗಿದೆ. 1999ರಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್​ ಚಾಂಪಿಯನ್​ಶಿಪ್​ ವೇಳೆ ಪ್ರೇಕ್ಷಕರಿಲ್ಲದೆ ನಡೆದಿದ್ದ ಪಂದ್ಯ ತನ್ನ ಉತ್ಸಾಹವನ್ನೇ ಕಳೆದುಕೊಂಡಿತ್ತು ಅನ್ನೋದನ್ನು ಕೂಡ ಗಂಗೂಲಿ ಸ್ಮರಿಸಿದ್ದಾರೆ.

ಒಂದು ವೇಳೆ ಪ್ರೇಕ್ಷಕರು ಬಂದು ಪಂದ್ಯ ವೀಕ್ಷಿಸಿದರೂ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅವರು ಸುರಕ್ಷತೆಯಿಂದ ಮನೆ ತುಲುಪುತ್ತಾರೆಯೇ ಎಂಬುದುನ್ನ ಊಹಿಸುವುದು ಕಷ್ಟವಾಗುತ್ತದೆ. ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಳ್ಗೊಳ್ಳುವ ಸಾಧ್ಯತೆ ಕೂಡ ಕಡಿಮೆ. ಹೀಗಾಗಿ ದೇಶದಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣವಾಗುವವರೆಗೂ ಯಾವುದೇ ಕ್ರಿಕೆಟ್​ ಸಾಧ್ಯವಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.