ETV Bharat / sports

2021ರ ಐಪಿಎಲ್ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲು ಚಿಂತಿಸುತ್ತಿದ್ದೇವೆ: ಗಂಗೂಲಿ - BCCI contemplating allowing fans for IPL

2021ರ ಐಪಿಎಲ್​ಗೆ ಇನ್ನೂ ಅಧಿಕೃತ ದಿನಾಂಕ ಘೋಷಣೆಯಾಗಿಲ್ಲ. ಏಪ್ರಿಲ್ ಅಥವಾ ಮೇ ತಿಂಗಳ ಮಧ್ಯೆ ನಡೆಯುವ ನಿರೀಕ್ಷೆಯಿದೆ. ಈ ಲೀಗ್​ಗಾಗಿ ಗುರುವಾರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಐಪಿಎಲ್ 2021
ಸೌರವ್​ ಗಂಗೂಲಿ
author img

By

Published : Feb 17, 2021, 4:58 PM IST

ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್​ ಲೀಗ್ ಸ್ಟೇಡಿಯಂನಲ್ಲಿ ಪಂದ್ಯಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ತಿಳಿಸಿದ್ದಾರೆ.

2021ರ ಐಪಿಎಲ್​ಗೆ ಇನ್ನೂ ಅಧಿಕೃತ ದಿನಾಂಕ ಘೋಷಣೆಯಾಗಿಲ್ಲ. ಏಪ್ರಿಲ್ ಅಥವಾ ಮೇ ತಿಂಗಳ ಮಧ್ಯೆ ನಡೆಯುವ ನಿರೀಕ್ಷೆಯಿದೆ. ಈ ಲೀಗ್​ಗಾಗಿ ಗುರುವಾರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

"ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಎಲ್ಲಾ ಕೋವಿಡ್ ಭೀತಿಯ ಮಧ್ಯೆ ಯುಎಇಯಲ್ಲಿ ಐಪಿಎಲ್​ ನಡೆಸಿದ ರೀತಿ ನಂಬಲಸಾಧ್ಯವಾಗಿದೆ ಎಂದಿರುವ ಅವರು, ನಾಳೆ ನಡೆಯುವ ಹರಾಜು ಪ್ರಕ್ರಿಯೆ ಒಂದು ಸಣ್ಣ ಪ್ರಮಾಣದ್ದಾಗಿದೆ. ಆದರೆ ಬಹಳಷ್ಟು ತಂಡಗಳು ಇದಕ್ಕಾಗಿ ಹೆಚ್ಚಿನ ಕೆಲಸಗಳನ್ನು ಮಾಡುತ್ತಿವೆ ಎಂದು ನಾನು ಭಾವಿಸುತ್ತೇನೆ" ಎಂದು ಗಂಗೂಲಿ ಹೇಳಿದರು.

ಐಪಿಎಲ್​ ಲೀಗ್​ ಅದ್ಭುತ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಕಳೆದ 13 ವರ್ಷಗಳಲ್ಲಿ ವಿಶ್ವದ ಅತ್ಯುತ್ತಮವಾದ ಟೂರ್ನಿ ಎನಿಸಿಕೊಂಡಿದೆ. ಈ ವರ್ಷವೂ ಕೂಡ ದೊಡ್ಡ ನಿರೀಕ್ಷೆ ಹೊಂದಿದೆ. ಹಾಗಾಗಿ ಈ ಐಪಿಎಲ್‌ಗೆ ಪ್ರೇಕ್ಷಕರನ್ನು ಮೈದಾನಕ್ಕೆ ಕರೆತರಲು ನಾವು ಎದುರು ನೋಡುತ್ತೇವೆ. ಅದಕ್ಕಾಗಿ ನಾವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ.

ನಾವು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ಗೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬೇಕೆಂದು ಬಯಸಿದ್ದೆವು. ಆದರೆ ಆ ನಿರ್ಧಾರವನ್ನು ತಮಿಳುನಾಡು ಕ್ರಿಕೆಟ್​ ಅಸೋಸಿಯೇಶನ್​ಗೆ ಬಿಟ್ಟೆವು. ಅವರು ದೀರ್ಘಕಾಲದ ನಂತರ ತವರಿನಲ್ಲಿ ಮೊದಲ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯ ಹೇಗೆ ನಡೆಯುವುದು ನೋಡಿ ನಂತರ 2ನೇ ಟೆಸ್ಟ್​ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದರು.

ಇದೀಗ ಗುಜರಾತ್ ಕ್ರಿಕೆಟ್​ ಅಸೋಸಿಯೇಶನ್​ ಕ್ರಿಕೆಟ್​ಗೆ ಕೆಲವು ವಿಶೇಷತೆಗಳನ್ನು ಸೇರಿಸುತ್ತಿದೆ. ಇದು ಕೇವಲ ಆಟದೊಂದಿಗೆ ಮಾತ್ರವಲ್ಲದೆ ಆಟದ ಸುತ್ತಲೂ ಇತರ ಬಹಳಷ್ಟು ಸಂಗತಿಗಳಿವೆ. ಹಾಗಾಗಿ ಇದು ಎಲ್ಲರಿಗೂ ಉತ್ತಮ ಟೆಸ್ಟ್ ಪಂದ್ಯವಾಗಲಿದೆ ಎಂದು ಬಿಸಿಸಿಐ ಬಾಸ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.