ETV Bharat / sports

ಐಪಿಎಲ್​ ವಿಳಂಬಕ್ಕೆ ಶಶಾಂಕ್ ಮನೋಹರ್​ ಕಾರಣ:  ಬಿಸಿಸಿಐ ಆರೋಪ - ಶಶಾಂಕ್ ಮನೋಹರ್​

ವಿಶ್ವಕಪ್​ ನಡೆಸಬೇಕಾದ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿಯ ಚೇರ್ಮನ್​ ಪದೇ ಪದೆ ತಾವೂ ಗ್ಲೋಬಲ್​ ಇವೆಂಟ್​ ನಡೆಸಲು ತಯಾರಿಲ್ಲ ಎಂದರೂ ಐಸಿಸಿ ವಿಳಂಬ ನೀತಿ ಐಪಿಎಲ್​ ತಯಾರಿಗೆ ನೋವುಂಟು ಮಾಡುತ್ತಿದೆ ಎಂದು ಬಿಸಿಸಿಐ ಭಾವಿಸಿದೆ.

Shashank Manohar
ಶಶಾಂಕ್ ಮನೋಹರ್​
author img

By

Published : Jun 18, 2020, 8:51 AM IST

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ ಮುಖ್ಯಸ್ಥ ಶಶಾಂಕ್​ ಮನೋಹರ್​ ಉದ್ದೇಶ ಪೂರ್ವಕವಾಗೀ ಟಿ-20 ವಿಶ್ವಕಪ್ ಭವಿಷ್ಯದ ಬಗೆಗಿನ ನಿರ್ಧಾರವನ್ನು ವಿಳಂಬ ಮಾಡುತ್ತಿದ್ದಾರೆ. ಇದರಿಂದ ಐಪಿಎಲ್​ ವಿಳಂಬಕ್ಕೂ ಅವರೇ ಕಾರಣರಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ವಿಶ್ವಕಪ್​ ನಡೆಸಬೇಕಾದ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿಯ ಚೇರ್ಮನ್​ ಪದೇ ಪದೆ ತಾವೂ ಗ್ಲೋಬಲ್​ ಇವೆಂಟ್​ ನಡೆಸಲು ತಯಾರಿಲ್ಲ ಎಂದರೂ ಐಸಿಸಿ ವಿಳಂಬ ನೀತಿ ಐಪಿಎಲ್​ ತಯಾರಿಗೆ ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಬಿಸಿಸಿಐ ಭಾವಿಸಿದೆ.

BCCI accuses Shashank Manohar of delaying IPL's preparations
ಐಪಿಎಲ್-ಟಿ20 ವಿಶ್ವಕಪ್​

" ತಮ್ಮ ಸ್ಥಾನದಿಂದ ನಿರ್ಗಮಿಸಲಿರುವ ಐಸಿಸಿ ಮುಖ್ಯಸ್ಥರು (ಮನೋಹರ್) ಏಕೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಆತಿಥೇಯ ಕ್ರಿಕೆಟ್ ಮಂಡಳಿಯೇ ಟಿ-20 ವಿಶ್ವಕಪ್ ಆಯೋಜಿಸಲು ಸಿದ್ಧವಿಲ್ಲ. ಆದರೂ ಈ ಕುರಿತು ತೀರ್ಮಾನವನ್ನು ಘೋಷಣೆ ಮಾಡಲು ಒಂದು ತಿಂಗಳ ಅವಧಿ ಏಕೆ ಬೇಕು? ಬಿಸಿಸಿಐಯನ್ನು ಸುಲಿಗೆ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ " ಎಂದು ಬಿಸಿಸಿಐ ಹಿರಿಯ ಅಧಿಕಾರಿ ಯೊಬ್ಬರು ಕೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಐಸಿಸಿ ನಡೆಸಿದ್ದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಟಿ-20 ವಿಶ್ವಕಪ್​ ಟೂರ್ನಿಯ ಆಯೋಜನೆ ಕುರಿತು ತೀರ್ಮಾನವನ್ನು ಪರಿಸ್ಥಿತಿ ಅವಲೋಕಿಸಿ, ಮುಂದಿನ ತಿಂಗಳು ನಿರ್ಧರಿಸಲಾಗುವುದು ಎಂದು ತಿಳಿಸಲಾಗಿತ್ತು.

ಈ ಕುರಿತು ತ್ವರಿತ ನಿರ್ಧಾರ ತೆಗೆದುಕೊಂಡರೆ ಕೇವಲ ಬಿಸಿಸಿಐ ಅಥವಾ ಐಪಿಎಲ್​ಗೆ ಮಾತ್ರ ಅನುಕೂಲಕರವಲ್ಲ. ಜೊತೆಗೆ ಇತರ ರಾಷ್ಟ್ರಗಳ ದ್ವಿಪಕ್ಷೀಯ ಸರಣಿಗಳ ಆಯೋಜನೆಗೆ ತಯಾರಾಗಲು ಕೂಡ ಅನುಕೂಲಕರವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.