ಮೆಲ್ಬೋರ್ನ್: ದಕ್ಷಿಣ ಆಫ್ರಿಕಾದ ಹಿರಿಯ ವೇಗಿ ಡೇಲ್ ಸ್ಟೈನ್ ಶುಕ್ರವಾರ ಮೆಲ್ಬೋರ್ನ್ ಸ್ಟಾರ್ಸ್ ಪರ ಬಿಗ್ಬ್ಯಾಶ್ ಲೀಗ್ಗೆ ಪದಾರ್ಪಣೆ ಮಾಡಲಿದ್ದಾರೆ.
ಐಪಿಎಲ್ ಬಳಿಕ ವಿಶ್ವದ ಪ್ರಸಿದ್ದ ಟಿ20 ಲೀಗ್ಗಳಲ್ಲಿ ಒಂದಾದ ಬಿಬಿಎಲ್ನ 9ನೇ ಆವೃತ್ತಿಯಲ್ಲಿ ಡೇಲ್ ಸ್ಟೈನ್ ಮ್ಯಾಕ್ಸ್ವೆಲ್ ನೇತೃತ್ವದ ಮೆಲ್ಬೋರ್ನ್ ಸ್ಟಾರ್ಸ್ ತಂಡ ಪರ ನಾಳೆ ಅಡಿಲೇಡ್ ಸ್ಟೈಕರ್ಸ್ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ.
-
SQUAD NEWS 📰: Dale Steyn and Nathan Coulter-Nile have been named in our squad to take on the Strikers this Friday night!https://t.co/tBtbNlcmNJ
— Melbourne Stars (@StarsBBL) December 26, 2019 " class="align-text-top noRightClick twitterSection" data="
">SQUAD NEWS 📰: Dale Steyn and Nathan Coulter-Nile have been named in our squad to take on the Strikers this Friday night!https://t.co/tBtbNlcmNJ
— Melbourne Stars (@StarsBBL) December 26, 2019SQUAD NEWS 📰: Dale Steyn and Nathan Coulter-Nile have been named in our squad to take on the Strikers this Friday night!https://t.co/tBtbNlcmNJ
— Melbourne Stars (@StarsBBL) December 26, 2019
ಸ್ಟೈನ್ ಜೊತೆಗೆ ಆಸ್ಟ್ರೇಲಿಯಾದ ಆಲ್ರೌಂಡರ್ ನಥನ್ ಕೌಲ್ಟರ್-ನೈಲ್ ಕೂಡ ಸ್ಟಾರ್ಸ್ ತಂಡ ಸೇರಿಕೊಂಡಿದ್ದಾರೆ. ಈಗಾಗಲೇ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಮ್ಯಾಕ್ಸ್ವೆಲ್ ಪಡೆಗೆ ಸ್ಟೈನ್ ಹಾಗೂ ನೈಲ್ ಮತ್ತಷ್ಟು ಬಲ ತುಂಬಲಿದ್ದಾರೆ.
36 ವರ್ಷದ ಡೇಲ್ ಸ್ಟೈನ್ 209 ಟಿ20 ಪಂದ್ಯಗಳನ್ನಾಡಿದ್ದು 246 ವಿಕೆಟ್ ಪಡೆದಿದ್ದಾರೆ. 9 ರನ್ ನೀಡಿ 4 ವಿಕೆಟ್ ಪಡೆದಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.
ಕಳೆದ ವಾರ ಐಪಿಎಲ್ ಹರಾಜಿನಲ್ಲಿ ಡೇಲ್ ಸ್ಟೈನ್ 2 ಕೋಟಿಗೆ ಆರ್ಸಿಬಿ ಫ್ರಾಂಚೈಸಿಗೆ, ಕೌಲ್ಟರ್ ನೈಲ್ 8 ಕೋಟಿ ರೂಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಂಡಿದ್ದರು.