ಪಾಟ್ಚೆಫ್ಸ್ಟ್ರೂಮ್: 4 ಬಾರಿಯ ಅಂಡರ್ 19 ವಿಶ್ವ ಚಾಂಪಿಯನ್ ಭಾರತ ತಂಡವನ್ನು ಫೈನಲ್ನಲ್ಲಿ ಸೋಲಿಸಿದ ಬಾಂಗ್ಲಾದೇಶ ತಂಡದ ಆಟಗಾರರು ಪಂದ್ಯ ಗೆಲ್ಲುತ್ತಿದ್ದಂತೆ ಭಾರತದ ಆಟಗಾರ ಬಳಿ ಬಂದು ಅಸಹ್ಯವಾಗಿ ನಡೆದುಕೊಂಡ ಘಟನೆ ನಡೆದಿದೆ.
ಡಿಎಲ್ಎಸ್ ನಿಯಮದನ್ವಯ ಬಾಂಗ್ಲಾದೇಶ ತಂಡ 3 ವಿಕೆಟ್ಗಳಿಂದ ಜಯ ಸಾಧಿಸಿತು. ಈ ವೇಳೆ, ಕೊನೆಯ ರನ್ ಗಳಿಸುತ್ತಿದ್ದಂತೆ ಮೈದಾನಕ್ಕಾಗಮಿಸಿದ ಬಾಂಗ್ಲಾದೇಶ ಆಟಗಾರರು ಭಾರತೀಯ ಆಟಗಾರರನ್ನು ತಳ್ಳುತ್ತಾ, ಕೆಟ್ಟದಾಗಿ ಮಾತನಾಡುತ್ತಾ ಕಿರುಚಾಡಿದ್ದಾರೆ. ಈ ವೇಳೆ, ಭಾರತೀಯ ಆಟಗಾರರು ಕೂಡ ಬಾಂಗ್ಲಾದೇಶ ಆಟಗಾರರನ್ನು ತಳ್ಳಿ, ಮಾತಿಗೆ ಮಾತು ಬೆಳೆಸಿದ್ದಾರೆ.
-
#Fight between #India U19 and #Bangladesh U19 players in ICC. #U19WC pic.twitter.com/cWI85EPDz9
— Sardar Assam 🇱🇾🇱🇾🇱🇾 (@SardarAssam_PPP) February 9, 2020 " class="align-text-top noRightClick twitterSection" data="
">#Fight between #India U19 and #Bangladesh U19 players in ICC. #U19WC pic.twitter.com/cWI85EPDz9
— Sardar Assam 🇱🇾🇱🇾🇱🇾 (@SardarAssam_PPP) February 9, 2020#Fight between #India U19 and #Bangladesh U19 players in ICC. #U19WC pic.twitter.com/cWI85EPDz9
— Sardar Assam 🇱🇾🇱🇾🇱🇾 (@SardarAssam_PPP) February 9, 2020
ಈ ಘಟನೆ ಬಗ್ಗೆ ಬಹುಮಾನ ವಿತರಣೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಂ ಗರ್ಗ್, ನಾವು ಸೋಲನ್ನು ಸುಲಭವಾಗಿ ತೆಗೆದುಕೊಂಡಿದ್ದವು, ಸೋಲು- ಗೆಲುವು ಆಟದಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ, ಬಾಂಗ್ಲಾದೇಶದ ಆಟಗಾರರ ಪ್ರತಿಕ್ರಿಯೆ ಕೆಟ್ಟದಾಗಿತ್ತು. ಇಂತಹ ಘಟನೆ ಮತ್ತೊಮ್ಮೆ ಪುನಾರಾವರ್ತನೆಯಾಗುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.
ಬಾಂಗ್ಲಾದೇಶ ನಾಯಕ ಅಕ್ಬರ್ ಅಲಿ ಕೂಡ ತಮ್ಮ ತಂಡದ ಆಟಗಾರರ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಆ ಸಂದರ್ಭದಲ್ಲಿ ಏನಾಯಿತೆಂದು ನನಗೆ ತಿಳಿದಿಲ್ಲ, ಅಲ್ಲಿ ಏನು ನಡೆಯುತ್ತಿದೆ ಎಂದು ನಾನು ಕೇಳಲಿಲ್ಲ, ಆದರೆ, ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಆಟಗಾರರ ಮನಸ್ಸಿನಲ್ಲಿರುವ ಭಾವನೆಗಳು ಹೊರಬರುತ್ತವೆ. ಇದು ಕೆಲವು ಸಂದರ್ಭದಲ್ಲಿ ಭಾವನೆಗಳ ಉದ್ವೇಗದ ರೂಪದಲ್ಲಿ ಹೊರಬರುತ್ತವೆ. ಯುವ ಆಟಗಾರನಾಗಿ ನನ್ನ ಪ್ರಕಾರ, ಈ ರೀತಿ ಘಟನೆ ನಡೆಯಬಾರದು, ಯಾವುದೇ ಸಂದರ್ಭದಲ್ಲಿ, ಎಲ್ಲಿಯಾದರೂ ನಾವು ಎದುರಾಳಿಗಳನ್ನು ಗೌರವದಿಂದ ಕಾಣಬೇಕು. ನಾವು ಆಟವನ್ನು ಗೌರವದಿಂದ ಕಾಣಬೇಕು ಎಂದು ನಡೆದ ಘಟನೆ ಬಗ್ಗೆ ಕ್ಷಮೆ ಕೋರಿ ವಿಷಾದ ವ್ಯಕ್ತಪಡಿಸಿದ್ದಾರೆ.