ETV Bharat / sports

ಟೀಂ ಇಂಡಿಯಾ ವಿರುದ್ಧದ ಟಿ-20 ಸರಣಿಗೆ ಬಾಂಗ್ಲಾ ತಂಡ ಪ್ರಕಟ.. ಜೈಲಿನಲ್ಲಿದ್ದ ಪ್ಲೇಯರ್​ಗೂ ಚಾನ್ಸ್​! - 15 ಆಟಗಾರರ ಬಾಂಗ್ಲಾ ತಂಡ

ಭಾರತ ವಿರುದ್ಧದ ಮೂರು ಪಂದ್ಯಗಳ ಟಿ-20 ಟೂರ್ನಾಮೆಂಟ್​​ಗಾಗಿ ಬಾಂಗ್ಲಾ ತಂಡ ಪ್ರಕಟಗೊಂಡಿದ್ದು, ಜೈಲು ಶಿಕ್ಷೆ ಅನುಭವಿಸಿದ್ದ ಆಟಗಾರನಿಗೂ ಬಾಂಗ್ಲಾ ಕ್ರಿಕೆಟ್​ ಮಂಡಳಿ ಮಣೆ ಹಾಕಿದೆ.

ಟೀಂ ಇಂಡಿಯಾ ವಿರುದ್ಧದ ಟಿ-20ಗೆ ಬಾಂಗ್ಲಾ ತಂಡ ಪ್ರಕಟ
author img

By

Published : Oct 17, 2019, 11:31 PM IST

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ-20 ಸರಣಿಗಾಗಿ ಬಾಂಗ್ಲಾದೇಶ 15 ಸದಸ್ಯರನ್ನೊಳಗೊಂಡ ತಂಡವನ್ನ ಇಂದು ಪ್ರಕಟ ಮಾಡಿದೆ.

ಆಲ್​ರೌಂಡರ್​​ ಶಕೀಬ್ ಅಲ್​ ಹಸನ್​ಗೆ ನಾಯಕ ಸ್ಥಾನ ನೀಡಲಾಗಿದೆ. ವಿಶೇಷ ಅಂದರೆ 2016 ಟಿ-20 ವಿಶ್ವಕಪ್​ ಟೂರ್ನಿ ವೇಳೆ ಅನುಮಾನ್ಪದ ಬೌಲಿಂಗ್​ನಿಂದ ನಿಷೇಧಕ್ಕೊಳಗಾಗಿದ್ದ ಎಡಗೈ ಸ್ಪಿನ್ನರ್​ ಅರಾಫತ್ ಸನ್ನಿಗೆ ಚಾನ್ಸ್​ ನೀಡಲಾಗಿದೆ.ಈತ 2017ರಲ್ಲಿ ತನ್ನ ಗೆಳತಿಯೊಂದಿಗಿನ ಅಶ್ಲೀಲ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್​ ಮಾಡಿದ್ದಕ್ಕಾಗಿ 2 ತಿಂಗಳು ಜೈಲು ವಾಸ ಅನುಭವಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ಕ್ರಿಕೆಟ್​ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಮಿನ್ಹಾಜುಲ್ ಅಬೆದಿನ್, ಭಾರತದಂತಹ ಕಠಿಣ ತಂಡವನ್ನ ಎದುರಿಸಬೇಕಾದರೆ ಅನುಭವಿ ಆಟಗಾರರ ಅವಶ್ಯಕತೆ ಇದೆ. ಹೀಗಾಗಿ ಅರಾಫತ್ ಸನ್ನಿಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಅಲ್ಲದೆ 2016ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಆಡಿದ್ದ ಅಲ್-ಅಮಿನ್ ಹೊಸೈನ್​ಗೂ ಮಣೆ ಹಾಕಲಾಗಿದೆ. ಅಫ್ಘಾನಿಸ್ತಾನ ಮತ್ತು ಜಿಂಬಾಂಬ್ವೆ ವಿರುದ್ಧದ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ತಮೀಮ್​ ಇಕ್ಬಾಲ್​ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

15 ಆಟಗಾರರ ತಂಡ ಇಂತಿದೆ:
ಶಕೀಬ್ ಅಲ್ ಹಸನ್(ನಾಯಕ), ತಮೀಮ್​ ಇಕ್ಬಾಲ್, ಲಿಟಾನ್ ದಾಸ್, ಸೌಮ್ಯ ಸರ್ಕಾರ್, ನೈಮ್ ಶೇಖ್, ಮುಶ್ಫಿಕರ್ ರಹೀಮ್ (ಕೀಪರ್), ಮಹಮದುಲ್ಲಾ ರಿಯಾದ್, ಅಫಿಫ್ ಹೊಸೈನ್, ಮುಸದ್ದೇಕ್ ಹೊಸೈನ್, ಅಮೀನುಲ್ ಇಸ್ಲಾಂ ಬಿಪ್ಲೋಬ್, ಅರಾಫತ್ ಸನ್ನಿ, ಮೊಹಮ್ಮದ್ ಸೈಫುದ್ದೀನ್, ಅಲ್-ಅಮೀನ್ ಹೊಸೈನ್, ಮುಸ್ತಫಿಜುರ್ ರಹಮಾನ್, ಶೈಫುಲ್ ಇಸ್ಲಂ,

ನವೆಂಬರ್​ 3 ರಂದು ನವದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ನಡೆದರೆ, 2ನೇ ಪಂದ್ಯ ನ.7ಕ್ಕೆ ರಾಜ್​ಕೋಟ್ ಮತ್ತು ಮೂರನೇ ಪಂದ್ಯ ನ.10ಕ್ಕೆ​ ನಾಗ್ಪುರ್​ನಲ್ಲಿ ನಡೆಯಲಿದೆ. ಇದೇ ತಿಂಗಳ 24 ರಂದು ಟೀಂ ಇಂಡಿಯಾ ಕೂಡ 15 ಆಟಗಾರರ ತಂಡ ಪ್ರಕಟಿಸಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.