ETV Bharat / sports

ಟಿ-20 ಮಹಿಳೆಯರ ವಿಶ್ವಕಪ್: ದ.ಆಫ್ರಿಕಾ ಮಣಿಸಿದ ಆಸ್ಟ್ರೇಲಿಯಾ; ಭಾನುವಾರ ಭಾರತದ ಜೊತೆ ಫೈನಲ್ ಪಂದ್ಯ

ಮಳೆ ಬಂದ ಕಾರಣ ಡಕ್ವರ್ಥ್​ ಲೂಯಿಸ್​ ನಿಯಮದನ್ವಯ 13 ಓವರ್​ಗಳಲ್ಲಿ 98 ರನ್​ಗಳ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ, ನಿಗದಿತ ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 92 ರನ್​ಗಳಿಸಲಷ್ಟೇ ಶಕ್ತವಾಯ್ತು. ಪರಿಣಾಮ ಆಸ್ಟ್ರೇಲಿಯಾ ಎದುರು 5 ರನ್​ಗಳ ಸೋಲು ಕಂಡು ನಿರಾಶೆ ಅನುಭವಿಸಿತು.

author img

By

Published : Mar 5, 2020, 5:26 PM IST

Updated : Mar 5, 2020, 6:52 PM IST

ಭಾರತ-ಆಸ್ಟ್ರೇಲಿಯಾ ಫೈನಲ್
ಭಾರತ-ಆಸ್ಟ್ರೇಲಿಯಾ ಫೈನಲ್

ಸಿಡ್ನಿ(ಆಸ್ಟ್ರೇಲಿಯಾ): ವಿಶ್ವಕಪ್ ಟಿ-ಟ್ವೆಂಟಿ ಮಹಿಳೆಯರ ಕದನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 5 ರನ್​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಿಟ್ಟಿಸಿದೆ. ಭಾನುವಾರ ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಫೈನಲ್​ ಪಂದ್ಯ ನಡೆಯಲಿದೆ.

ಮಳೆರಾಯನ ಆಗಮನವಾದ ಕಾರಣ ಪಂದ್ಯಕ್ಕೆ ಡಕ್ವರ್ಥ್​ ಲೂಯಿಸ್​ ನಿಯಮ ಅನ್ವಯಿಸಲಾಯಿತು. ಈ ನಿಯಮದನ್ವಯ 13 ಓವರ್​ಗಳಲ್ಲಿ 98 ರನ್​ಗಳ ಗುರಿ ಪಡೆದಿದ್ದ ದ. ಆಫ್ರಿಕಾ ನಿಗದಿತ ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 92 ರನ್​ಗಳಿಸಷ್ಟೇ ಶಕ್ತವಾಗಿ 5 ರನ್​ಗಳ ಸೋಲೊಪ್ಪಿಕೊಂಡಿತು.

  • Australia's #T20WorldCup journey:

    2009 ➜ semi-finalists
    2010 ➜ champions
    2012 ➜ champions
    2014 ➜ champions
    2016 ➜ runners-up
    2018 ➜ champions
    2020 ➜ FINALISTS

    What. A. Team. 👏👏 pic.twitter.com/DRRJUwErZS

    — T20 World Cup (@T20WorldCup) March 5, 2020 " class="align-text-top noRightClick twitterSection" data=" ">

ಇದಕ್ಕೂ ಮೊದಲು ಟಾಸ್​ ಗೆದ್ದ ದ.ಆಫ್ರಿಕಾ ಮಹಿಳೆಯರು ಆಸೀಸ್​ ಮಹಿಳೆಯರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಅದರಂತೆ ಆಸ್ಟ್ರೇಲಿಯಾ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 134 ರನ್​ ಗಳಿಸಿತ್ತು. ನಾಯಕಿ ಲಾನಿಂಗ್​ 49 ರನ್​, ಬೆತ್​ ಮೂನಿ 28, ಅಲಿಸಾ ಹೀಲಿ 18 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ದಕ್ಷಿಣ ಆಫ್ರಿಕಾ ಪರ ನಡಿನ್​ ದಿ ಕ್ಲರ್ಕ್​ 3 ವಿಕೆಟ್ ಪಡೆದು ಆಸ್ಟ್ರೇಲಿಯಾ ಬೃಹತ್​ ಮೊತ್ತ ಕಲೆ ಹಾಕದಂತೆ ತಡೆದರು. ಅಯಬೊಂಗ ಖಾಕಾ ಹಾಗೂ ನೊಕುಲುಲೆಕೊ ಮ್ಲಾಬಾ ತಲಾ ಒಂದೊಂದು ವಿಕೆಟ್​ ಪಡೆದು ಮಿಂಚಿದರು.

ಆದರೆ, ಮೊದಲ ಇನ್ನಿಂಗ್ಸ್​ ಮುಗಿದ ನಂತರ ಮಳೆ ಬಂದಿದ್ದರಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಡಕ್ವರ್ಥ್​ ನಿಯಮದ ಪ್ರಕಾರ, 13 ಓವರ್​ಗಳಲ್ಲಿ 98 ರನ್​ಗಳ ಟಾರ್ಗೆಟ್​ ನೀಡಲಾಯ್ತು.

ಈ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ರನ್​ಗಳಿಸುವ ಆತುರದಲ್ಲಿ ನಿರಂತರ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಆಟಗಾರ್ತಿಯರಾದ ಲಿಜೆಲ್ಲೆ ಲೀ 10, ಡೇನ್ ವ್ಯಾನ್​ ನೀಕರ್ಕ್​ 12 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಅನುಭವಿ ಆಟಗಾರ್ತಿ ಮಿಗ್ನೋನ್ ಡು ಪ್ರೀಜ್​ ಕೂಡ ಸೊನ್ನೆ ಸುತ್ತಿದರು.

ಆದರೆ ಯುವ ಆಟಗಾರ್ತಿ ಲೌರಾ ವಾಲ್ವಾರ್ಟ್​ ಕೊನೆಯವರೆಗೂ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಇವರು ಕೇವಲ 27 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 3 ಬೌಂಡರಿ ನೆರವಿನಿಂದ 41 ರನ್​ಗಳಿಸಿದರಾದರೂ ಬೇರೆ ಬ್ಯಾಟ್ಸ್ ವುಮೆನ್ ಗಳ ವೈಫಲ್ಯದಿಂದ ಸೋಲು ಕಾಣಬೇಕಾಯಿತು. ಇವರಿಗೆ ಸಾಥ್​ ನೀಡಿ ಸುನ್​ ಲುಸ್ 22 ಎಸೆತಗಳಲ್ಲಿ​ 21 ರನ್​ ಗಳಿಸಿದರು.

ಆಸ್ಟ್ರೇಲಿಯಾ ಪರ ಮೇಗನ್​ ಶೂಟ್​ 3 ಓವರ್​ಗಳಲ್ಲಿ 17 ರನ್​ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಜೊನ್ನಾಸೆನ್, ಮೊಲಿನ್ಯೂಕ್ಸ್ ಹಾಗೂ ಕಿಮ್ಮೆನ್ಸ್​ ತಲಾ ಒಂದು ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ 7 ಟಿ-20 ವಿಶ್ವಕಪ್​ ಇತಿಹಾಸದಲ್ಲಿ 6ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಮೊದಲ ವಿಶ್ವಕಪ್​ನಲ್ಲಿ ಮಾತ್ರ ಸೆಮಿಫೈನಲ್​ನಲ್ಲಿ ಮುಗ್ಗರಿಸಿತ್ತು.

ಆತಿಥೇಯ ಆಸ್ಟ್ರೇಲಿಯಾ ಮೆಲ್ಬೋರ್ನ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ.

Last Updated : Mar 5, 2020, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.