ನವದೆಹಲಿ: 2ನೇ ಟೆಸ್ಟ್ನಲ್ಲಿ ಗಾಯಗೊಂಡಿರುವ ಭಾರತ ತಂಡದ ವೇಗಿ ಉಮೇಶ್ ಯಾದವ್ ಬದಲಿಗೆ ಎಡಗೈ ವೇಗಿ ಶಾರ್ದುಲ್ ಠಾಕೂರ್ ಅವರಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅವಕಾಶ ನೀಡುವ ಸಾದ್ಯತೆಯಿದೆ.
ಮೂಲಗಳ ಪ್ರಕಾರ ಅನುಭವಿ ವೇಗಿ ಸ್ನಾಯು ಸೆಳತೆಕ್ಕೆ ಒಳಗಾಗಿ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಅವರು ಈಗಾಗಲೇ ಭಾರತಕ್ಕೆ ಮರಳಿದ್ದು, ಪುನಶ್ಚೇತನಕ್ಕಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
"ಟಿ.ನಟರಾಜನ್ ಬಗ್ಗೆ ಹೆಚ್ಚಿನ ಜನರು ಉತ್ಸಾಹ ತೋರುತ್ತಿದ್ದಾರೆ. ಆದರೆ, ಅವರು ತಮಿಳುನಾಡು ಪರ ಕೇವಲ ಒಂದೇ ಒಂದು ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ ಎಂಬುದನ್ನು ನಾವು ಮರೆಯಬಾರದು. ಮತ್ತೆ ಶಾರ್ದುಲ್ ಠಾಕೂರ್ ಮುಂಬೈ ಪರ ಪ್ರಮುಖ ರೆಡ್ ಬಾಲ್ ಬೌಲರ್ ಆಗಿದ್ದಾರೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ನ್ಯೂಸ್ ಎಜೆನ್ಸಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಪಂದ್ಯ ಮುಗಿದರೂ ಮೆಲ್ಬೋರ್ನ್ನಲ್ಲೇ ಉಳಿದ ಟೀಂ ಇಂಡಿಯಾ
ಶಾರ್ದುಲ್ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದರಾದರೂ ಕೇವಲ ಒಂದೇ ಓವರ್ ಬೌಲಿಂಗ್ ಮಾಡಿ ಟೂರ್ನಿಯಿಂದ ಹೊರಬಿದ್ದದ್ದು ದುರದೃಷ್ಟಕರ. ಅವರ ತಮ್ಮನ್ನು ತಾವೂ ಉತ್ತಮವಾಗಿ ರೂಪಿಸಿಕೊಳ್ಳುತ್ತಿದ್ದಿ, ಉಮೇಶ್ ಬದಲಿಗೆ ಅವರನ್ನು ತಂಡದ 11ರ ಬಳಗದಲ್ಲಿ ಬದಲಾಯಿಸಿಕೊಳ್ಳಲು ಉತ್ತಮ ಆಯ್ಕೆ ಎಂದಿದ್ದಾರೆ.
ಶಾರ್ದುಲ್ ಠಾಕೂರ್ 62 ಪ್ರಥಮ ದರ್ಜೆ ಪಂದ್ಯಗಳಿಂದ 206 ವಿಕೆಟ್ಗಳನ್ನು ಪಡೆದಿದ್ದಾರೆ.