ಮೆಲ್ಬೋರ್ನ್: ನುರಿತ ಆರಂಭಿಕನಾಗಿರುವ ಡೇವಿಡ್ ವಾರ್ನರ್ ಸಂಪೂರ್ಣ ಫಿಟ್ ಇಲ್ಲದ ವಾರ್ನರ್ 3ನೇ ಟೆಸ್ಟ್ನಲ್ಲಿ ಕಣಕ್ಕಿಳಿಸುವ ಅಪಾಯದ ನಿರ್ಧಾರವನ್ನು ಆಸ್ಟ್ರೇಲಿಯಾ ತೆಗೆದುಕೊಳ್ಳುವ ಅನಿವಾರ್ಯತೆಯನ್ನು ಎದುರಿಸುತ್ತಿದೆ ಎಂದು ಆಸೀಸ್ ಅಸಿಸ್ಟೆಂಟ್ ಕೋಚ್ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ ಗುರುವಾರ ಹೇಳಿದ್ದಾರೆ.
ಮೂರನೇ ಟೆಸ್ಟ್ ಜನವರಿ 7ರಿಂದ 11ರವರೆಗ ಸಿಡ್ನಿಯಲ್ಲಿ ನಡೆಯಲಿದೆ. ಈಗಾಗಲೇ ಎರಡು ತಂಡಗಳೂ ತಲಾ ಒಂದೊಂದು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲ ಸಾಧಿಸಿವೆ. ವಾರ್ನರ್ ಗೈರಿನಲ್ಲಿ ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಹಾಗಾಗಿ ಅವರು ಸಂಪೂರ್ಣ ಫಿಟ್ ಇಲ್ಲದಿದ್ದರೂ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ.
ಅದು ನಿಜ, ಹಾಗೂ ಮುಕ್ತವಾದ ಆಯ್ಕೆ, ಗಾಯದಿಂದ ಚೇತರಿಸಿಕೊಂಡು ಬಂದಿರುವ ಅವರು ಶೇ100 ಭಾಗ ಫಿಟ್ ಆಗಿಲ್ಲ. ಆದರೆ, ಅವರು ಎಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ ಎಂಬುದು ಮೈದಾನಕ್ಕೆ ಬರುವವರೆಗೆ ತಿಳಿಯುವುದಿಲ್ಲ ಎಂದು ಮೆಕ್ಡೊನಾಲ್ಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ರಹಾನೆ - ಕೊಹ್ಲಿ ಭಾರತೀಯರು, ಇಬ್ಬರ ಮಧ್ಯೆ ಹೋಲಿಕೆ ಮಾಡುವುದು ಬೇಡ : ಸಚಿನ್
ಅವರು ಶೇಕಡಾ 90 ರಿಂದ 95 ರಷ್ಟು ಆಗಿದ್ದರೆ, ಪಂದ್ಯದಲ್ಲಿ ಆಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾಗ ಮಾತ್ರ ಮುಂದೆ ಬರಲು ಹಾಗೂ ಅವರ ತಂಡಕ್ಕಾಗಿ ಆಡಲು ಸಾಧ್ಯ. ಅವರು(ವಾರ್ನರ್) ಈ ಕುರಿತು ಕೋಚ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಖಾತ್ರಿಯಿದೆ ಎಂದು ತಿಳಿಸಿದ್ದಾರೆ.
ವಾರ್ನರ್ ಮುಂದಿನ ಪಂದ್ಯದಲ್ಲಿ ಆಡಲು ತುಂಬಾ ಆಶಾದಾಯಕರಾಗಿದ್ದಾರೆ. ಇದು ನಮಗೆ ಒಂದು ದೊಡ್ಡ ಸುದ್ದಿಯಾಗಿದೆ. ಅವರನ್ನು ಮರಳಿ ಪಡೆಯುತ್ತಿರುವುದು ನಿಜಕ್ಕೂ ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.