ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್ ಬೇಲಿ ಆಸೀಸ್ ಆಯ್ಕೆ ಸಮಿತಿ ಸದಸ್ಯನಾಗಿ ಆಯ್ಕೆಯಾಗಿದ್ದಾರೆ.
37 ವರ್ಷದ ಜಾರ್ಜ್ ಬೇಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿಲ್ಲವಾದರೂ ಆಯ್ಕೆ ಸಮಿತಿ ಸದಸ್ಯನ ಪಟ್ಟ ಅವರನ್ನು ಹುಡುಕಿಕೊಂಡು ಬಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ನಾಯಕನಾದ ಹೆಗ್ಗಳಿಕೆಗೆ ಪಾತ್ರನಾಗಿದ್ದ ಈ ಆಟಗಾರ ಕಳೆದೆರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಯ್ಕೆಯಾಗಿರಲಿಲ್ಲ. ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಆಯ್ಕೆ ಸಮಿತಿ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು.
ಇದೀಗ ಗ್ರೆಗ್ ಚಾಪೆಲ್ ಆಯ್ಕೆ ಸಮಿತಿ ಸದಸ್ಯತ್ವದ ಅವಧಿ ಮುಗಿದಿರುವುದರಿಂದ ಅವರ ಜಾಗಕ್ಕೆ ಬೇಲಿ ಆಯ್ಕೆ ಮಾಡಲಾಗಿದೆ. ಈ ಮೂಲಕ ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವಾಗಲೇ ಆಯ್ಕೆ ಸಮಿತಿಯ ಸದಸ್ಯರಾದ ಹೆಗ್ಗಳಿಕೆಗೂ ಈ ಕ್ರಿಕೆಟಿಗ ಪಾತ್ರರಾಗಲಿದ್ದಾರೆ.
ಕೋಚ್ ಜಸ್ಟಿನ್ ಲ್ಯಾಂಗರ್ ಹಾಗೂ ಆಯ್ಕೆ ಸಮಿತಿ ಅಧ್ಯಕ್ಷ ಟ್ರೇವರ್ ಹೋನ್ಸ್ ಅವರ ಜೊತೆ ಆಯ್ಕೆ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಬಿಗ್ಬ್ಯಾಶ್ನಿಂದ ಬೇಲಿ ದೂರ ಉಳಿಯಲಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಬೇಲಿ, 5 ಟೆಸ್ಟ್, 90 ಏಕದಿನ ಪಂದ್ಯ ಹಾಗೂ 30 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 3 ಶತಕ ಸಹಿತ 3,044 ರನ್ ಗಳಿಸಿದ್ದು, ಟಿ20ಯಲ್ಲಿ 473 ರನ್ ಗಳಿಸಿದ್ದಾರೆ.