ಅಡಿಲೇಡ್: ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಕರಾರುವಕ್ಕು ಬೌಲಿಂಗ್ ದಾಳಿ ನಡೆಸಿದ ಟೀಂ ಇಂಡಿಯಾ ಬೌಲರ್ಗಳು ಮೊದಲ ಇನ್ನಿಂಗ್ನಲ್ಲಿ ಆಸೀಸ್ ತಂಡವನ್ನು 191 ರನ್ಗಳಿಗೆ ನಿರ್ಬಂಧಿಸಿದ್ದು, ಭಾರತ ತಂಡಕ್ಕೆ 53 ರನ್ಗಳ ಮುನ್ನಡೆ ತಂದುಕೊಟ್ಟಿದ್ದಾರೆ.
ಎರಡನೇ ದಿನದ ಆರಂಭದಲ್ಲಿ 244 ರನ್ಗಳಿಗೆ ಭಾರತ ತಂಡ ಆಲ್ಔಟ್ ಆದ ನಂತರ ಆಸೀಸ್ ಪರ ಇನ್ನಿಂಗ್ ಆರಂಭಿಸಿ ವೇಡ್ ಮತ್ತು ಬರ್ನ್ಸ್ ಟೀಂ ಇಂಡಿಯಾ ದಾಳಿಗೆ ರನ್ ಗಳಿಸಲು ಪರದಾಡಿದ್ರು. ಇಬ್ಬರೂ ಆರಂಭಿಕ ಆಟಗಾರರನ್ನು ಎಲ್ಬಿಡಬ್ಲ್ಯೂ ಬಲಗೆ ಕೆಡವಿದ ಬುಮ್ರಾ ಭಾರತಕ್ಕೆ ಮೇಲುಗೈ ತಂದುಕೊಟ್ರು.
-
Cameron Green's debut innings was stopped short by an absolute classic from Virat Kohli - and the Indian captain enjoyed it a lot! #OhWhatAFeeling@toyota_Aus | #AUSvIND pic.twitter.com/krXXaZI1at
— cricket.com.au (@cricketcomau) December 18, 2020 " class="align-text-top noRightClick twitterSection" data="
">Cameron Green's debut innings was stopped short by an absolute classic from Virat Kohli - and the Indian captain enjoyed it a lot! #OhWhatAFeeling@toyota_Aus | #AUSvIND pic.twitter.com/krXXaZI1at
— cricket.com.au (@cricketcomau) December 18, 2020Cameron Green's debut innings was stopped short by an absolute classic from Virat Kohli - and the Indian captain enjoyed it a lot! #OhWhatAFeeling@toyota_Aus | #AUSvIND pic.twitter.com/krXXaZI1at
— cricket.com.au (@cricketcomau) December 18, 2020
ನಂತರ ಜೊತೆಯಾದ ಲಾಬುಶೇನ್ ಮತ್ತು ಸ್ಮಿತ್ ಕೆಲ ಕಾಲ ಉತ್ತಮವಾಗಿ ಬ್ಯಾಟ್ ಬೀಸಿದ್ರು. ಈ ವೇಳೆ ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರಿದ ಟೀಂ ಇಂಡಿಯಾ ಆಟಗಾರರು, 2 ಬಾರಿ ಲಾಬುಶೇನ್ ಕ್ಯಾಚ್ ಕೈಚೆಲ್ಲಿದ್ರು. ಆದರೆ ಉತ್ತಮವಾಗಿ ಸ್ಪೆಲ್ ಮಾಡಿದ ಅಶ್ವಿನ್ ಸ್ಟೀವ್ ಸ್ಮಿತ್(1) ವಿಕೆಟ್ ಪಡೆದು ಮಿಂಚಿದ್ರು.
-
Australia go to the dinner break five wickets down #AUSvIND
— cricket.com.au (@cricketcomau) December 18, 2020 " class="align-text-top noRightClick twitterSection" data="
SCORECARD: https://t.co/LGCJ7zSdrY pic.twitter.com/1DvVR5W3Bb
">Australia go to the dinner break five wickets down #AUSvIND
— cricket.com.au (@cricketcomau) December 18, 2020
SCORECARD: https://t.co/LGCJ7zSdrY pic.twitter.com/1DvVR5W3BbAustralia go to the dinner break five wickets down #AUSvIND
— cricket.com.au (@cricketcomau) December 18, 2020
SCORECARD: https://t.co/LGCJ7zSdrY pic.twitter.com/1DvVR5W3Bb
ನಂತರ ಟ್ರಾವಿಸ್ ಹೆಡ್ (7), ಮತ್ತು ಗ್ರೀನ್ (11) ವಿಕೆಟ್ ಪಡೆದ ಅಶ್ವಿನ್, ಆಸೀಸ್ ವೇಗಕ್ಕೆ ಕಡಿವಾಣ ಹಾಕಿದ್ರು. ಎರಡು ಬಾರಿ ಜೀವದಾನ ಪಡೆದು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಲಾಬುಶೇನ್ ಉಮೇಶ್ ಯಾದವ್ ಎಸತೆದಲ್ಲಿ ಎಲ್ಬಿ ಬಲೆಗೆ ಬಿದ್ರು. ಅದೇ ಓವರ್ನಲ್ಲಿ ಕಮ್ಮಿನ್ಸ್ (0) ವಿಕೆಟ್ ಪಡೆದ ಉಮೇಶ್ ಕಾಂಗರೂಗಳಿಗೆ ಶಾಕ್ ನೀಡಿದ್ರು.
-
Trapped in front!
— ICC (@ICC) December 18, 2020 " class="align-text-top noRightClick twitterSection" data="
Umesh Yadav strikes the pad and Marnus Labuschagne is dismissed for 47 ☝️#AUSvIND pic.twitter.com/7oZyRCt4P4
">Trapped in front!
— ICC (@ICC) December 18, 2020
Umesh Yadav strikes the pad and Marnus Labuschagne is dismissed for 47 ☝️#AUSvIND pic.twitter.com/7oZyRCt4P4Trapped in front!
— ICC (@ICC) December 18, 2020
Umesh Yadav strikes the pad and Marnus Labuschagne is dismissed for 47 ☝️#AUSvIND pic.twitter.com/7oZyRCt4P4
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಎಚ್ಚರಿಕೆಯ ಆಟವಾಡಿದ ಟಿಮ್ ಪೈನ್ ಅರ್ಧಶತಕ ಸಿಡಿಸಿದ್ರು. ಎರಡನೇ ರನ್ ಕದಿಯಲು ಹೋದ ಸ್ಟಾರ್ಕ್ (15) ರನ್ ಔಟ್ಗೆ ಬಲಿಯಾದ್ರೆ, ನಾಥನ್ ಲಿಯಾನ್ (10) ಅಶ್ವಿನ್ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಉಮೇಶ್ ಯಾದವ್ ಎಸೆತದಲ್ಲಿ ಪೂಜಾರಗೆ ಕ್ಯಾಚ್ ನೀಡದ ಹೆಜಲ್ವುಡ್(8) ವಿಕೆಟ್ ಕಳೆದುಕೊಳ್ಳುವ ಮೂಲಕ ಆಸೀಸ್ 191 ರನ್ಗೆ ಸರ್ವಪತನ ಕಂಡಿತು. ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಅಶ್ವಿನ್ 4, ಉಮೇಶ್ ಯಾದವ್ 3, ಬುಮ್ರಾ 2 ವಿಕೆಟ್ ಪಡೆದು ಮಿಂಚಿದ್ರು.