ಅಡಿಲೇಡ್ : ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಗುರುವಾರ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದ್ರೂ ನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ. ‘
ರಕ್ಷಣಾತ್ಮಕ ಆಟದ ಮೂಲಕ ಆಸೀಸ್ ಬೌಲರ್ಗಳ ಬೆವರಿಳಿಸಿದ ಪುಜಾರ ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾದ ವಿರುದ್ಧ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ದಾಖಲೆ ಬ್ರೇಕ್ ಮಾಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 28 ಇನ್ನಿಂಗ್ಸ್‌ಗಳಲ್ಲಿ 3,609 ಎಸೆತಗಳನ್ನು ಎದುರಿಸಿರುವ ಪೂಜಾರ, ಅಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಆರಂಭಿಕ ದಿನದಂದು 160 ಎಸೆತಗಳಲ್ಲಿ 43 ರನ್ ಗಳಿಸಿದ್ದಾರೆ.
-
No boundaries in his first 147 deliveries, and then two boundaries in a row for Cheteshwar Pujara.#AUSvIND live: https://t.co/LGCJ7zSdrY pic.twitter.com/xCXzShxVnn
— cricket.com.au (@cricketcomau) December 17, 2020 " class="align-text-top noRightClick twitterSection" data="
">No boundaries in his first 147 deliveries, and then two boundaries in a row for Cheteshwar Pujara.#AUSvIND live: https://t.co/LGCJ7zSdrY pic.twitter.com/xCXzShxVnn
— cricket.com.au (@cricketcomau) December 17, 2020No boundaries in his first 147 deliveries, and then two boundaries in a row for Cheteshwar Pujara.#AUSvIND live: https://t.co/LGCJ7zSdrY pic.twitter.com/xCXzShxVnn
— cricket.com.au (@cricketcomau) December 17, 2020
ಟೆಸ್ಟ್ ಕ್ರಿಕೆಟ್‌ನಲ್ಲಿ 5,962 ರನ್ ಗಳಿಸಿರುವ ರೂಟ್, ಕಳೆದ ಒಂದು ದಶಕದಲ್ಲಿ ಆಸ್ಟ್ರೇಲಿಯಾ ವಿರುದ್ಧ 3,607 ಎಸೆತಗಳನ್ನು ಎದುರಿಸಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಭವಿ ಬ್ಯಾಟ್ಸ್‌ಮನ್ ಕುಕ್ ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 3,115 ಮತ್ತು 3,274 ಎಸೆತಗಳನ್ನು ಎದುರಿಸಿದ್ದಾರೆ.
ಓದಿ ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದ ಟೀಂ ಇಂಡಿಯಾ.. ಕಾಂಗರೂಗಳಿಗೆ ಶಾಕ್ ಕೊಟ್ಟ ಬುಮ್ರಾ
ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಪೂಜಾರ ತಾಳ್ಮೆಯ ಆಟವಾಡಿದ್ರು. ಆದರೆ, ಚಹಾ ವಿರಾಮದ ಮೊದಲು ನಾಥನ್ ಲಿಯಾನ್ ಎಸೆತದಲ್ಲಿ ಔಟಾದರು. ಈ ಮೂಲಕ ಆಸ್ಟ್ರೇಲಿಯಾದ ಸ್ಪಿನ್ನರ್ ಲಯಾನ್ ಪೂಜಾರ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಹತ್ತನೇ ಬಾರಿಗೆ ಪೆಲಿನಿಯನ್ ಸೇರಿಸಿದ್ದಾರೆ.