ನವದೆಹಲಿ: ಭಾರತದಲ್ಲಿ ಟಿಕ್ ಟಾಕ್ ಹಾಗೂ 58 ಮೊಬೈಲ್ ಅಪ್ಲಿಕೇಷನ್ಗಳು ಬ್ಯಾನ್ ಆದ ಬೆನ್ನಲ್ಲೇ ವಾರ್ನರ್ ಕಾಲೆಳೆದು ರವಿಚಂದ್ರನ್ ಅಶ್ವಿನ್ ಸುದ್ದಿಯಾಗಿದ್ದಾರೆ.
-
Appo Anwar? @davidwarner31 😉 https://t.co/5slRjpmAIs
— Ashwin (During Covid 19)🇮🇳 (@ashwinravi99) June 29, 2020 " class="align-text-top noRightClick twitterSection" data="
">Appo Anwar? @davidwarner31 😉 https://t.co/5slRjpmAIs
— Ashwin (During Covid 19)🇮🇳 (@ashwinravi99) June 29, 2020Appo Anwar? @davidwarner31 😉 https://t.co/5slRjpmAIs
— Ashwin (During Covid 19)🇮🇳 (@ashwinravi99) June 29, 2020
ಲಾಕ್ಡೌನ್ ವೇಳೆಯಲ್ಲಿ ವಾರ್ನರ್ ಹಲವು ಟಿಕ್ ಟಾಕ್ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಂನಲ್ಲಿ ಪ್ರತಿದಿನ ಅಪ್ಲೋಡ್ ಮಾಡುತ್ತಿದ್ದರು. ಈ ವಿಡಿಯೋಗಳು ಬಹುಪಾಲು ಹಾಸ್ಯದಿಂದ ಕೂಡಿರುತ್ತಿದ್ದವು.
ಭಾರತದಲ್ಲಿ ಟಿಕ್ಟಾಕ್ ಸೇರಿ ಮೊಬೈಲ್ ಅಪ್ಲಿಕೇಷನ್ಗಳು ಬ್ಯಾನ್ ಆದ ನಂತರ ಧನ್ಯ ರಾಜೇಂದ್ರನ್ ಎಂಬುವವರ ಟ್ವಿಟರ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನ್, ಅಪ್ಪೋ ಅನ್ವಾರ್ ಡೇವಿಡ್ ವಾರ್ನರ್ ಎಂದು ಟ್ವೀಟ್ ಮಾಡಿದ್ದಾರೆ. ಇದು 1995ರಲ್ಲಿ ಬಂದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ 'ಬಾಷಾ'ದ ಡೈಲಾಗ್ನ ಧಾಟಿಯಲ್ಲಿದ್ದು, ಡೇವಿಡ್ ವಾರ್ನರ್ ಈಗ ಏನು ಮಾಡುತ್ತಾರೆ ಎಂಬ ಅರ್ಥ ನೀಡುತ್ತದೆ.
ಡೇವಿಡ್ ವಾರ್ನರ್ ಏಪ್ರಿಲ್ನಿಂದ ಟಿಕ್ಟಾಕ್ನಲ್ಲಿ ಸಕ್ರಿಯರಾಗಿದ್ದು, ಅವರ ಕುಟುಂಬದೊಂದಿಗೆ ಕೂಡಾ ಟಿಕ್ ಟಾಕ್ ಮಾಡುತ್ತಿದ್ದರು. ಈಗ ಅವರನ್ನು ಅಶ್ವಿನ್ ಈ ರೀತಿಯಾಗಿ ತಮಾಷೆ ಮಾಡಿದ್ದಾರೆ.
ಭಾರತ ಸರ್ಕಾರ 59 ಚೀನಾದ ಅಪ್ಲಿಕೇಷನ್ಗಳನ್ನು ಬ್ಯಾನ್ ಮಾಡಿದೆ. ಇವುಗಳಲ್ಲಿ ಪ್ರಮುಖವಾಗಿ ಟಿಕ್ಟಾಕ್, ವಿಚಾಟ್, ಯುಸಿ ಬ್ರೌಸರ್ ಸೇರಿದೆ.