ಮೆಲ್ಬೋರ್ನ್ : ಭಾರತ ವಿರುದ್ಧದ ಉಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ವಿರುದ್ಧ ನಡೆಯುತ್ತಿರುವ ವೈಯಕ್ತಿಕ ಯುದ್ಧದಲ್ಲಿ ಸ್ಟೀವ್ ಸ್ಮಿತ್ ವಿಜಯಶಾಲಿಯಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಸರಣಿಯು ಪ್ರಸ್ತುತ 1-1ರಲ್ಲಿ ಸಮವಾಗಿದೆ. ಮೂರನೇ ಟೆಸ್ಟ್ ಜನವರಿ 7ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಅಶ್ವಿನ್ ಅವರು ಈ ಸರಣಿಯಲ್ಲಿ ಸ್ಮಿತ್ ಅವರನ್ನು ಎರಡು ಬಾರಿ ಔಟ್ ಮಾಡಿದ್ದಾರೆ.
"ಟೀಂ ಇಂಡಿಯಾ ಬೌಲರ್ಗಳು ಉತ್ತಮವಾಗಿ ಬೌಲ್ ಮಾಡಿದ್ರು. ಅದರಲ್ಲೂ ವಿಶೇಷವಾಗಿ ಮೆಲ್ಬೋರ್ನ್‌ನಲ್ಲಿ ಹೆಚ್ಚು ಸ್ಪಿನ್ ಮತ್ತು ಬೌನ್ಸ್ ಇತ್ತು, ಇದನ್ನು ನಾವು ನಿರೀಕ್ಷಿಸಿರಲಿಲ್ಲ. ನಾವು ಆ ವಿಕೆಟ್‌ಗೆ ಸಾಕಷ್ಟು ಹೊಂದಿಕೊಳ್ಳಲಿಲ್ಲ" ಎಂದಿದ್ದಾರೆ.
ಓದಿ ಸೌರವ್ ಗಂಗೂಲಿ ಸ್ಥಿರ, ಮತ್ತೊಂದು ಆಂಜಿಯೋಪ್ಲಾಸ್ಟಿ ಕುರಿತು ಶೀಘ್ರ ನಿರ್ಧಾರ - ವೈದ್ಯರ ಮಾಹಿತಿ
ಸ್ಟೀವ್ ಸ್ಮಿತ್, ಅಶ್ವಿನ್ ವಿರುದ್ಧ ಸಾಕಷ್ಟು ಬಾರಿ ಆಡಿದ್ದಾರೆ. ಇದಕ್ಕೂ ಮೊದಲು, ಸ್ಮಿತ್ ಇಲ್ಲಿ ಯಶಸ್ವಿಯಾಗಿದ್ದಾರೆ. ಅವರು ಉತ್ತಮವಾಗಿ ಆಡುತ್ತಾರೆ ಎಂದು ನನಗೆ ವಿಶ್ವಾಸವಿದೆ. ಅಶ್ವಿನ್ ಮತ್ತು ಜಡೇಜಾ ಕಠಿಣ ಸ್ಪಿನ್ ಜೋಡಿ, ಅವರು ಬಹಳ ಸ್ಥಿರ ಪ್ರದರ್ಶನ ತೋರಿದ್ದಾರೆ. ಅವರನ್ನು ಎದುರಿಸಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು" ಎಂದು ವೇಡ್ ಹೇಳಿದ್ದಾರೆ.