ಸಿಡ್ನಿ:ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದು ವಿಶ್ವದಾಖಲೆಗೆ ಪಾತ್ರರಾಗಿದ್ದ ಮಿಶೆಲ್ ಸ್ಟಾರ್ಕ್ರವರು ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನಪಡೆಯುವುದು ಅನುಮಾನ ಎಂದು ತಿಳಿದುಬಂದಿದೆ.
ತನ್ನ ಕರಾರುವಾಕ್ ಯಾರ್ಕರ್ ದಾಳಿಯಿಂದ ವಿಶ್ವಕಪ್ನಲ್ಲಿ ಎದುರಾಳಿಗಳ ನಿದ್ದೆಗೆಡಿಸಿದ್ದ ಆಸೀಸ್ ಬೌಲರ್, ಪ್ರತಿಷ್ಠಿತ ಆಸೀಸ್ ಸರಣಿಯಲ್ಲಿ ಪೀಟರ್ ಸಿಡ್ಲ್ ಹಾಗೂ ಜೋಸ್ ಹೆಜಲ್ವುಡ್ರೊಡನೆ ಪೈಪೋಟಿ ನಡೆಸಬೇಕಾಗಿದೆ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಜೇಮ್ಸ್ ಪ್ಯಾಟಿನ್ ಸನ್, ಪ್ಯಾಟ್ ಕಮ್ಮಿನ್ಸ್ ವೇಗಿಗಳ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದು, ಇನ್ನೊಂದು ಸ್ಥಾನಕ್ಕೆ ಸ್ಟಾರ್ಕ್ ಹೆಜಲ್ವುಡ್ ಹಾಗೂ ಪೀಟರ್ ಸಿಡ್ಲ್ರೊಡನೆ ಪೈಪೋಟಿ ನಡೆಸಲೇಬೇಕಿದೆ ಎಂದು ಹೇಳಿದ್ದಾರೆ.ಮೂರು ಬೌಲರ್ಗಳು ಅತ್ಯುತ್ತಮ ಪ್ರದರ್ಶನ ನೀಡುವಂತಹವರು ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅವರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡುವ ಪರಿಸ್ಥಿತಿ ಇದೆ. ಕಮಿನ್ಸ್, ಹಾಗೂ ಎರಡು ವರ್ಷಗಳ ನಂತರ ತಂಡ ಸೇರಿರುವ ಪ್ಯಾಟಿನ್ಸನ್ರಿಗೆ 11ರ ಬಳಗದಲ್ಲಿ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ಗಿಂತ ಸೀಮಿತ ಓವರ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಕಳೆದ ಟೆಸ್ಟ್ ಸರಣಿಗಳಲ್ಲಿ ಅವರ ಟೆಸ್ಟ್ ಕ್ರಿಕೆಟ್ ಪ್ರದರ್ಶನ ಆಯ್ಕೆಗಾರರ ಗಮನ ಸೆಳೆದಿಲ್ಲ. ಹಾಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶಗಿಟ್ಟಿಸಿಕೊಳ್ಳುವುದು ಕಷ್ಟವೆನ್ನಲಾಗುತ್ತಿದೆ.