ETV Bharat / sports

ಜೋಫ್ರಾ ಆರ್ಚರ್​ ಮಾಡಿದ ತಪ್ಪಿನಿಂದ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಗೆ ಇಷ್ಟೊಂದು ನಷ್ಟ! - ಇಂಗ್ಲೆಂಡ್​ ಕ್ರಿಕೆಟ್​ ತಂಡ

ವಿಂಡೀಸ್‌​ ವಿರುದ್ಧ ಮೂರು ಟೆಸ್ಟ್​ ಪಂದ್ಯಗಳ ಸರಣಿಯ ಎರಡನೇ ಪಂದ್ಯ ನಡೆಯುತ್ತಿದೆ. ಇದರ ಮಧ್ಯೆ ಜೋಫ್ರಾ ಆರ್ಚರ್​ ಮಾಡಿರುವ ಎಡವಟ್ಟು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯನ್ನು ತೊಂದರೆಗೀಡು ಮಾಡಿದೆ.

Jofra Archer
Jofra Archer
author img

By

Published : Jul 17, 2020, 6:57 PM IST

ಮ್ಯಾಂಚೆಸ್ಟರ್​​: ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದ ವೇಳೆ ಬಯೋಸೆಕ್ಯೂರ್​ ಪ್ರೋಟೋಕಾಲ್​ ಉಲ್ಲಂಘಿಸಿರುವ ಆರೋಪದ ಮೇಲೆ 2ನೇ ಟೆಸ್ಟ್​​​ ಪಂದ್ಯದಿಂದ ಜೋಫ್ರಾ ಆರ್ಚರ್​​ ಅವರನ್ನು ಹೊರಗಿಡಲಾಗಿದೆ. ಈ ಮಧ್ಯೆ ಅವರು ಮಾಡಿರುವ ತಪ್ಪಿನಿಂದ ಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ECB
ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ವ್ಯವಸ್ಥಾಪಕ​ ನಿರ್ದೇಶಕ​​ ಶ್ಲೇ ಗೈಲ್ಸ್‌

ಇದೇ ವಿಷಯವಾಗಿ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ವ್ಯವಸ್ಥಾಪಕ​ ನಿರ್ದೇಶಕ​​ ಶ್ಲೇ ಗೈಲ್ಸ್​​ ಮಾತನಾಡಿದ್ದು, ಕೊರೊನಾ ವೈರಸ್​ ಮುನ್ನೆಚ್ಚರಿಕಾ ನಿಯಮ ಉಲ್ಲಂಘಿಸಿರುವ ಆರ್ಚರ್​​ ನಿರ್ಧಾರದಿಂದ ಮಂಡಳಿಗೆ 10 ಮಿಲಿಯನ್​ ಪೌಂಡ್​ಗಳಷ್ಟು ನಷ್ಟವಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ನಿಯಮ ಉಲ್ಲಂಘನೆ: ಜೋಫ್ರಾ ಆರ್ಚರ್​​​​​​​​​​ ​ 2ನೇ ಟೆಸ್ಟ್​ನಿಂದ ಹೊರಗಿಟ್ಟ ಇಂಗ್ಲೆಂಡ್​

ಜೋಫ್ರಾ ಆರ್ಚರ್​ ನಡೆಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ವೆಸ್ಟ್​ ಇಂಡೀಸ್​ ತಂಡ ಕೂಡ ಪ್ರಶ್ನಿಸಿದೆ. ಆದರೆ ಅವರ ಮನವೊಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲನೇ ಟೆಸ್ಟ್​ ಪಂದ್ಯ ಮುಕ್ತಾಯದ ಬಳಿಕ ಸೌಥಾಂಪ್ಟನ್​​ನಿಂದ ಮ್ಯಾಂಚೆಸ್ಟರ್​ಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಅವರು ತಮ್ಮ ನಿವಾಸಕ್ಕೆ ಹೋಗಿ ಬಂದಿದ್ದರು.

Jofra Archer
ಮೊದಲ ಟೆಸ್ಟ್​​ ಪಂದ್ಯದಲ್ಲಿ ಆರ್ಚರ್​​

ಈ ವಿಚಾರವಾಗಿ ಆರ್ಚರ್​ ಕ್ಷಮೆಯಾಚಿಸಿದ್ದಾರೆ. ನನ್ನ ತಪ್ಪಿನ ಅರಿವಾಗಿದೆ. ನಾನು ಮಾಡಿರುವ ತಪ್ಪಿನಿಂದ ಇಡೀ ತಂಡ ಹಾಗೂ ಮ್ಯಾನೇಜ್​ಮೆಂಟ್​ ಕೂಡ ಅಪಾಯ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.

ಅವರನ್ನು ತಂಡದಿಂದ ಹೊರಗಿಟ್ಟು ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್​ ಬಂದಿದೆ. ಜೊತೆಗೆ ಅವರನ್ನು ಐಸೊಲೇಷನ್​​ನಲ್ಲಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.