ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರ್ನ ಕೊನೆಯ ಎಸೆತದಲ್ಲಿ ಗೆಲುವು ದಾಖಲು ಮಾಡಿದ್ದು, ಇದಕ್ಕೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಗೆಲುವಿನ ಲಯಕ್ಕೆ ಮರಳಿದ ಆರ್ಸಿಬಿ... ಕಳಪೆ ಬ್ಯಾಟಿಂಗ್ ಮುಂದುವರೆಸಿದ ರನ್ ಮಷಿನ್!
ಆರ್ಸಿಬಿ ನೀಡಿದ್ದ 202ರನ್ಗಳ ಗುರಿ ಬೆನ್ನತ್ತಿದ್ದ ಮುಂಬೈ 20 ಓವರ್ಗಳಲ್ಲಿ 201ರನ್ಗಳಿಕೆ ಮಾಡಿ ಪಂದ್ಯವನ್ನ ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯಿತು. ಈ ವೇಳೆ, ಮುಂಬೈ 8ರನ್ಗಳಿಕೆ ಮಾಡಿತು. ಇದರ ಬೆನ್ನತ್ತಿದ್ದ ಆರ್ಸಿಬಿ ಕೊನೆಯ ಎಸೆತದಲ್ಲಿ ಪಂದ್ಯ ಗೆದ್ದುಕೊಂಡಿತ್ತು. ನಿನ್ನೆಯ ಪಂದ್ಯ ನೋಡಲು ಬಹಳಷ್ಟು ರೋಚಕತೆಯಿಂದ ಕೂಡಿದ್ದರಿಂದ ಅನುಷ್ಕಾ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಗರ್ಭಿಣಿಗೆ ತುಂಬ ರೋಮಾಂಚನಕಾರಿ ಪಂದ್ಯ, ಎಂತಹ ತಂಡವಿದು ಎಂದು ಬರೆದುಕೊಂಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಪರ ಪಡಿಕಲ್ (54 ರನ್)ಫಿಂಚ್ (52 ರನ್) ಡಿವಿಲಿಯರ್ಸ್ (55 ರನ್)ಗಳಿಕೆ ಮಾಡಿದ್ರೆ, ಮುಂಬೈ ಪರ ಯಂಗ್ ಪ್ಲೇಯರ್ ಇಶಾನ್ ಕಿಶಾನ್ (99 ರನ್) ಕೀರನ್ ಪೋಲಾರ್ಡ್ (60 ರನ್)ಗಳಿಕೆ ಮಾಡಿದರು.