ETV Bharat / sports

ಮಂಕಿಗೇಟ್​ ಪ್ರಕರಣದ ನಂತರವೂ ಸರಣಿ ಮುಂದುವರಿಯಲು ಕಾರಣ ತಿಳಿಸಿದ ಜಂಬೋ - ಮಂಕಿಗೇಟ್​ ವಿವಾದ

2008ರ ಸಿಡ್ನಿ ಟೆಸ್ಟ್​ ವೇಳೆ ಭಾರತದ ವಿರುದ್ಧ ಅಂಪೈರ್​ಗಳು ಹಲವು ವ್ಯತಿರಿಕ್ತ ತೀರ್ಪುಗಳನ್ನು ನೀಡಿದ್ದರು. ಹರ್ಭಜನ್​ ಸಿಂಗ್​ರ ಮಂಕಿಗೇಟ್​ ವಿವಾದದಿಂದ ಭಾರತ ತಂಡ ನಲುಗಿತ್ತು. ಐಸಿಸಿ, ಹರ್ಭಜನ್​ ಸಿಂಗ್​ಗೆ 3 ಪಂದ್ಯಗಳ ನಿಷೇಧ ಹಾಗೂ ಪಂದ್ಯದ ಸಂಭಾವನೆಯ ಶೇ 50 ರಷ್ಟನ್ನು ದಂಡವಾಗಿ ವಿಧಿಸಿತ್ತು.

ಮಂಕಿಗೇಟ್​ ವಿವಾದ
ಮಂಕಿಗೇಟ್​ ವಿವಾದ
author img

By

Published : Aug 1, 2020, 7:07 PM IST

ಬೆಂಗಳೂರು: 2008ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಿಡ್ನಿ ಟೆಸ್ಟ್​ನಲ್ಲಿ ಅಂಪೈರ್​ ತೀರ್ಪುಗಳು ಭಾರತದ ವಿರುದ್ಧವಿದ್ದವು. ಇದ್ರ ಜೊತೆಗೆ ಮಂಕಿಗೇಟ್​ ಪ್ರಕರಣದಲ್ಲಿ ಭಜ್ಜಿಗೆ ಅನ್ಯಾಯವಾಗಿತ್ತು. ಇಷ್ಟಿದ್ದರೂ ಟೆಸ್ಟ್​ ಸರಣಿಯನ್ನು ಮುಂದುವರಿಸಿದ್ದೇಕೆ ಎಂಬುದನ್ನು ಭಾರತ ಕ್ರಿಕೆಟ್ ಕಂಡ ಅದ್ಭುತ ಸ್ಪಿನ್ನರ್​ ಹಾಗೂ ಮಾಜಿ ಟೆಸ್ಟ್​ ತಂಡದ ನಾಯಕ ಅನಿಲ್​ ಕುಂಬ್ಳೆ ಬಹಿರಂಗಪಡಿಸಿದ್ದಾರೆ.

ಅನಿಲ್​ ಕುಂಬ್ಳೆ- ಹರ್ಭಜನ್​ ಸಿಂಗ್​
ಅನಿಲ್​ ಕುಂಬ್ಳೆ- ಹರ್ಭಜನ್​ ಸಿಂಗ್​

ಈ ಬಗ್ಗೆ ಟೀಮ್​ ಇಂಡಿಯಾ ಸ್ಪಿನ್ನರ್​ ಆರ್.ಅಶ್ವಿನ್ ನಡೆಸಿದ ಯೂಟ್ಯೂಬ್​ ಸಂದರ್ಶನದಲ್ಲಿ ಕುಂಬ್ಳೆ ಮಾತನಾಡಿದ್ದಾರೆ.

ಹರ್ಭಜನ್​ ಸಿಂಗ್​- ಆ್ಯಂಡ್ಡ್ಯೂ ಸೈಮಂಡ್ಸ್​
ಹರ್ಭಜನ್​ ಸಿಂಗ್​- ಆ್ಯಂಡ್ಡ್ಯೂ ಸೈಮಂಡ್ಸ್​

"ನಾಯಕದನಾದವನು ಮೈದಾನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಬದ್ಧನಾಗಿರಬೇಕು. ಆದರೆ ಹರ್ಭಜನ್ ವಿವಾದದ​ ವಿಚಾರದಲ್ಲಿ (ಮಂಕಿಗೇಟ್ ಪ್ರಕರಣ) ಮೈದಾನದ ಹೊರಗೂ ನಿರ್ಧಾರ ತೆಗೆದುಕೊಳ್ಳುವ ಸವಾಲು ಎದುರಾಗಿತ್ತು. ಜೊತೆಗೆ ಕ್ರೀಡೆಯ ಮಹತ್ವವನ್ನು ಉಳಿಸಬೇಕಾಗಿತ್ತು. ಆ ಸಂದರ್ಭದಲ್ಲಿ ನಾವೇನಾದರೂ ಭಾರತಕ್ಕೆ ಹಿಂದಿರುಗಲು ತೀರ್ಮಾನಿಸಿದ್ದರೆ, ಭಾರತ ತಂಡ ತಪ್ಪು ಮಾಡಿದೆ, ಅದಕ್ಕಾಗಿ ವಾಪಸ್ಸಾಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು" ಎಂದು ಅವರು ಹೇಳಿಕೊಂಡಿದ್ದಾರೆ.

"ಐಸಿಸಿ ಹರ್ಭಜನ್​ ವಿರುದ್ಧ ತೆಗೆದುಕೊಂಡ ನಿರ್ಧಾರ ತಪ್ಪಾಗಿತ್ತು. ಆದರೆ ನಾನು ಮೊದಲೆರಡು ಪಂದ್ಯಗಳನ್ನು ಸೋತಿದ್ದೆವು. ನಾವು ಸರಣಿಯನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲ ಸಾಧಿಸಿಬೇಕೆಂದು ಬಯಸಿದ್ದೆವು. ಅದಕ್ಕಾಗಿ ಸರಣಿಯಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ್ದೆವು" ಎಂದು ಅವರು ತಿಳಿಸಿದ್ದಾರೆ.

ಭಾರತ ಆಸ್ಟ್ರೇಲಿಯಾ ಟೆಸ್ಟ್​ ಸರಣಿ 2008
ಭಾರತ ಆಸ್ಟ್ರೇಲಿಯಾ ಟೆಸ್ಟ್​ ಸರಣಿ 2008

ಭಾರತ ತಂಡದ ಈ ವಿವಾದದ ನಂತರ ನಡೆದ ಮೂರನೇ ಪಂದ್ಯದಲ್ಲಿ 72 ರನ್​ಗಳ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವುದರೊಂದಿಗೆ ಸರಣಿ 2-1ರಲ್ಲಿ ಆಸ್ಟ್ರೇಲಿಯಾ ಗೆದ್ದುಕೊಂಡಿತು.

ಅನಿಲ್​ ಕುಂಬ್ಳೆ 14 ಟೆಸ್ಟ್​ಗಳಲ್ಲಿ ಭಾರತ ತಂಡದ ನಾಯಕರಾಗಿದ್ದರು. ಅವರ ಅವಧಿಯಲ್ಲಿ ಭಾರತ 3 ಗೆಲುವು , ಆರು ಸೋಲು ಹಾಗೂ 5 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. 1990 ರಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಕುಂಬ್ಳೆ 2008ರಲ್ಲಿ ನಿವೃತ್ತಿ ಹೊಂದಿದ್ದರು. ಅವರು ಟೆಸ್ಟ್​ನಲ್ಲಿ 619 ವಿಕೆಟ್​ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್​ ಪಡೆದ 3ನೇ ಬೌಲರ್​ ಎನಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.