ಬರ್ಮಿಂಗ್ ಹ್ಯಾಮ್: ಮೊದಲ ಆ್ಯಶಸ್ ಟೆಸ್ಟ್ನಲ್ಲಿ 256 ರನ್ಗಳಿಂದ ಸೋಲನುಭಿಸಿರುವ ಇಂಗ್ಲೆಂಡ್ ತಂಡಕ್ಕೆ ಜೇಮ್ಸ್ ಆ್ಯಂಡರ್ಸನ್ ಗಾಯಗೊಂಡಿರುವುದು ಚಿಂತೆಗೀಡು ಮಾಡಿದೆ.
ಕೌಂಟಿ ಕ್ರಿಕೆಟ್ನಲ್ಲಿ ಲಾಂಕ್ಶೈರ್ ತಂಡದ ಪರ ಆಡುವ ವೇಳೆ ಕಣಕಾಲು ಮಾಂಸಕಂಡದ( ಪಾದ ಹಾಗೂ ಮೊಣಕಾಲಿನ ಮಧ್ಯೆ ಆಗುವ ನೋವು) ನೋವಿಗೆ ತುತ್ತಾಗಿದ್ದರು. ಮತ್ತೆ ಜುಲೈ 2 ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕಣಕಾಲು ನೋವು ಕಾಣಿಸಿಕೊಂಡಿತ್ತು. ಅ ವೇಳೆ ಆ್ಯಂಡರ್ಸನ್ ಕೇವಲ 4 ಓವರ್ ಬೌಲಿಂಗ್ ಮಾಡಿದ್ದರು.
ಮಂಗಳವಾರ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಜೇಮ್ಸ್ ಆ್ಯಂಡರ್ಸನ್ ಕಣಕಾಲಿನ ಗಾಯಕ್ಕೆ ತುತ್ತಾಗಿರುವುದು MRI ಸ್ಕಾನ್ನಲ್ಲಿ ದೃಡಪಟ್ಟಿದೆ ಎಂದು ತಿಳಿಸಿದೆ. ಅಲ್ಲದೆ ಅವರು ವೈದ್ಯಕೀಯ ಪರೀಕ್ಷೆಗೆ ಒಳಪಡಲಿದ್ದು, ಸರಣಿಯ ಮುಂದಿನ ಪಂದ್ಯಗಳಲ್ಲಿ ಲಭ್ಯರಾಗಬಲ್ಲರೇ ಎಂಬುದನ್ನು ವೈದ್ಯಕೀಯ ಪರೀಕ್ಷೆಯ ಫಲಿತಾಂಶದ ನಂತರ ತಿಳಿಯಲಿದೆ ಎಂದು ತಿಳಿಸಿದೆ.
-
BREAKING: James Anderson has been ruled out of the second #Ashes Test with a calf injury. pic.twitter.com/OvGaJwLfAS
— ICC (@ICC) August 6, 2019 " class="align-text-top noRightClick twitterSection" data="
">BREAKING: James Anderson has been ruled out of the second #Ashes Test with a calf injury. pic.twitter.com/OvGaJwLfAS
— ICC (@ICC) August 6, 2019BREAKING: James Anderson has been ruled out of the second #Ashes Test with a calf injury. pic.twitter.com/OvGaJwLfAS
— ICC (@ICC) August 6, 2019