ETV Bharat / sports

ಕೊನೆಯ ಓವರ್​ನಲ್ಲಿ 17 ರನ್​ ಸಿಡಿಸಿ ಅಚ್ಚರಿಯ ಜಯ ಸಾಧಿಸಿದ ನೇಪಾಳ - Nepal's thrilling win

ಓಮನ್​ನಲ್ಲಿ ನಡೆಯುತ್ತಿರುವ 5 ತಂಡಗಳ ನಡುವಿನ ಓಮನ್​ ಟಿ-20 ಸರಣಿಯಲ್ಲಿ ಸೋಮವಾರ ನೇಪಾಳ ತಂಡ ನೆದರ್ಲ್ಯಾಂಡ್ಸ್​ ನೀಡಿದ್ದ 134 ರನ್​ಗಳ ಗುರಿಯನ್ನು ಇನ್ನೊಂದು ಎಸೆತವಿರುವಂತೆ ತಲುಪಿ 4 ವಿಕೆಟ್​ಗಳ ಜಯ ಸಾಧಿಸಿತು.

Karan KC
author img

By

Published : Oct 8, 2019, 12:24 PM IST

ಅಮರಾತ್​: ಈಗಷ್ಟೇ ಕ್ರಿಕೆಟ್​ನಲ್ಲಿ ನೆಲೆ ಕಂಡುಕೊಳ್ಳುತ್ತಿರುವ ನೇಪಾಳ ಕ್ರಿಕೆಟ್​ ತಂಡ ನೆದರ್ಲಾಂಡ್ಸ್​ ತಂಡವನ್ನು ಕೊನೆಯ ಓವರ್​ನಲ್ಲಿ 17 ರನ್​ ಸಿಡಿಸುವ ಮೂಲಕ ಅಚ್ಚರಿಯ ಜಯ ಸಾಧಿಸಿದೆ.

ಓಮನ್​ನಲ್ಲಿ ನಡೆಯುತ್ತಿರುವ 5 ತಂಡಗಳ ನಡುವಿನ ಓಮನ್​ ಟಿ-20 ಸರಣಿಯಲ್ಲಿ ಸೋಮವಾರ ನೇಪಾಳ ತಂಡ ನೆದರ್ಲ್ಯಾಂಡ್ಸ್​ ನೀಡಿದ್ದ 134 ರನ್​ಗಳ ಗುರಿಯನ್ನು ಇನ್ನೊಂದು ಎಸೆತವಿರುವಂತೆ ತಲುಪಿ 4 ವಿಕೆಟ್​ಗಳ ಜಯ ಸಾಧಿಸಿತು.

ನೇಪಾಳಕ್ಕೆ ಕೊನೆಯ ಓವರ್​ನಲ್ಲಿ ಗೆಲ್ಲಲು 17 ರನ್​ಗಳ ಅವಶ್ಯಕತೆಯಿತ್ತು. ಸ್ನ್ಯಾಟರ್​ ಎಸೆದ ಆ ಓವರ್​ನಲ್ಲಿ ನೇಪಾಳದ ಯುವ ಆಲ್​ರೌಂಡರ್​ ಕೆಸಿ ಕರಣ್​ ಮೊದಲ ಎಸೆತದಲ್ಲಿ ಸಿಕ್ಸರ್​ ಸಿಡಿಸಿದರು. ನಂತರ ಡಾಟ್​ ಮಾಡಿ 3 ಮತ್ತು 4ನೆ ಎಸೆತದಲ್ಲಿ ಬಾಂಡರಿ ಹಾಗೂ ಸಿಕ್ಸರ್​ ಸಿಡಿಸಿ ಪಂದ್ಯವನ್ನು ಟೈ ಮಾಡಿಸಿದರು. 5 ನೇ ಎಸೆತದಲ್ಲಿ ಸಿಂಗಲ್​ ತೆಗೆದುಕೊಳ್ಳುವ ಮೂಲಕ ಪಂದ್ಯವನ್ನು ಗೆದ್ದು ದಾಖಲೆ ಬರೆದರು.

ಕರಣ್​ಗೂ ಮೊದಲು 2016 ಟಿ-20 ವಿಶ್ವಕಪ್​ನಲ್ಲಿ ವೆಸ್ಟ್​ ಇಂಡೀಸ್​ ಕೊನೆಯ ಓವರ್​ನಲ್ಲಿ 19 ರನ್ ಹಾಗೂ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡ 22 ರನ್​ ಚೇಸ್​ ಮಾಡಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.