ETV Bharat / sports

ಹೀಗೊಂದು ಅತಿ ಕಳಪೆ ದಾಖಲೆ: ಹತ್ತೂ ಆಟಗಾರರು ಶೂನ್ಯಕ್ಕೆ ಔಟ್..! - ಹ್ಯಾರಿಸ್ ಶೀಲ್ಡ್​​ ಕ್ರಿಕೆಟ್ ಟೂರ್ನಿ

ಹೌದು, ಮುಂಬೈನಲ್ಲಿ ನಡೆದ ಹ್ಯಾರಿಸ್ ಶೀಲ್ಡ್ ಪಂದ್ಯದಲ್ಲಿ ಚಿಲ್ಡ್ರನ್​ ವೆಲ್​​ಫೇರ್​ ಸೆಂಟರ್​ ಸ್ಕೂಲ್​​ನ ಎಲ್ಲ ಆಟಗಾರರು ಶೂನ್ಯಕ್ಕೆ ನಿರ್ಗಮಿಸಿ ವಿಶೇಷ ಹಾಗೂ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಹ್ಯಾರಿಸ್ ಶೀಲ್ಡ್
author img

By

Published : Nov 21, 2019, 4:10 PM IST

ಮುಂಬೈ: ಜಂಟಲ್​ಮೆನ್ ಕ್ರೀಡೆ ಕ್ರಿಕೆಟ್​​ನಲ್ಲಿ ದಾಖಲೆಗಳಿಗೆ ಬರವಿಲ್ಲ. ಆದರೆ ಈ ಸುದ್ದಿ ಅತ್ಯಂತ ಕಳಪೆ ಹಾಗೂ ತಂಡವೇ ನಾಚಿಕೆಪಡುವ ದಾಖಲೆ..!

ಹೌದು, ಮುಂಬೈನಲ್ಲಿ ನಡೆದ ಹ್ಯಾರಿಸ್ ಶೀಲ್ಡ್ ಪಂದ್ಯದಲ್ಲಿ ಚಿಲ್ಡ್ರನ್​ ವೆಲ್​​ಫೇರ್​ ಸೆಂಟರ್​ ಸ್ಕೂಲ್​​ನ ಎಲ್ಲ ಆಟಗಾರರು ಶೂನ್ಯಕ್ಕೆ ನಿರ್ಗಮಿಸಿ ವಿಶೇಷ ಹಾಗೂ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಹ್ಯಾರಿಸ್ ಶೀಲ್ಡ್​​ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ವಾಮಿ ವಿವೇಕಾನಂದ ಇಂಟರ್​ನ್ಯಾಷನಲ್​​ ಸ್ಕೂಲ್​​ ತಂಡ ಲೀಲಾಜಾಲವಾಗಿ ರನ್​ ಗಳಿಸುತ್ತಾ ಸಾಗಿತ್ತು. ಮೂರನೇ ಕ್ರಮಾಂಕದ ಆಟಗಾರ ಮೀತ್ ಮೆಯೇಕರ್​​ 338 ರನ್(56 ಬೌಂಡರಿ, 7 ಸಿಕ್ಸರ್) ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಉಳಿದ ಬ್ಯಾಟ್ಸ್​ಮನ್​ಗಳಿಂದಲೂ ಪೂರಕ ಕೊಡುಗೆ ಬಂತು. ಚಿಲ್ಡ್ರನ್ ವೆಲ್​ಫೇರ್ ಟೀಂ 57 ಇತರ ರನ್​ ನೀಡಿದ್ದಲ್ಲದೆ, ನಿಗದಿತ ಸಮಯದಲ್ಲಿ 45 ಪೂರೈಸದ ಪರಿಣಾಮ 156 ರನ್​​ಗಳ ಪೆನಾಲ್ಟಿಯನ್ನು ಎದುರಾಳಿ ತಂಡಕ್ಕೆ ನೀಡಿತು. ಒಟ್ಟಾರೆ ಸ್ವಾಮಿ ವಿವೇಕಾನಂದ ತಂಡ 4 ವಿಕೆಟ್ ನಷ್ಟಕ್ಕೆ 761 ರನ್​ ಗಳಿಸಿ ಇನ್ನಿಂಗ್ಸ್​ ಮುಗಿಸಿತು.

ಆದರೆ 762 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಬಂದ ಚಿಲ್ಡ್ರನ್ ವೆಲ್​ಫೇರ್ ತಂಡ ಆರೇ ಓವರ್​ನಲ್ಲಿ ಇನ್ನಿಂಗ್ಸ್ ಕೊನೆಗೊಳಿಸಿತು. ಆದರೆ ಯಾವೊಬ್ಬ ಬ್ಯಾಟ್ಸ್​​ಮನ್ ಸಹ ರನ್​ ಗಳಿಸಲಿಲ್ಲ ಎನ್ನುವುದು ವಿಶೇಷ. ಅಲೋಕ್ ಪೌಲ್​​ ಹ್ಯಾಟ್ರಿಕ್ ಸಹಿತ ಆರು ವಿಕೆಟ್ ಕಿತ್ತರು.

762 ರನ್ ಬಾರಿಸಿದ್ದ ಸ್ವಾಮಿ ವಿವೇಕಾನಂದ ತಂಡವನ್ನು ಹಲವಾರು ವರ್ಷಗಳ ಹಿಂದೆ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಪ್ರತಿನಿಧಿಸಿದ್ದರು ಎನ್ನುವುದು ಉಲ್ಲೇಖನೀಯ. 761 ರನ್​ಗಳ ಬೃಹತ್ ಗೆಲುವು ಸಾಧಿಸಿದ ಸ್ವಾಮಿ ವಿವೇಕಾನಂದ ತಂಡ ಹ್ಯಾರಿಸ್ ಶೀಲ್ಡ್ ಟೂರ್ನಿಯ 126 ವರ್ಷದ ಇತಿಹಾಸದಲ್ಲಿ ನೂತನ ದಾಖಲೆ ಬರೆಯಿತು.

Intro:Body:

ಉಳಿದ ಬ್ಯಾಟ್ಸ್​ಮನ್​ಗಳಿಂದಲೂ ಪೂರಕ ಕೊಡುಗೆ ಬಂತು. ಚಿಲ್ಡ್ರನ್ ವೆಲ್​ಫೇರ್ ಟೀಂ 57 ಇತರೆ ರನ್​ ನೀಡಿದ್ದಲ್ಲದೆ, ನಿಗದಿತ ಸಮಯದಲ್ಲಿ 45 ಪೂರೈಸದ ಪರಿಣಾಮ 156 ರನ್​​ಗಳ ಪೆನಾಲ್ಟಿಯನ್ನು ಎದುರಾಳಿ ತಂಡಕ್ಕೆ ನೀಡಿತು. ಒಟ್ಟಾರೆ ಸ್ವಾಮಿ ವಿವೇಕಾನಂದ ತಂಡ 4 ವಿಕೆಟ್ ನಷ್ಟಕ್ಕೆ 761 ರನ್​ ಗಳಿಸಿ ಇನ್ನಿಂಗ್ಸ್​ ಮುಗಿಸಿತು.

ಆದರೆ 762 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಬಂದ ಚಿಲ್ಡ್ರನ್ ವೆಲ್​ಫೇರ್ ತಂಡ ಆರೇ ಓವರ್​ನಲ್ಲಿ ಇನ್ನಿಂಗ್ಸ್ ಕೊನೆಗೊಳಿಸಿತು. ಆದರೆ ಯಾವೊಬ್ಬ ಬ್ಯಾಟ್ಸ್​​ಮನ್ ಸಹ ರನ್​ ಗಳಿಸಲಿಲ್ಲ ಎನ್ನುವುದು ವಿಶೇಷ. ಅಲೋಕ್ ಪೌಲ್​​ ಹ್ಯಾಟ್ರಿಕ್ ಸಹಿತ ಆರು ವಿಕೆಟ್ ಕಿತ್ತರು.

762 ರನ್ ಬಾರಿಸಿದ್ದ ಸ್ವಾಮಿ ವಿವೇಕಾನಂದ ತಂಡವನ್ನು ಹಲವಾರು ವರ್ಷಗಳ ಹಿಂದೆ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಪ್ರತಿನಿಧಿಸಿದ್ದರು ಎನ್ನುವುದು ಉಲ್ಲೇಖನೀಯ. 761 ರನ್​ಗಳ ಬೃಹತ್ ಗೆಲುವು ಸಾಧಿಸಿದ ಸ್ವಾಮಿ ವಿವೇಕಾನಂದ ತಂಡ ಹ್ಯಾರಿಸ್ ಶೀಲ್ಡ್ ಟೂರ್ನಿಯ 126 ವರ್ಷದ ಇತಿಹಾಸದಲ್ಲಿ ನೂತನ ದಾಖಲೆ ಬರೆಯಿತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.