ETV Bharat / sports

ಆಸೀಸ್ ನೆಲದಲ್ಲಿ ರವಿಶಾಸ್ತ್ರಿ ಗಮನಾರ್ಹ ಸಾಧನೆ: ಸರಣಿ ಗೆಲುವಿನಲ್ಲಿ ಕೋಚ್ ಮಹತ್ವದ ಪಾತ್ರ - ಟೀಂ ಇಂಡಿಯಾ ತರಬೇತುದಾರ ರವಿಶಾಸ್ತ್ರಿ

1992 ರ ವಿಶ್ವಕಪ್‌ನಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ ಕಾರಣ ರವಿಶಾಸ್ತ್ರಿ ಅವರನ್ನು ಟೀಕಿಸಲಾಯಿತು. ನಂತರ ಅವರು 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾಕ್ಕೆ ತರಬೇತುದಾರರಾಗಿ ಭೇಟಿ ನೀಡಿದರು, ಎರಡೂ ಬಾರಿಯೂ ಭಾರತ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆದ್ದಿದೆ.

ravi shastri
ರವಿಶಾಸ್ತ್ರಿ
author img

By

Published : Jan 22, 2021, 11:48 AM IST

ನವದೆಹಲಿ: ರವಿಶಾಸ್ತ್ರಿ ಅವರ ಆಸ್ಟ್ರೇಲಿಯಾ ಪ್ರವಾಸ ಯಾವಾಗಲೂ ಅದ್ಭುತವಾಗಿದೆ. ಕಳೆದ 35 ವರ್ಷಗಳಲ್ಲಿ, ಭಾರತದ ಮಾಜಿ ನಾಯಕ ಮತ್ತು ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ಶಾಸ್ತ್ರಿ 1985 ರ ವಿಶ್ವ ಚಾಂಪಿಯನ್​ಶಿಪ್​ ಸರಣಿ ಕಪ್‌ನಲ್ಲಿ ಮ್ಯಾನ್ ಆಫ್ ದಿ ಸೀರೀಸ್ ಆಗಿದ್ದರು.

1992ರ ವಿಶ್ವಕಪ್‌ನಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ ಕಾರಣ ಅವರನ್ನು ಟೀಕಿಸಲಾಯಿತು. ನಂತರ ಅವರು 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾಕ್ಕೆ ತರಬೇತುದಾರರಾಗಿ ಭೇಟಿ ನೀಡಿದರು, ಎರಡೂ ಬಾರಿಯೂ ಭಾರತ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆದ್ದಿದೆ.

ಅವರನ್ನು 2017 ರಲ್ಲಿ ಕೋಚ್ ಆಗಿ ನೇಮಿಸಲಾಯಿತು. ಇದಕ್ಕೂ ಮುನ್ನ ಅವರು 2014 ರಲ್ಲಿ ತಂಡದ ನಿರ್ದೇಶಕರಾಗಿದ್ದರು. ರವಿಶಾಸ್ತ್ರಿ ತರಬೇತುದಾರರಾದಾಗ, ಭಾರತವು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತು ಮತ್ತು ಅವರ ಅಧಿಕಾರಾವಧಿಯನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ನಂಬಲಾಗಿತ್ತು. ಆದರೆ, 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ರವಿಶಾಸ್ತ್ರಿ ಕೋಚಿಂಗ್ ಅಡಿ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದ ನಂತರ ಮತ್ತು 2019 ರ ವಿಶ್ವಕಪ್‌ನಲ್ಲಿ ಭಾರತದ ಸೆಮಿಫೈನಲ್ ತಲುಪಿದ ನಂತರ ಅವರ ಅಧಿಕಾರಾವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲಾಯಿತು.

ravi shastri
ರವಿಶಾಸ್ತ್ರಿ

ತಂಡದಲ್ಲಿ, ಆಟಗಾರರು ಶಾಸ್ತ್ರಿ ಅವರನ್ನು ತರಬೇತುದಾರ ಎನ್ನುವುದಕ್ಕಿಂತ ಹೆಚ್ಚಾಗಿ ಸ್ನೇಹಿತರೆಂದು ಪರಿಗಣಿಸುತ್ತಾರೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ಎರಡರಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದ ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಶಾಸ್ತ್ರಿ ಅವರ ಕೊಡುಗೆಯನ್ನು ಒಪ್ಪಿಕೊಂಡಿದ್ದಾರೆ.

ನಾಲ್ಕನೇ ಟೆಸ್ಟ್ ನಂತರ ಮಾತನಾಡಿದ್ದ ರಹಾನೆ, "ಅವರ ಕೊಡುಗೆ ಮಹತ್ವದ್ದಾಗಿದೆ. ವಿಶೇಷವಾಗಿ ಅವರು ಈ ಸರಣಿಯಲ್ಲಿ ಮಾತ್ರವಲ್ಲ, 2018-19ರಲ್ಲಿ ನಾವು ಇಲ್ಲಿ ಸರಣಿಯನ್ನು ಗೆದ್ದಾಗ ಎಲ್ಲರನ್ನೂ ನಿಭಾಯಿಸಿದ ಮತ್ತು ಬೆಂಬಲಿಸಿದ ರೀತಿ ಉತ್ತಮವಾಗಿತ್ತು. ನಾನು ಅವರಿಂದ ವೈಯಕ್ತಿಕವಾಗಿ ಬಹಳಷ್ಟು ಕಲಿತಿದ್ದೇನೆ. ಅವರು ಸ್ವತಃ ಭಾರತೀಯ ನಾಯಕರಾಗಿದ್ದರು. ಅವರು ತಂಡವನ್ನು ಬೆಂಬಲಿಸಿದ ರೀತಿ, ನನ್ನ ಕೆಲಸವನ್ನು ಸುಲಭಗೊಳಿಸಿತು" ಎಂದಿದ್ದರು.

ಶಾಸ್ತ್ರಿ ಅವರೊಂದಿಗೆ ಸಾಕಷ್ಟು ಆಡಿದ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್​ ಸರ್ಕಾರ್​ , ಶಾಸ್ತ್ರಿ ಅವರ ಶ್ರೇಷ್ಠ ಗುಣವೆಂದರೆ ಆಟಗಾರರನ್ನು ಹೇಗೆ ಪ್ರೇರೇಪಿಸುವುದು ಎಂದು ಅವರಿಗೆ ತಿಳಿದಿದೆ ಎಂದಿದ್ದಾರೆ. "ಶಾಸ್ತ್ರಿ ಅವರ ಉತ್ತಮ ಗುಣವೆಂದರೆ ಅವರು ಯಾವಾಗಲೂ ಆಟಗಾರರಿಗೆ ಸ್ಫೂರ್ತಿ ನೀಡುತ್ತಾರೆ. ನೀವು ಆಟಗಾರರನ್ನು ಮಾನಸಿಕವಾಗಿ ಸಿದ್ಧಪಡಿಸುತ್ತೀರಿ ಮತ್ತು ಅವರಿಗೆ ಸಕಾರಾತ್ಮಕ ಭಾವನೆ ಮೂಡಿಸುತ್ತೀರಿ ಎಂದರೆ ಅದು ವ್ಯತ್ಯಾಸವನ್ನುಂಟು ಮಾಡುತ್ತದೆ. ಅವರು ಆಟಗಾರರನ್ನು ಪ್ರೇರೇಪಿಸುತ್ತಾರೆ, ಅವರನ್ನು ಮಾನಸಿಕವಾಗಿ ಸಕಾರಾತ್ಮಕವಾಗಿರಿಸಿಕೊಳ್ಳುವಂತೆ ಪ್ರೇರೇಪಿಸುತ್ತಾರೆ" ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.